ಮುಡಾ ಸಂಕಷ್ಟದಲ್ಲಿ ಸಿಲಿಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ, ತಮಿಳು ನಟ ವಿಜಯ ಸೇತುಪತಿ ನಟನೆಯ ಲೀಡರ್ ರಾಮಯ್ಯ ಸಿನಿಮಾದ ಚಿತ್ರೀಕರಣವು ಹಗರಣದ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಲೀಡರ್ ರಾಮಯ್ಯ ಸಿನಿಮಾವನ್ನು ಬೆಂಗಳೂರು ಮೂಲದ ಸತ್ಯರತ್ನಂ ಅವರು ನಿರ್ದೇಶಿಸುತ್ತಿದ್ದು, ಗಂಗಾವತಿ ಮೂಲದ ಹಯ್ಯಾತ್ ಅವರ ಫಿರ್ ನಿರ್ಮಾಣ ಸಂಸ್ಥೆಯು ಚಿತ್ರವನ್ನು ನಿರ್ಮಿಸುತ್ತಿದ್ದು, ಈ ವಿಚಾರದಲ್ಲೀಗ ಕೇಂದ್ರದ ಜಾರಿ ನಿರ್ದೇಶನಾಲಯ ಕೂಡ ಕೇಸ್ ದಾಖಲಿಸಿದೆ. ಕೇಂದ್ರೀಯ ತನಿಖಾ ತನಿಖಾ ಸಂಸ್ಥೆಯೊಂದು ಈ ಕೇಸ್ ನಲ್ಲಿ ತನಿಖೆ ನಡೆಸುತ್ತಿರುವುದರಿಂದ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಚಿತ್ರತಂಡ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಮುಡಾ ಪ್ರಕರಣವು ಬಿಗಿಯಾಗುತ್ತಿರುವುದರಿಂದ, ಲೀಡರ್ ರಾಮಯ್ಯ ಚಿತ್ರದ ಬಗ್ಗೆ ನೆಗೆಟಿವ್ ಮಾತುಗಳು, ತಮಿಳು ಚಿತ್ರರಂಗದಲ್ಲಿ ಕೇಳಿಬರುತ್ತಿದ್ದವು, ಇದರಿಂದ ಚಿತ್ರಿಕರಣವನ್ನು ಸ್ಥಗಿತಗೊಳಿಸಿದ್ದು, ಪರಿಸ್ಥಿತಿ ತಿಳಿಯಾದ ಮೇಲೆ ಚಿತ್ರೀಕರಣವನ್ನು ಮರು ಪ್ರಾರಂಭಿಸಲು ಚಿತ್ರ ತಂಡ ನಿರ್ಧರಿಸಿದೆ.
ಸೇತುಪತಿಯ ಡೇಟ್ಸ್ ಸಮಸ್ಯೆ
ಸದ್ಯ ಮೈಸೂರು ಭಾಗದಲ್ಲಿ ಸಿಎಂ ಸಿದ್ದು ಅವರ ಬಾಲ್ಯ ಹಾಗೂ ಶಿಕ್ಷಣ ಸೇರಿ ಹಲವು ಸನ್ನಿವೇಶಗಳ ಚಿತ್ರಿಕರಣ ಪೂರ್ಣವಾಗಿತ್ತು. ಮೂಡಾ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆ ಎರಡನೇ ಭಾಗದ ಸನ್ನಿವೇಶಗಳ ಚಿತ್ರಿಕರಣಕ್ಕೆ ಚಿತ್ರ ತಂಡ ಬ್ರೇಕ್ ಹಾಕಿದೆ. ಆದರೆ, ಇದೇ ಸಂದರ್ಭದಲ್ಲಿ ಚಿತ್ರೀಕರಣ ಸ್ಥಗಿತಕ್ಕೆ ಚಿತ್ರದಲ್ಲಿ ಸಿದ್ದರಾಮಯ್ಯನವರ ಪಾತ್ರ ಮಾಡುತ್ತಿರುವ ತಮಿಳು ನಟ ವಿಜಯ್ ಸೇತುಪತಿಯವರ ಡೇಟ್ಸ್ ಸಮಸ್ಯೆಯೂ ಕಾರಣವಾಗಿದೆ ಎನ್ನಲಾಗಿದೆ. ಸೇತುಪತಿಯವರು ಸದ್ಯಕ್ಕೆ ಹಲವಾರು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ಹಿಂದಿಯಲ್ಲೂ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.