ಬಿಗ್ ಬಾಸ್ ಸುದೀಪ್ ಮನೆಯಿಂದ ಹೊರಟ್ರೇ? ಭಾನುವಾರದ ಎಪಿಸೋಡ್‌ನಲ್ಲಿ ಇಂತಹ ಒಂದು ಹಿಂಟ್ ಕೊಟಂತೆ ಇದೆ. ಕಾರಣ, ಮುಂದಿನ ದಿನಗಳಲ್ಲಿ ನಿರೀಕ್ಷೆ ಮಾಡದೇ ಇರೋದು ಆಗಬಹದು ಅನ್ನೋ ಅರ್ಥದಲ್ಲಿಯೇ ಸುದೀಪ್ ಹೇಳಿಕೊಂಡಿದ್ದಾರೆ. ಆದರೆ, ಬಿಗ್ ಬಾಸ್ ಸರಣಿಯಲ್ಲಿ ಸುದೀಪ್ ಬರೋಬ್ಬರಿ 10 ವರ್ಷ ಪೂರೈಸಿದ್ದಾರೆ. ಬಿಗ್ ಬಾಸ್ ಇತಿಹಾಸದಲ್ಲಿಯೇ ಇಷ್ಟೊಂದು ವರ್ಷ ಹೋಸ್ಟ್ ಆಗಿರೋರು ಯಾರೂ ಇಲ್ಲ. ಎಲ್ಲ ಭಾಷೆಯ ಬಿಗ್ ಬಾಸ್‌ನಲ್ಲಿ ಹೋಸ್ಟ್ ಚೇಂಜ್ ಆಗಿದ್ದಾರೆ. ಕನ್ನಡದಲ್ಲಿ ಸುದೀಪ್ ಒಬ್ಬರೇ ಮುಂದುವರೆದಿದ್ದಾರೆ. ಆದರೆ, ಬಿಗ್ ಬಾಸ್ ಸರಣಿಯ ಆರಂಭದಲ್ಲಿಯೇ ಒಂದು ಮಾತು ಕೇಳಿ ಬಂದಿತ್ತು. ಕಿಚ್ಚ ಸುದೀಪ್ ಬಿಗ್ ಬಾಸ್ ಸೀಸನ್ 10 ವರೆಗೂ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ ಅನ್ನೋದೇ ಆ ಸುದ್ದಿ ಆಗಿದೆ. ಈಗ 11 ನೇ ಸೀಸನ್ ಬೋನಸ್ಸಾ ಅನ್ನುವ ಮಾತು ಕೂಡ ಕೇಳಿ ಬರ್ತಿದೆ.
ಕನ್ನಡದ ಬಿಗ್ ಬಾಸ್ ಶುರು ಆದಾಗ ಒಂದು ಮಾತು ಕೇಳಿ ಬಂದಿತ್ತು. ಕಿಚ್ಚ ಸುದೀಪ್ ಕನ್ನಡದ 10 ಸೀಸನ್‌ಗಳನ್ನ ಹೋಸ್ಟ್ ಮಾಡ್ತಾರೆ ಅನ್ನೋದೇ ಆಗಿತ್ತು. ಅದಾದ್ಮೇಲೆ ಬಿಗ್ ಬಾಸ್ ಕನ್ನಡದಲ್ಲಿ ಇರ್ತದೋ ಇಲ್ವೋ ಅನ್ನುವ ಅನುಮಾನವೂ ಇತ್ತು. ಆದರೆ, ಇಡೀ ಒಟ್ಟು 10 ಸೀಸನ್‌ಗಳಲ್ಲಿ ಸುದೀಪ್ ತಮ್ಮದೇ ಛಾಪು ಮೂಡಿಸಿದರು.
ಇದಿರಂದ ಕನ್ನಡ ಬಿಗ್ ಬಾಸ್ ಖದರ್ ಚೇಂಜ್ ಆಗಿತ್ತು. ವಾರದ ಎರಡು ದಿನ ಮಾತ್ರ ಕಿಚ್ಚ ಸುದೀಪ್ ದೊಡ್ಮನೆಗೆ ಬರ್ತಿದ್ದರು. ತಮ್ಮ ಪಂಚಾಯತಿ ಮಡಿ ಹೊರಟು ಹೋಗುತ್ತಿದ್ದರು. ಆದರೂ, ಕಿಚ್ಚ ಸುದೀಪ್ ಇಲ್ಲದೇ ಬಿಗ್ ಬಾಸ್ ಏನೂ ಅಲ್ಲ ಅನ್ನುವ ಮಟ್ಟಿಗೆ ಸುದೀಪ್ ತಮ್ಮ ಛಾಪು ಮೂಡಿಸಿದ್ದಾರೆ.
ಬಿಗ್ ಬಾಸ್ ಹೋಸ್ಟ್ ಸುದೀಪ್ ಕೇವಲ 10 ಸೀಸನ್ ಮಾತ್ರ ಮಾಡ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ಅಗ್ರಿಮೆಂಟ್ ಅಲ್ಲಿವರೆಗೆ ಮಾತ್ರ ಆಗಿತ್ತು ಅನ್ನೋದು ಆಗಲೇ ಕೇಳಿ ಬಂದಿತ್ತು. ಅದೇ ಕಾರಣಕ್ಕೇನೆ ಬಿಗ್ ಬಾಸ್ ಸೀಸನ್-11 ಮಾಡ್ತಾರಾ ಮಾಡಲ್ವಾ ಅನ್ನೋ ಪ್ರಶ್ನೆ ಕೂಡ ಇತ್ತು.
ಆದರೆ, ಬಿಗ್ ಬಾಸ್ ಸೀಸನ್-11 ನಾನೇ ಮಾಡ್ತೀನಿ ಅನ್ನೋ ಅರ್ಥದಲ್ಲಿಯೇ ಸುದೀಪ್ ಹೇಳಿಕೊಂಡರು. ತಮ್ಮ ಜನ್ಮ ದಿನಕ್ಕೆ ಬಿಗ್ ಬಾಸ್ ಮಾಡೋದು ಡೌಟು ಅನ್ನೋ ಅರ್ಥದಲ್ಲಿಯೇ ಹೇಳಿಕೊಂಡಿದ್ದರು. ಆದರೆ, ಬಿಗ್ ಬಾಸ್ ಸೀಸನ್ 11 ರ ಪ್ರೆಸ್ ಮೀಟ್‌ಗೆ ಬಂದು ತಮ್ಮ ಇರುವಿಕೆಯನ್ನ ಖಚಿತಪಡಿಸಿದ್ದರು.
ಹೌದು, ಈ ಒಂದು ಪ್ರಶ್ನೆ ಕೂಡ ಈಗ ಮೂಡಿದೆ. ಬಿಗ್ ಬಾಸ್ ಸೀಸನ್ 11 ಬೋನಸ್ ಅನ್ನೋ ಅರ್ಥದಲ್ಲಿಯೇ ಸುದ್ದಿಗಳು ಕೇಳಿ ಬರುತ್ತಿವೆ. ಈ ಒಂದು ಸೀಸನ್ ಆದ್ಮೇಲೆ ಸುದೀಪ್ ಜಾಗಕ್ಕೆ ಬೇರೆ ಹೋಸ್ಟ್ ಬರ್ತಾರೆ ಅನ್ನುವ ಅನುಮಾನ ಕೂಡ ಶುರು ಆಗಿದೆ.
ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಏನೂ ಹೊರ ಬಂದಿಲ್ಲ. ಆದರೆ, ಸುದೀಪ್ 11 ನೇ ಸೀಸನ್‌ಗೆ ಯಾವುದೇ ಅಗ್ರಿಮೆಂಟ್ ಆದಂತೆ ಇಲ್ಲ ಅನ್ನೋ ಅರ್ಥದಲ್ಲಿಯೇ ಸದ್ಯ ಹತ್ತು ಹಲವು ಸುದ್ದಿ ವೈರಲ್ ಆಗುತ್ತಿವೆ ಅಂತಲೂ ಹೇಳಬಹುದು.