ಮೈಸೂರು: ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ 50-50 ಅನುಪಾತದಲ್ಲಿ 14 ಸೈಟ್ ನೀಡಿದ್ದ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಇದೀಗ ವಿಚಾರಣೆಯನ್ನು ತೀವ್ರಗೊಳಿಸಿದ್ದು, ಸಿಎಂ ಖಾಸಗಿ ಆಪ್ತ ಸಹಾಯಕ ಸಿ.ಟಿ.ಕುಮಾರ್ ಅವರ ವಿಚಾರಣೆ ನಡೆಸಿದ್ದಾರೆ.
ಮೈಸೂರಿನಲ್ಲಿ ಸಿಎಂಗೆ ಸೇರಿದ ಎಲ್ಲಾ ವ್ಯವಹಾರಗಳನ್ನ ಸಿ.ಟಿ ಕುಮಾರ್ ಅಲಿಯಾಸ್ ಎಸ್.ಜಿ.ದಿನೇಶ್ ಕುಮಾರ್ ನೋಡಿಕೊಳ್ಳುತ್ತಿದ್ದರು. ಇದೀಗ ಇಡಿ ಅಧಿಕಾರಿಗಳು ದಿನೇಶ್ಕುಮಾರ್ ಅವರ ವಿಚಾರಣೆ ನಡೆಸಿದ್ದು, 14 ಸೈಟ್ ವಿಚಾರದಲ್ಲಿ ಪ್ರಶ್ನೆಗಳನ್ನು ಕೇಳಿ ಬೆವರಿಳಿಸಿದ್ದಾರೆ.
ಮುಡಾದಲ್ಲಿ ನಕಲಿ ಸಹಿ ಬಗ್ಗೆ, ಪಾರ್ವತಿ ಅವರ ಪತ್ರಕ್ಕೆ ದಿನೇಶ್ ಕುಮಾರ್ ಸಹಿ ಹಾಕಿದ ಬಗ್ಗೆ ತೀವ್ರ ವಿಚಾರಣೆ ಮಾಡುವ ಮೂಲಕ ಫುಲ್ ಡ್ರಿಲ್ ಮಾಡಿದ್ದಾರೆ.