ಸ್ಟೈಲೀಶ್ ಆದ ಸಂಜನಾ ಬುರ್ಲಿ ಲುಕ್‌ಗೆ ಪಡ್ಡೆಹುಡುಗರು ಫಿದಾ

public wpadmin

‘ಪುಟ್ಟಕ್ಕನ ಮಕ್ಕಳು’ ಸೀರಿಯಲ್ ಖ್ಯಾತಿಯ ಸಂಜನಾ ಬುರ್ಲಿ (Sanjana Burli) ಅವರು ಬೋಲ್ಡ್ ಅವತಾರದಲ್ಲಿ ಕಾಣಿಕೊಂಡಿದ್ದಾರೆ. ನಟಿಯ ನಯಾ ಲುಕ್ ನೋಡಿ ಪಡ್ಡೆಹುಡುಗರು ಫಿದಾ ಆಗಿದ್ದಾರೆ.

ಕಂಠಿ ಮನದರಸಿ ಸ್ನೇಹಾ ಪಾತ್ರಕ್ಕೆ ಗುಡ್ ಬೈ ಹೇಳಿದ್ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಸಂಜನಾ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಸದಾ ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆಯೋ ಸಂಜನಾ ಇದೀಗ ಪಿಂಕ್ ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣ ಸ್ಕರ್ಟ್ ಧರಿಸಿ ಮಿಂಚಿದ್ದಾರೆ. ನಟಿಯ ಬೋಲ್ಡ್ ಪೋಸ್‌ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

ಇತ್ತೀಚೆಗೆ ಸಂಜನಾ ಅವರು ಡಿಸಿ ಸ್ನೇಹಾ ಪಾತ್ರಕ್ಕೆ ಗುಡ್ ಬೈ ಹೇಳಿರೋದು ಫ್ಯಾನ್ಸ್‌ಗೆ ಬೇಸರ ಮೂಡಿಸಿದೆ. ಆದರೆ ಸೀರಿಯಲ್‌ನಲ್ಲಿ ಅವರ ಪಾತ್ರದ ಸಾವಿನ ಮೂಲಕ ಅಂತ್ಯವಾಗಿದೆ. ಸಂಜನಾ ಮತ್ತೆ ಸ್ನೇಹಾ ಪಾತ್ರದಲ್ಲಿ ನಟಿಸಬೇಕು ಎಂದು ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಸ್ನೇಹಾ ಪಾತ್ರದಲ್ಲಿ ಸಂಜನಾ ಜೀವಿಸಿದ್ದರು. ಅವರ ಪಾತ್ರ ಅಂತ್ಯವಾದ್ಮೇಲೆ ನಟಿಯ ಭಾವನ್ಮಾತಕ ಪೋಸ್ಟ್ ನೋಡಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. 

Share This Article
Leave a comment