ಮೈಸೂರು: ಮುಡಾ ಬ್ರಹ್ಮಾಂಡ ಭ್ರಷ್ಟಾಚಾರ ಬಗೆದಷ್ಟು ಬಯಲಾಗುತ್ತಿದೆ. ಮುಡಾ 50:50 ಅನುಪಾತದ ದಾಖಲೆಗಳೇ ಮಾಯವಾಗಿವೆ. ಮುಡಾ ಸಭೆಯಲ್ಲಿ ಈ ವಿಚಾರವನ್ನು ಅಧಿಕೃತವಾಗಿ ಒಪ್ಪಿಕೊಂಡಿರುವ ಅಧಿಕಾರಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ.
50:50 ಅನುಪಾತದ ‘ಸೆಲೆಕ್ಟಿವ್ ಸೈಟ್’ಗಳ ದಾಖಲೆಗಳೇ ಮಾಯವಾಗಿವೆ. ಮುಡಾ ಪ್ರಾಧಿಕಾರದ ಸದಸ್ಯರಿಗೆ ಅಧಿಕೃತವಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 50:50 ಅನುಪಾತದ ಕೆಲವು ಸೆಲೆಕ್ಟಿವ್ ಸೈಟ್‌ಗಳ ಕಡತಗಳೇ ಇಲ್ಲ. ಹಿಂದಿನ ಆಯುಕ್ತರು ಅವುಗಳನ್ನು ತೆಗೆದುಕೊಂಡು ಹೋಗಿರಬೇಕು ಅಥವಾ ಸುಟ್ಟು ಹಾಕಿರಬೇಕು ಎಂದು ಪ್ರಾಧಿಕಾರದ ಜನಪ್ರತಿನಿಧಿ ಸದಸ್ಯರ ಮುಂದೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
50:50 ಅನುಪಾತದಲ್ಲಿ ನಿರ್ದಿಷ್ಟವಾಗಿ ಇಂತಿಷ್ಟೆ ಸಂಖ್ಯೆ ಸೈಟ್ ಹಂಚಿಕೆ ಆಗಿವೆ ಎಂಬ ಬಗ್ಗೆ ಪ್ರಾಧಿಕಾರದ ಬಳಿ ಮಾಹಿತಿಯೇ ಇಲ್ಲ. ಕೆಲವು ಸೈಟ್‌ಗಳ ದಾಖಲೆ ಕೇಳಿದರೆ ಅವು ಕಳೆದು ಹೋಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಧಿಕಾರಿಗಳು ಹೇಳಿದ ಉತ್ತರ ಕೇಳಿ ಜನಪ್ರತನಿಧಿಗಳು ಬೆಚ್ಚಿದ್ದಾರೆ.