ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ಗೆ ಇಂದು ಬರ್ತ್ಡೇ ಸಂಭ್ರಮ. ಕಾಟೇರ ಡೈರೆಕ್ಟರ್ಗೆ ಪತ್ನಿ ಸೋನಲ್ ಮೊಂಥೇರೋ ಸ್ವೀಟ್ ಆಗಿ ವಿಶ್ ಮಾಡಿದ್ದಾರೆ. ಹನಿಮೂನ್ ಫೋಟೋಸ್ ಶೇರ್ ಮಾಡಿದ ಬರ್ತ್ಡೇ ಶುಭಾಶಯಗಳನ್ನು ತಿಳಿಸಿದ್ದಾರೆ ನಟಿ.
ಜಗತ್ತಿನ ಅತಿ ಹೆಚ್ಚು ಪ್ರೀತಿಸುವ, ಕಾಳಜಿ ತೋರಿಸುವ, ಕರುಣೆಯ ಮನಸಿರುವಂತಹ ಗಂಡನಿಗೆ ಬರ್ತ್ಡೇ ಶುಭಾಶಯಗಳು. ನನ್ನನ್ನು ಪ್ರತಿದಿನ ಪ್ರೇರೇಪಿಸುವ ಹಾಗೂ ನಾನು ಜೊತೆಯಾಗಿ ನಡೆಯಲು ಬಯಸುವ ವ್ಯಕ್ತಿಗೆ ಜನ್ಮದಿನದ ಶುಭಾಶಯ ಎಂದು ನಟಿ ವಿಶ್ ಮಾಡಿದ್ದಾರೆ.
ನಿಮಗೆ ಹೆಚ್ಚು ಗೆಲುಗು ಮತ್ತು ಖುಷಿ ಸಿಗಲಿ. ಐ ಲವ್ ಯೂ ಎಂದು ಸೋನಲ್ ಮೊಂಥೇರೋ ಅವರು ಹಾರ್ಟ್ ಎಮೋಜಿಗಳನ್ನು ಹಾಕಿ ಗಂಡನಿಗೆ ವಿಶೇವಾಗಿ ವಿಶ್ ಮಾಡಿದ್ದಾರೆ. ಇದಕ್ಕೆ ತರುಣ್ ಸುಧೀರ್ ರಿಯಾಕ್ಟ್ ಮಾಡಿದ್ದು, ಥಾಂಕ್ಯೂ ಲವ್ ಎಂದಿದ್ದಾರೆ.
ನಟಿ ಶೇರ್ ಮಾಡಿದ ಫೋಟೋದಲ್ಲಿ ತರುಣ್ ವೈಟ್ ಡ್ರೆಸ್ ಧರಿಸಿ ಗಾಗಲ್ಸ್ ಧರಿಸಿದ್ದರೆ ಸೋನಲ್ ಅವರು ಅರೆಬಿಯನ್ ಸ್ಟೈಲ್ನಲ್ಲಿ ಡ್ರೆಸ್ ಮಾಡಿದ್ದರು. ಅವರ ಸ್ಕಿನ್ ಕಲರ್ ಡ್ರೆಸ್ ಆಕರ್ಷಕವಾಗಿತ್ತು. ಸ್ಯಾಂಡಲ್ವುಡ್ನ ಮುದ್ದಾದ ಜೋಡಿ ಮರಳು ಭೂಮಿಯಲ್ಲಿ ಸೂರ್ಯಾಸ್ತವನ್ನು ಎಂಜಾಯ್ ಮಾಡಿದ್ದಾರೆ. ಆ ಸಂದರ್ಭದಲ್ಲಿಯೇ ಫೋಟೋ ಸೆರೆ ಹಿಡಿಯಲಾಗಿದೆ.
ರೊಮ್ಯಾಂಟಿಕ್ ಹನಿಮೂನ್ ಫೋಟೋಸ್ ಪೋಸ್ಟ್ ಮಾಡಿ ಗಂಡನಿಗೆ ವಿಶ್ ಮಾಡಿದ ಸೋನಲ್
Leave a comment
Leave a comment