ಮಹಾರಾಷ್ಟ್ರ ವಿಧಾನಸಭಾ ಚುನಾವಣೆ – ಬಿಜೆಪಿಯ 99 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್‌

public wpadmin

ಮುಂಬೈ: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಬಿಜೆಪಿ 99 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಬಿಡುಗಡೆಗೊಳಿಸಿದೆ. ಮೊದಲ ಪಟ್ಟಿಯಲ್ಲಿ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್‌, ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್‌ ಬವಾಂಕುಲೆ ಸೇರಿದಂತೆ 99 ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದೆ.

ನಾಗ್ಪುರ ನೈಋತ್ಯ (ಸೌತ್‌ವೆಸ್ಟ್‌) ಕ್ಷೇತ್ರದಿಂದ ದೇವೇಂದ್ರ ಫಡ್ನವಿಸ್ , ಕಮ್ತಿ ಕ್ಷೇದ್ರದಿಂದ ಬವಾಂಕುಲೆ ಅವರನ್ನ ಕಣಕ್ಕಿಳಿಸಿದೆ. ಉಳಿದಂತೆ ಘಾಟ್‌ಕೋಪರ್ ಪಶ್ಚಿಮದಿಂದ ರಾಮ್ ಕದಮ್, ಚಿಕ್ಲಿಯಿಂದ ಶ್ವೇತಾ ಮಹಾಲೆ ಪಾಟೀಲ್, ಭೋಕರ್‌ನಿಂದ ಶ್ರೀಜಯಾ ಅಶೋಕ್ ಚವಾಣ್ ಮತ್ತು ಕಂಕಾವ್ಲಿಯಿಂದ ನಿತೀಶ್ ರಾಣೆ ಅವರನ್ನು ಕಣಕ್ಕಿಳಿಸಿದೆ.


ಶ್ರೀಜಯಾ ಅಶೋಕ್‌ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರ ಪುತ್ರಿಯಾಗಿದ್ದು, ಈ ವರ್ಷದ ಫೆಬ್ರವರಿಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. 



Share This Article
Leave a comment