ನಟಿ ಸಮಂತಾ ಸದ್ಯ ‘ಸಿಟಾಡೆಲ್ ಹನಿ ಬನಿ’ ಸಕ್ಸಸ್ ಖುಷಿಯಲ್ಲಿದ್ದಾರೆ. ವರುಣ್ ಧವನ್ ಜೊತೆ ನಟಿಸಿದ ವೆಬ್ ಸಿರೀಸ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ವರುಣ್ ಜೊತೆಗಿನ ಲಿಪ್‌ಲಾಕ್ ದೃಶ್ಯಗಳಲ್ಲಿ ಸಮಂತಾರನ್ನು ನೋಡಿ ಅಭಿಮಾನಿಗಳು ದಂಗಾಗಿದ್ದಾರೆ.
ಸೌತ್ ಸಿನಿಮಾಗಳಲ್ಲಿ ಗ್ಲ್ಯಾಮರಸ್ ಪಾತ್ರಗಳ ಮೂಲಕ ಸಮಂತಾ ಸೈ ಎನಿಸಿಕೊಂಡಿದ್ದರು. ಇದೀಗ ಬಾಲಿವುಡ್‌ನ ‘ಸಿಟಾಡೆಲ್ ಹನಿ ಬನಿ’ ವೆಬ್ ಸಿರೀಸ್‌ನಲ್ಲಿ ನಟಿ ಸಖತ್ ಹಾಟ್ ಅವತಾರ ತಾಳಿದ್ದಾರೆ. ವರುಣ್ ಜೊತೆ ಬೋಲ್ಡ್ ದೃಶ್ಯಗಳಲ್ಲಿ ನಟಿಸಿರುವ ಸ್ಯಾಮ್ ಅವತಾರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
https://twitter.com/BadassBebo/status/1854395763465564242
ಇದು ನಮ್ಮ ನೆಚ್ಚಿನ ನಟಿನಾ? ಎಂದು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ರೊಮ್ಯಾನ್ಸ್ ಮಿತಿ ಮೀರಿದೆ ಎಂದು ನೆಟ್ಟಿಗರು ಕುಟುಕಿದ್ದಾರೆ. ಇನ್ನೂ ಕೆಲವರು ಸ್ಯಾಮ್ ಯಾವ ರೋಲ್ ಕೊಟ್ರು ಸಖತ್ ಆಗಿ ನಟಿಸ್ತಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
https://twitter.com/BadassBebo/status/1854395763465564242
ಇನ್ನೂ ಹಾಲಿವುಡ್ ವರ್ಷನ್‌ನಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದರು. ಭಾರತೀಯ ವರ್ಷನ್‌ಗೆ ತಕ್ಕಂತೆ ‘ಸಿಟಾಡೆಲ್ ಹನಿ ಬನಿ’ ಚಿತ್ರೀಕರಣ ಮಾಡಿದ್ದಾರೆ. ಈ ಮೂಲಕ ಮೊದಲ ಬಾರಿಗೆ ವರುಣ್ (Varun Dhawan) ಮತ್ತು ಸಮಂತಾ ಜೊತೆಯಾಗಿ ನಟಿಸಿದ್ದಾರೆ. ಇದನ್ನೂ ರಾಜ್ ಮತ್ತು ಡಿಕೆ ನಿರ್ದೇಶನ ಮಾಡಿದ್ದಾರೆ.