ಬಿಗ್ಬಾಸ್ ಮನೆಯಲ್ಲಿನ ಸ್ಪರ್ಧಿಗಳ ನಡುವಿನ ಫೈಟ್ ಇನ್ನೊಂದು ಹಂತಕ್ಕೆ ತಲುಪಿದೆ. ವೈಲ್ಡ್ಕಾರ್ಡ್ ಮೂಲಕ ಎಂಟ್ರಿ ನೀಡಿರುವ ರಜತ್ ಕಿಸನ್ ಮೇಲೆ ಬೇಸರಗೊಂಡಿರುವ ಗೋಲ್ಡ್ ಸುರೇಶ್, ತಾವು ಆಟ ಆಡಲ್ಲ. ಬಾಗಿಲು ತೆಗಿಯಿರಿ ಎಂದು ಬಿಗ್ಬಾಸ್ ಬಳಿ ಮನವಿ ಮಾಡಿಕೊಂಡಿದ್ದಾರೆ.
https://twitter.com/i/status/1859054055093305661
ಇಂದು ರಾತ್ರಿ 9.30ಕ್ಕೆ ಪ್ರಸಾರವಾಗುವ ಎಪಿಸೋಡ್ಗೆ ಸಂಬಂಧಿಸಿದ ಪ್ರೊಮೋವನ್ನು ಕಲರ್ಸ್ ಕನ್ನಡ ಶೇರ್ ಮಾಡಿಕೊಂಡಿದೆ. ಅದರಲ್ಲಿ ಬಿಗ್ಬಾಸ್ ಟಾಸ್ಕ್ ಒಂದನ್ನು ನೀಡಿದ್ದಾರೆ. ಕೊಳವೆ ಮೂಲಕ ಬರುವ ಚೆಂಡನ್ನು ಎತ್ತಿಕೊಂಡು ತಮ್ಮ ತಂಡಕ್ಕೆ ಇರುವ ಮೀಸಲಿರುವ ಚೌಕಟ್ಟಿನಲ್ಲಿ ಇಡಬೇಕು ಎಂದು ಬಿಗ್ಬಾಸ್ ಆಟದ ನಿಯಮದಲ್ಲಿತ್ತು.
ಅಂತೆಯೇ ಆಟ ಆರಂಭವಾಗಿದೆ. ಈ ವೇಳೆ ಗೋಲ್ಡ್ ಸುರೇಶ್ ಜೊತೆ ಉಗ್ರಂ ಮಂಜು ಮಾತುಕತೆ ನಡೆಸುತ್ತಿರುತ್ತಾರೆ. ಇಬ್ಬರ ನಡುವಿನ ವಾಗ್ಯುದ್ಧಕ್ಕೆ ರಜತ್ ಎಂಟ್ರಿಯಾಗಿ ಕೆಲವು ಪದಗಳನ್ನು ಗೋಲ್ಡ್ ಸುರೇಶ್ಗೆ ಬಳಸಿದ್ದಾರೆ. ತಮ್ಮ ಮೇಲೆ ಬಳಕೆ ಆಗಿರುವ ಪದಗಳು ಆಕ್ಷೇಪಾರ್ಹವಾಗಿವೆ. ನನಗೆ ಬೇಸರ ಆಗಿದೆ. ಬಿಗ್ಬಾಸ್ ಅವರು ನನಗೆ ‘ಮಗನೆ, ಗಿಗನೆ’ ಎಂದೆಲ್ಲ ಹೇಳ್ತಾರೆ. ಇವನು ನನ್ನ ಅಪ್ಪ ಅಲ್ಲ. ಬಿಗ್ಬಾಸ್ ನಾನು ಆಡಲ್ಲ. ಬಿಗ್ಬಾಸ್ ಬಾಗಿಲು ಓಪನ್ ಮಾಡಿ ಎಂದು ಡೋರ್ ತಟ್ಟಿದ್ದಾರೆ. ಪ್ರೊಮೋ ಬಿಡುಗಡೆ ಬೆನ್ನಲ್ಲೇ ವೀಕ್ಷಕರು ಎಕ್ಸೈಟ್ ಆಗಿದ್ದು, ಇವತ್ತಿನ ಎಪಿಸೋಡ್ಗಾಗಿ ಕಾಯುತ್ತಿದ್ದಾರೆ.