ಶಿಗ್ಗಾಂವಿ ಉಪಚುನಾವಣೆಯ ಮತದಾನಕ್ಕೆ ಗೈರಾದ ಬಿಗ್​ಬಾಸ್​ ಹನುಮಂತ

public wpadmin

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವೀಪ್ ರಾಯಭಾರಿಯಾಗಿದ್ದ ಸವಣೂರ ತಾಲೂಕಿನ ಚಿಲ್ಲೂರ ಬಡ್ನಿ ನಿವಾಸಿ ಹನುಮಂತ ಲಮಾಣಿ ಶಿಗ್ಗಾಂವಿ ಉಪಚುನಾವಣೆಯ ಮತದಾನಕ್ಕೆ ಗೈರಾಗಿದ್ದಾರೆ‌.

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11ಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಗಾಯಕ ಹನುಮಂತ ಲಮಾಣಿ ಈ ಬಾರಿಯ ಶಿಗ್ಗಾಂವಿ ಉಪಚುನಾವಣೆಯ ಮತದಾನಕ್ಕೆ ಗೈರಾಗಿದ್ದಾರೆ‌. ಈಗಾಗಲೇ ಹನುಮಂತ ಅವರ ತಂದೆ-ತಾಯಿ, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ‌ಹನುಮಂತ ಅವರು ಚುನಾವಣೆ ರಾಯಭಾರಿ ಆಗಿದ್ದರು. ಎರಡೂ ಚುನಾವಣೆಯಲ್ಲಿ ಹನುಮಂತ ಅವರು ತಮ್ಮ ಗ್ರಾಮ ಚಿಲ್ಲೂರ ಬಡ್ನಿಯಲ್ಲಿರುವ ಮತಗಟ್ಟೆಗೆ ಬಂದು ಮತದಾನ ಮಾಡಿದ್ದರು.ಆದರೆ ಈ ಬಾರಿ ಹನುಮಂತ ‘ಬಿಗ್‌ಬಾಸ್’ ರಿಯಾಲಿಟಿ ಶೋ‌ ಮನೆಯಲ್ಲಿದ್ದಾರೆ. ಅವರು ಮತದಾನ ಮಾಡಲು ಬಂದಿಲ್ಲ. ತಂದೆ ಮೇಘಪ್ಪ, ತಾಯಿ ಶೀಲವ್ವ ಹಾಗೂ ಸಹೋದರಿ ಅವರು ಮತಗಟ್ಟೆಗೆ ಬಂದು ಮತದಾನ ಮಾಡಿದರು.

Share This Article
Leave a comment