ಸ್ಯಾಂಡಲ್‌ವುಡ್‌ ನಿರ್ಮಾಪಕ ಕೆ.ಮಂಜು ಮಗನ BMW ಕಾರು ಅಪಘಾತ; ಆಗಿದ್ದೇನು?

public wpadmin

ಸ್ಯಾಂಡಲ್‌ವುಡ್‌ ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ಐಷಾರಾಮಿಗೆ ಕಾರು ಅಪಘಾತವಾಗಿದೆ. ವಿಷ್ಣುಪ್ರಿಯ ಸಿನಿಮಾ ಪ್ರಮೋಷನ್‌ಗಾಗಿ ಶ್ರೇಯಸ್ ಮಂಜು ದಾವಣಗೆರೆಗೆ ತೆರಳುತ್ತಿದ್ದ ವೇಳೆ ಈ ಆ್ಯಕ್ಸಿಡೆಂಟ್ ಸಂಭವಿಸಿದೆ.

ಶ್ರೇಯಸ್ ಮಂಜು ದಾವಣಗೆರೆಗೆ ತೆರಳುತ್ತಿದ್ದ ವೇಳೆ ಬಿಎಂಡಬ್ಲ್ಯೂ ಕಾರಿಗೆ ಡ್ಯಾಮೇಜ್ ಆಗಿದೆ. ಶ್ರೇಯಸ್ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಲಾರಿ ಡಿಕ್ಕಿಯಾದ ಹಿನ್ನೆಲೆಯ BMW ಕಾರಿನ ಒಂದು ಭಾಗ ನಜ್ಜುಗುಜ್ಜಾಗಿದೆ.

ಶ್ರೇಯಸ್ ಮಂಜು ಅಭಿನಯದ ವಿಷ್ಣುಪ್ರಿಯ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಶ್ರೇಯಸ್ ಮಂಜು ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ರು. ಈ ಮಧ್ಯೆ ಕಾರಿಗೆ ಲಾರಿ ಡಿಕ್ಕಿಯಾಗಿ, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಿಎಂಡಬ್ಲ್ಯೂ ಕಾರಿಗೆ ಆ್ಯಕ್ಸಿಡೆಂಟ್‌‌ ಆಗಿರುವುದಕ್ಕೆ ನಿರ್ಮಾಪಕ ಕೆ. ಮಂಜು ಪುತ್ರ ಸ್ಥಳದಲ್ಲೇ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾರಿಗೂ ತೊಂದರೆ ಆಗಿಲ್ಲ. ಬಿಎಂಡಬ್ಲ್ಯೂ ಕಾರಿಗೆ ಮಾತ್ರ ಡ್ಯಾಮೇಜ್ ಆಗಿದೆ.

Share This Article
Leave a comment