ಫೋಟೋ ಒಂದರಲ್ಲಿ ದರ್ಶನ್ ಅವರ ಕುತ್ತಿಗೆ ಬಳಸಿಕೊಂಡು ಪವಿತ್ರಾ ಗೌಡ ಹಿಡಿದುಕೊಂಡಿರುವುದನ್ನು ಕಾಣಬಹುದು. ಈ ಫೋಟೋದಲ್ಲಿ ದರ್ಶನ್ ನಾಲಗೆ ಹೊರಗೆ ಹಾಕಿ ಕಣ್ಣು ದೊಡ್ಡ ಮಾಡಿ ಫೋಟೋಗೆ ಪೋಸ್ ಕೊಡುವುದನ್ನು ಕಾಣಬಹುದು.
ಕನ್ನಡ ಚಿತ್ರರಂಗದ ಬೇಡಿಕೆ ನಟ ದರ್ಶನ್ ತೂಗುದೀಪ 47 ವರ್ಷದವರಾಗಿದ್ದು, ಈತನೊಂದಿಗೆ ನಟಿ ಪವಿತ್ರಾ ಗೌಡ (33) ಬರೋಬ್ಬರಿ 14 ವರ್ಷ ಚಿಕ್ಕವಳಾಗಿದ್ದರೂ ಕಳೆದ 10 ವರ್ಷಗಳಿಂದ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದು ಸಂಸಾರ ಮಾಡುತ್ತಿದ್ದಾರೆ. ಇವರ ಸಂಸಾರಕ್ಕೆ ಯಾರದ್ದೇ ಅಡ್ಡಿಯಾಗಬಾರದೆಂದು ನಟ ದರ್ಶನ್ ಮನೆಯ 1 ಕಿ.ಮೀ. ದೂರದಲ್ಲಿ ಪ್ರತ್ಯೇಕ ಮನೆಯನ್ನು ಖರೀದಿಸಿ 2018ರಿಂದ ಸಂಸಾರ ಮಾಡಿಕೊಂಡಿದ್ದೆವು ಎಂದು ನಟಿ ಪವಿತ್ರಾಗೌಡ ಹೇಳಿಕೊಂಡಿದ್ದಾರೆ.
ಪವಿತ್ರಾಗೌಡ ಅವರೊಂದಿಗೆ ಸಂಬಂಧದ ಕುರಿತು ನಟ ದರ್ಶನ್ ಹೇಳಿದ್ದೇನು?
ನಾನು ಕನ್ನಡ ಚಿತ್ರರಂಗದಲ್ಲಿ ಚಿತ್ರನಟನಾಗಿ ಮತ್ತು ಇತರೆ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುತ್ತೇನೆ. ನಾನು, ನನ್ನ ಪತ್ನಿ ಶ್ರೀಮತಿ ವಿಜಯಲಕ್ಷ್ಮೀ ಮತ್ತು ಮಗ ವಿನೀಶ್ ಮೂವರು ಹೊಸಕೆರೆಹಳ್ಳಿಯಲ್ಲಿನ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಾಗಿರುತ್ತೇವೆ. ನನ್ನ ಪತ್ನಿ ಗೃಹಿಣಿಯಾಗಿರುತ್ತಾರೆ ಮತ್ತು ನನ್ನ ಮಗ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುತ್ತಾನೆ. ನನ್ನ ಮತ್ತು ವಿಜಯಲಕ್ಷ್ಮಿ ಯವರ ವಿವಾಹವಾಗಿ 22 ವರ್ಷವಾಗಿದ್ದು, ಮೇ. 19 ಕ್ಕೆ ನಾನು ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ದುಬೈಗೆ ಹೋಗಿ ಬಂದಿದ್ದೆವು. ಪವಿತ್ರಾಗೌಡ ಎಂಬುವವರು ಸುಮಾರು 10 ವರ್ಷಗಳಿಂದ ನನ್ನೊಂದಿಗೆ ಲೀವ್ ಇನ್ ರಿಲೇಷನ್‌ಷಿಪ್‌ನಲ್ಲಿದ್ದು, ಇವರು ಆರ್‌ಆರ್‌ನಗರದಲ್ಲಿ ನನ್ನ ಮನೆಯಿಂದ ಸುಮಾರು 1.5 ಕಿಲೋ ಮೀಟರ್ ದೂರದಲ್ಲಿರುತ್ತಾರೆ. ಪವನ್ ಎಂಬುವವನು, ನನ್ನ ಮನೆಯಲ್ಲಿ ಮತ್ತು ಪವಿತ್ರಾಗೌಡ ವಾಸವಾಗಿರುವ ಮನೆಗಳಲ್ಲಿ ಮನೆ ಕೆಲಸವನ್ನು ಮಾಡಿಕೊಂಡು 8 ವರ್ಷಗಳಿಂದ ಜೊತೆಯಲ್ಲಿದ್ದಾನೆ ಎಂದು ನಟ ದರ್ಶನ್ ಸ್ವಯಂ ಹೇಳಿಕೆ ದಾಖಲಿಸಿದ್ದಾರೆ.
ಇದಾದ ನಂತರ ಸಲುಗೆ ಹೆಚ್ಚಾಗಿ, ನಮ್ಮ ಸಲುಗೆ ಪ್ರೀತಿಯಾಗಿ ಮಾರ್ಪಟ್ಟಿತು. ದರ್ಶನ್ ವಿಜಯಲಕ್ಷ್ಮಿ ಅವರನ್ನು ಮದುವೆ ಆಗಿದ್ದು, ಅವರಿಗೆ ಮಗನಿದ್ದಾನೆಂಬ ಮಾಹಿತಿ ಇದ್ದರೂ ಆದರೂ ಅವರನ್ನು ಪ್ರೀತಿ ಮಾಡುತ್ತಾ ಲಾಂಗ್ ಡ್ರೈವ್ ಹೋಗುತ್ತಿದ್ದೆವು. ದರ್ಶನ್ ಆಗಾಗ ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ನನ್ನ ಮಗಳು, ನಾನು ಹಾಗೂ ದರ್ಶನ್ ವಾಸ ಮಾಡಲೆಂದು 2018ರಲ್ಲಿ ನಟ ದರ್ಶನ್ ಅವರು ನಿರ್ಮಾಪಕ ಸೌಂದರ್ಯ ಜಗದೀಶ್ ಅವರಿಂದ 1.75 ಕೋಟಿ ರೂ. ನನ್ನ ಖಾತೆಗೆ ವರ್ಗಾವಣೆ ಮಾಡಿಸಿ, ಮನೆ ಖರೀದಿ ಮಾಡಿಸಿರುತ್ತಾರೆ. ಇದಾದ ನಂತರ 2018ರ ಫೆಬ್ರವರಿಯಲ್ಲಿ ಮನೆ ಗೃಹ ಪ್ರವೇಶ ಮಾಡಿ ಅಂದಿನಿಂದ ನಾವಿಬ್ಬರೂ ಸಂಸಾರ ಮಾಡಿಕೊಂಡಿರುತ್ತೇವೆ ಎಂದು ನಟಿ ಪವಿತ್ರಾಗೌಡ ಸ್ವಯಂ ಹೇಳಿಕೆ ದಾಖಲಿಸಿದ್ದಾರೆ.