ಸ್ಯಾಂಡಲ್‌ವುಡ್‌ನ ಸುಂದರಿ ಶ್ರದ್ಧಾ ಶ್ರೀನಾಥ್ ಜಾಸ್ತಿ ಬೋಲ್ಡ್ ಆಗಿ ಕಾಣಿಸಿಕೊಂಡದ್ದು ಇಲ್ವೇ ಇಲ್ಲ. ಆದರೆ, ಇದೀಗ ಬೋಲ್ಡ್ ಆಗಿಯೇ ಡ್ರೆಸ್ ತೊಟ್ಟಿದ್ದಾರೆ. ಬೆಂಗಳೂರಿನಲ್ಲೋ ಇಲ್ಲ ಗೋವಾದಲ್ಲೋ ಶ್ರದ್ಧಾ ಶ್ರೀನಾಥ್ ಬೋಲ್ಡ್ ಡ್ರೆಸ್ ತೊಟ್ಟು ಕಾಣಿಸಿಕೊಂಡಿಲ್ಲ. ಬದಲಾಗಿ, ದೂರದ ಥೈಲ್ಯಾಂಡ್‌ಗೆ ಹೋಗಿದ್ದಾರೆ. ಅಲ್ಲಿ ಬಿಕಿನಿ ತೊಟ್ಟು ಕಂಗೊಳಿಸಿದ್ದಾರೆ.
ಶ್ರದ್ಧಾ ಶ್ರೀನಾಥ್ ದೂರದ ಥೈಲ್ಯಾಂಡ್‌ಗೆ ಒಬ್ರೇ ಹೋದ್ರಾ? ಇಲ್ಲಾ ಯಾರಾದ್ರೂ ಬಾಯ್ ಫ್ರೆಂಡ್ ಇದ್ದಾರಾ? ಈ ಒಂದು ಪ್ರಶ್ನೆಗೆ ಉತ್ತರ ಸಿಗೋದೇ ಇಲ್ಲ. ಕಟ್ಟಕಡೆಯ ಫೋಟೋ ನೋಡಿದ್ರೂ ಕೂಡ ಅಷ್ಟೇನೆ ನೋಡಿ. ಎಲ್ಲ ಕಡೆಗೆ ಶ್ರದ್ಧಾ ಶ್ರೀನಾಥ್ ಒಬ್ಬರೇ ಕಾಣಿಸುತ್ತಿದ್ದಾರೆ. ಹಾಗಾದ್ರೆ ಫೋಟೋ ತೆಗೆದವ್ರು ಯಾರು ಅನ್ನೋ ಪ್ರಶ್ನೆ ಕೂಡ ಹಾಗೆ ಉಳಿಯುತ್ತದೆ ನೋಡಿ. ಶ್ರದ್ಧಾ ಶ್ರೀನಾಥ್ ಬೋಲ್ಡ್ ಆಗಿಯೇ ಇದ್ದಾರೋ..? ಇಲ್ಲಾ ಈಗ ಬೋಲ್ಡ್ ಅನಿಸುತ್ತಾರೋ.? ಗೊತ್ತಿಲ್ಲ. ಯಾಕೆಂದ್ರೆ, ಇವರು ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ತುಂಬಾನೆ ಸೀರಿಯೆಸ್ ಆಗಿರುತ್ತವೆ. ಎಲ್ಲೂ ಅತಿರೇಕವಾಗಿ ಕಾಣಸಿಕೊಂಡಿರೋದು ಇಲ್ವೆ ಇಲ್ಲ ಏನೋ. ಆದರೂ ಶ್ರದ್ಧಾ ಶ್ರೀನಾಥ್ ಇಲ್ಲಿ ಹೀಗೆ ಯಾಕೆ ಕಾಣಿಸಿಕೊಂಡಿದ್ದಾರೆ ಅನ್ನೋದು ಹೆಚ್ಚು ಕುತೂಹಲ ಮೂಡಿಸುತ್ತಿದೆ.
ಶ್ರದ್ಧಾ ಶ್ರೀನಾಥ್ ಥೈಲ್ಯಾಂಡ್‌ಗೆ ಬರೋ ಒಂದು ಕಾರಣವೂ ಇದೆ. ಆ ಕಾರಣವನ್ನ ಸ್ವತಃ ಶ್ರದ್ಧಾ ಶ್ರೀನಾಥ್ ಬರೆದುಕೊಂಡಿದ್ದಾರೆ. ಹೌದು, ಥೈಲ್ಯಾಂಡ್ ಬಗ್ಗೆ ಒಂದು ಹೈಪ್ ಇದ್ದೇ ಇದೆ. ಆದರೆ, ಇದು ಕೇವಲ ಹೈಪ್ ಅಂತಲೇ ನಾನು ತಿಳಿದುಕೊಂಡಿದ್ದೇನು. ಆದರೆ, ಇಲ್ಲಿಗೆ ಬಂದ್ಮೇಲೆ ಎಲ್ಲವೂ ತಿಳಿದುಕೊಂಡೆ ಅಂತಲೇ ಶ್ರದ್ಧಾ ಶ್ರೀನಾಥ್ ಹೇಳಿಕೊಂಡಿದ್ದಾರೆ.
ಶ್ರದ್ಧಾ ಶ್ರೀನಾಥ್ ಇಲ್ಲಿ ಬಿಕಿನಿ ತೊಟ್ಟು ಸುಮ್ನೆ ಪೋಸ್ ಕೊಟ್ಟಿಲ್ಲ. ಸೀರಿಯೆಸ್ ಆಗಿಯೇ ನೀರಿನಲ್ಲಿ ಈಜು ಹೊಡೆದಿದ್ದಾರೆ. ಲೈಫ್ ಜಾಕೆಟ್ ಧರಿಸಿಕೊಂಡು ಈಜಿರೋದು ಒಂದು ಸತ್ಯವನ್ನ ಹೇಳುತ್ತಿದೆ. ಹೌದು, ಶ್ರದ್ಧಾ ಶ್ರೀನಾಥ್‌ಗೆ ಈಜು ಬರೋದಿಲ್ಲ ಅನ್ನೋದನ್ನ ಈ ಲೈಫ್ ಜಾಕೆಟ್ ಹೇಳುತ್ತಿದೆ. ಶ್ರದ್ಧಾ ಶ್ರೀನಾಥ್ ಸಿನಿಮಾ ಜೀವನದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡದ್ದು ಇಲ್ವೇ ಇಲ್ಲ. ಆದರೆ, ಥೈಲ್ಯಾಂಡ್‌ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸೋ ಪ್ರಯತ್ನ ಮಾಡಿದ್ದಾರೆ. ಕಪ್ಪು ಬಿಕಿನಿ ತೊಟ್ಟು ಕಾಣಿಸಿಕೊಂಡಿದ್ದಾರೆ. ಅದೇ ರೀತಿ ನೀರಿನಿಂದ ಎದ್ದು ಬಂದ್ಮೇಲೆ ಓಪನ್ ಅನಿಸೋ ಫ್ರೀ ಸೈಜ್ ಡ್ರೆಸ್ ಕೂಡ ತೊಟ್ಟಿದ್ದಾರೆ. ಇವು ಏನೂ ಕಡಿಮೆ ಇಲ್ಲ ಬಿಡಿ.ಶ್ರದ್ಧಾ ಶ್ರೀನಾಥ್ ಎಷ್ಟು ದಿನ ಥೈಲ್ಯಾಂಡ್‌ನಲ್ಲಿದ್ದರೋ ಏನೋ? ಸೆಪ್ಟೆಂಬರ್-2 ರಂದು ಸಂಜೆ ಹೊತ್ತಿಗೆ ಒಂದಿಷ್ಟು ಫೋಟೋಗಳನ್ನ ಪೋಸ್ಟ್ ಮಾಡಿದ್ದಾರೆ. ಒಂದೊಂದು ಫೋಟೋನೂ ಶ್ರದ್ಧಾ ಶ್ರೀನಾಥ್ ಬಿಂದಾಸ್ ಟ್ರಿಪ್‌ನ ಚಿತ್ರಣ ಕಟ್ಟಿಕೊಡುತ್ತಿವೆ ನೋಡಿ. ಶ್ರದ್ಧಾ ಶ್ರೀನಾಥ್ ಸಿನಿಮಾ ಜೀವನದಲ್ಲಿ ಸದ್ಯ ಕನ್ನಡದಿಂದ ದೂರವೇ ಉಳಿದಂತೆ ಇದೆ. ಅಥವಾ ಯಾರೂ ಕರೆಯುತ್ತಿಲ್ಲವೋ ಏನೋ? ಯುಟರ್ನ್, ಆಪರೇಷನ್ ಅಲಮೇಲಮ್ಮ, ಮುಂಗಾರು ಮಳೆ-2 ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ಅಭಿನಿಸಿದ್ದರು. ಆದರೆ, ಇದೀಗ ತೆಲುಗು, ತಮಿಳು, ಹಿಂದಿ ಹೀಗೆ ಇತರ ಭಾಷೆಯಲ್ಲಿಯೇ ನಟಿಸುತ್ತಿದ್ದಾರೆ.
ಈ ಹಿಂದೆ ಕನ್ನಡದ ರುಸ್ತುಂ ಚಿತ್ರದಲ್ಲಿ ನಟಿಸಿದ್ದರು. ಸತೀಶ್ ನೀನಾಸಂ ಅಭಿನಯದ ಡಿಯರ್ ವಿಕ್ರಂ ಚಿತ್ರದಲ್ಲೂ ನಟಿಸಿದ್ರು. ಇದು ಬಿಟ್ರೆ, ಕನ್ನಡದ ಬೇರೆ ಯಾವುದೇ ಸಿನಿಮಾವನ್ನ ಶ್ರದ್ಧಾ ಶ್ರೀನಾಥ್ ಒಪ್ಪಿಕೊಂಡಿಲ್ಲ ಅಂತಲೇ ಹೇಳಬಹುದು.