ಬೆಂಗಳೂರು: ಸಿದ್ದರಾಮಯ್ಯ ಇರುವವರೆಗೂ ಸಿಎಂ ಬದಲಾವಣೆ ಚರ್ಚೆಯೇ ಇಲ್ಲ ಎಂದು ಸಚಿವ ಮಹದೇವಪ್ಪ ತಿಳಿಸಿದ್ದಾರೆ.
ಉಪಚುನಾವಣೆ ಫಲಿತಾಂಶ ಸಿಎಂ ಸ್ಥಾನದ ಮೇಲೆ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 136 ಸ್ಥಾನ ನಾವು ಇದ್ದೇವೆ. ಒಂದು ಸ್ಥಾನಕ್ಕೆ ಈಗ ಚುನಾವಣೆ ನಡೆಯುತ್ತಿದೆ. ಒಂದು ಸ್ಥಾನದಿಂದ ಸಿಎಂ ಸ್ಥಾನಕ್ಕೆ ಯಾಕೆ ಪರಿಣಾಮ ಬೀರುತ್ತದೆ. ಮುಖ್ಯಮಂತ್ರಿ ಸ್ಥಾನ ಯಾಕೆ ಅಲ್ಲಾಡುತ್ತದೆ. ಕೋಳಿವಾಡ ಹೇಳಿಕೆ ಅವರ ವೈಯಕ್ತಿಕ. ಹರಿಯಾಣ ಸೋಲಿಗೆ ಬೇರೆ ಕಾರಣ ಇದೆ. ಸಿಎಂ ಬದಲಾವಣೆ ಚರ್ಚೆಯೇ ಇಲ್ಲ ಎಂದರು.
ಸಿದ್ದರಾಮಯ್ಯ ಇರುವವರೆಗೂ ಸಿಎಂ ಬದಲಾವಣೆಯ ಯಾವುದೇ ಮಾತು ಇಲ್ಲ. ಕಾಂಗ್ರೆಸ್ ಮುಂದೆ ಸಿಎಂ ಬದಲಾವಣೆ ವಿಷಯ ಇಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅವರೇ ಮುಂದುವರೆಯತ್ತಾರೆ ಎಂದು ಸ್ಪಷ್ಟಪಡಿಸಿದರು.