ಸದ್ಯದಲ್ಲೇ ಕಾಣಲಿದ್ದಾನೆ ಪುಟ್ಟ ಚಂದ್ರಮ! 56 ದಿನ ಎರಡೆರಡು ಚಂದ್ರ ದರ್ಶನ!

public wpadmin

ಆಗಸದಲ್ಲಿ ಸದ್ಯದಲ್ಲೇ ಪುಟ್ಟ ಚಂದಮಾಮ ಕಾಣಲಿದ್ದಾನೆ. ಕೆಲವೇ ದಿನಗಳಲ್ಲಿ ಇಂತಹದೊಂದು ಅಪರೂಪದ ಘಟನೆ ನಡೆಯಲಿದೆ.

ಒಂದು ಸಣ್ಣ ಕ್ಷುದ್ರಗ್ರಹವು ‘ಕಿರಿಯ ಚಂದ್ರ’ನಂತೆ ಭೂಮಿಯನ್ನು ಸುತ್ತಲಿದೆ. ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಈ ಕಿರಿಯ ಚಂದ್ರಮ ಗೋಚರಿಸಲಿದ್ದಾನೆ.

ಭೂಮಿಯು ದೊಡ್ಡ ಚಂದ್ರನ ಜತೆಗೆ ಮತ್ತೊಂದು ಸಣ್ಣ ಚಂದ್ರನನ್ನು ಪಡೆಯಲಿದೆ. ನಾವು ಈ ತಿಂಗಳಾಂತ್ಯಕ್ಕೆ ಒಂದು ಸಣ್ಣ ಚಂದ್ರನನ್ನು ಭೂಮಿಯಿಂದ ನೋಡಬಹುದು. ಒಂದು ಕ್ಷುದ್ರಗ್ರಹವನ್ನು ‘ಕಿರಿಯ ಚಂದ್ರ’ನಂತೆ ನೋಡಬಹುದು.

ಇದು ಗಾತ್ರದಲ್ಲಿ ಸಣ್ಣದು. ಆದರೆ ಭೂಮಿಯ ಸುತ್ತ ಈ ಕಿರಿಯ ಚಂದ್ರ ಸುತ್ತಲಿದ್ದಾನೆ. ಇದರ ಗಾತ್ರ 10 ಡಯಾಮೀಟರ್ ಅಂದರೆ ಸರಿಸುಮಾರು 33 ಅಡಿ. ಸತತ ಎರಡು ತಿಂಗಳು ಈ ಕ್ಷುದ್ರಗ್ರಹವು ಭೂಮಿಯನ್ನು ಸುತ್ತಲಿದೆ.

ಸೆಪ್ಟೆಂಬರ್ 29ರಂದು ಈ ಅಪರೂಪದ ವಿಸ್ಮಯ ಮೊದಲ ಬಾರಿಗೆ ಆಗಸದಲ್ಲಿ ಗೋಚರವಾಗಲಿದೆ. ಸೆಪ್ಟೆಂಬರ್ 29 ರಿಂದ ನವೆಂಬರ್ 14ರವರೆಗೆ ಈ ಕೌತುಕ ಕಾಣಲಿದೆ. ಒಟ್ಟು 56 ದಿನಗಳ ಕಾಲ ಆಗಸದಲ್ಲಿ ಕಿರಿಯ ಚಂದ್ರ ಅಂದರೆ ಸಣ್ಣ ಕ್ಷುದ್ರಗ್ರಹ ಭೂಮಿಯನ್ನು ಸುತ್ತಲಿದೆ.

2024 PT5 ಕ್ಷುದ್ರ ಗ್ರಹವನ್ನು ಮ್ಯಾಡ್ರಿಡ್‌ನ ಕಂಪ್ಲುಟೆನ್ಸಿ ವಿಶ್ವವಿದ್ಯಾಲಯದ ಸಂಶೋಧನಾ ವಿಜ್ಞಾನಿಗಳಾದ ಕಾರ್ಲೋಸ್ ಡೇ ಲಾ ಫ್ಯುಯೆಂಟೆ ಮಾರ್ಕೋಸ್ ಹಾಗೂ ರೌಲ್ ಡೇ ಲಾ ಫ್ಯುಯೆಂಟ್ ಮಾರ್ಕೋಸ್‌ನ್ನು ಆಗಸ್ಟ್ 7 ರಂದು ಪತ್ತೆ ಹಚ್ಚಿದ್ದಾರೆ.

ಕ್ಷುದ್ರಗ್ರಹ ಟೆರೆಸ್ಟ್ರಿಯಲ್-ಇಂಪ್ಯಾಕ್ಟ್ ಲಾಸ್ಟ್ ಅಲರ್ಟ್ ಸಿಸ್ಟಮ್ (ATLAS) ಮೂಲಕ NASA ಈ ಮಾಹಿತಿ ನೀಡಿದೆ.

ಈ ಕುರಿತು ಅಮೆರಿಕನ್ ಆ್ಯಸ್ಟ್ರೊನಾಮಿಕಲ್ ಸೊಸೈಟಿ ಅಧ್ಯಯನ ಕುತೂಹಲಕರ ಮಾಹಿತಿ ತೆರೆದಿಡುತ್ತಿದೆ. 56 ದಿನಗಳ ಅವಧಿಯಲ್ಲಿ ಈ ಕಿರಿಯ ಚಂದ್ರ ಭೂಮಿ ಸುತ್ತ ಸುತ್ತಲಿದೆ. ಆದರೆ ಕಕ್ಷೆಯನ್ನು ಪೂರ್ಣಗೊಳಿಸುವುದಿಲ್ಲ.

ಭೂಮಿಯ ಸುತ್ತ 56 ದಿನಗಳ ಕಾಲ ಎರಡು ಚಂದ್ರಮರು ಗೋಚರಿಸಲಿದ್ದಾರೆ. ಒಂದು ಪ್ರತಿ ದಿನ ನಮಗೆ ಕಾಣಿಸುವ ಚಂದಿರ. ಮತ್ತೊಂದು ಕಿರಿಯ ಚಂದ್ರ. ಹಾಗಂತ ಇದು ಯಾವುದೇ ಗ್ರಹದ ತುಣುಕಲ್ಲ. ಕಕ್ಷೆಯಲ್ಲಿ ಸುತ್ತುತ್ತಿರುವ ಭೂಮಿಗೆ ಹತ್ತಿರವಾಗಿರುವ ಕ್ಷುದ್ರ ಗ್ರಹ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Share This Article
Leave a comment