ಪಾಕಿಸ್ತಾನಕ್ಕೆ ಹೋಗುತ್ತಿರುವುದು  ಬಹುಪಕ್ಷೀಯ ಕಾರ್ಯಕ್ರಮಕ್ಕೆ: ಜೈಶಂಕರ್

public wpadmin

ನವದೆಹಲಿ: ಅಕ್ಟೋಬರ್ ಮಧ್ಯಭಾಗದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (SCO) ಸಮಾವೇಶದಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವ ಎಸ್ ಜೈಶಂಕರ್ ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಎಂದು ನಿನ್ನೆ ಸುದ್ದಿ ಪ್ರಕಟವಾಗಿತ್ತು.
ಇದಕ್ಕೆ ಇಂದು ಸ್ಪಷ್ಟನೆ ನೀಡಿರುವ ಸಚಿವ ಜೈಶಂಕರ್ ಅವರು, ತಮ್ಮ ಭೇಟಿಯು ಬಹುಪಕ್ಷೀಯ ಕಾರ್ಯಕ್ರಮಕ್ಕಾಗಿಯೇ ಹೊರತು ಭಾರತ-ಪಾಕಿಸ್ತಾನ ಸಂಬಂಧಗಳ ಕುರಿತಾದ ದ್ವಿಪಕ್ಷೀಯ ಚರ್ಚೆಗಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಎಸ್ ಸಿಒದ ಉತ್ತಮ ಸದಸ್ಯನಾಗಲು ನಾನು ಅಲ್ಲಿಗೆ ಹೋಗುತ್ತಿದ್ದೇನೆ” ಎಂದಿದ್ದಾರೆ.
ಪಾಕಿಸ್ತಾನವು ಅಕ್ಟೋಬರ್ 15 ಮತ್ತು 16 ರಂದು ಎಸ್ ಸಿಒ ಕೌನ್ಸಿಲ್ ಆಫ್ ಹೆಡ್ಸ್ ಆಫ್ ಗವರ್ನಮೆಂಟ್ (CHG) ಸಭೆಯನ್ನು ಆಯೋಜಿಸುತ್ತಿದೆ.

Share This Article
Leave a comment