ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ನವಗ್ರಹ’ ಸಿನಿಮಾ ಇದೀಗ ನವೆಂಬರ್ 8ರಂದು ರೀ ರಿಲೀಸ್ ಆಗುತ್ತಿದೆ. 16 ವರ್ಷಗಳ ಬಳಿಕ ಮತ್ತೆ ಈ ಸಿನಿಮಾ ತೆರೆ ಕಾಣುತ್ತಿದೆ.
ದರ್ಶನ್, ತರುಣ್ ಸುಧೀರ್, ಮರಿ ಟೈಗರ್ ವಿನೋದ್ ಪ್ರಭಾಕರ್, ಧರ್ಮ ಕೀರ್ತಿರಾಜ್, ಸೃಜನ್ ಲೋಕೇಶ್, ನಾಗೇಂದ್ರ ಅರಸ್, ಗಿರಿ ದಿನೇಶ್, ವರ್ಷ, ಶರ್ಮಿಳಾ ಮಾಂಡ್ರೆ ನಟನೆಯ ‘ನವಗ್ರಹ’ ಚಿತ್ರ ನವೆಂಬರ್ 8ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 16 ವರ್ಷಗಳ ಹಿಂದೆ 2008ರ ನ.7ರಂದು ಚಿತ್ರ ತೆರೆಕಂಡಿತ್ತು.
ಈ ಚಿತ್ರವನ್ನು ತೂಗುದೀಪ ಸಂಸ್ಥೆಯ ನಿರ್ಮಾಣದಲ್ಲಿ ದಿನಕರ್ ತೂಗುದೀಪ ನಿರ್ದೇಶನ ಮಾಡಿದ್ದರು. ಇನ್ನೂ ದರ್ಶನ್ ನಟನೆಯ ಸಿನಿಮಾಗಳು ಮರು ಬಿಡುಗಡೆಯಾಗುತ್ತಿವೆ. ಈಗಾಗಲೇ ಪೊರ್ಕಿ, ಕರಿಯ, ಶಾಸ್ತ್ರಿ ಚಿತ್ರಗಳು ರಿಲೀಸ್ ಆಗಿವೆ.