ಕಾರವಾರ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ದೋಷಿಯಾಗಿರುವ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ಗೆ ಮೊದಲನೇ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
2ನೇ ಕೇಸ್ ವಂಚನೆ ಪ್ರಕರಣದಲ್ಲಿ 7 ವರ್ಷ ಹಾಗೂ ಕಳ್ಳತನ ಪ್ರಕರಣದಲ್ಲೂ 7 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ಮೊದಲ ಪ್ರಕರಣದಲ್ಲಿ ಅಪರಾಧಿಗೆ 6 ಕೋಟಿ ಹಾಗೂ 2ನೇ ಪ್ರಕರಣದಲ್ಲಿ 9 ಕೋಟಿ ದಂಡ ವಿಧಿಸಲಾಗಿದೆ.