ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಅದ್ಧೂರಿಯಾಗಿ ತೆರೆ ಕಂಡಿದೆ. ಸಿನಿ ಪ್ರೇಕ್ಷಕರು (Review) ಸಿನಿಮಾ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ. ಮಾತ್ರವಲ್ಲ ಸಿನಿಮಾ ಸೆಂಕಡ್ ಹಾಫ್ ಸೂಪರ್ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದೀಗ ಆಯುಧ ಪೂಜೆಯಂದೇ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮಾರ್ಟಿನ್ ಸಿನಿಮಾ ಕರ್ನಾಟಕ ಸೇರಿದಂತೆ ವಿಶ್ವದ್ಯಾಂತ ರಿಲೀಸ್ ಆಗಿದೆ.
ಧ್ರುವ ಫ್ಯಾನ್ಸ್ ಸಖತ್ ಖುಷ್ ಆಗಿದ್ದಾರೆ. ಚಿತ್ರಮಂದಿರಗಳ ಮುಂದೆ ಫ್ಯಾನ್ಸ್ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರಿನ ಚಿತ್ರಮಂದಿರಗಳಿಗೆಧ್ರುವ ಸರ್ಜಾ ಭೇಟಿ ನೀಡಿ ಸಖತ್ ಡ್ಯಾನ್ಸ್ ಕೂಡ ಮಾಡಿದರು.
ಮಾರ್ಟಿನ್ ಸಿನಿಮಾ ಮೊದಲಾರ್ಧ ಸಖತ್ ಆಗಿದೆ. ಸಿನಿಮಾಟೋಗ್ರಫಿ ಮತ್ತು ಆ್ಯಕ್ಷನ್ ಸೀಕ್ವೆನ್ಸ್ ವಂಡರ್ಫುಲ್ ಆಗಿದೆ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಧ್ರುವ ಸರ್ಜಾ ನಟನೆ ಸೂಪರ್. ಕಥೆಯೂ ಕೂಡ ತುಂಬ ಚೆನ್ನಾಗಿದೆ. ಬ್ಲಾಕ್ ಬಸ್ಟರ್ ಹಿಟ್ ಗ್ಯಾರಂಟಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಮಾರ್ಟಿನ್ ಒಂದು ರೊಮಾಂಚಕ ಅಣುಭವ. ನಟನೆ ಅದ್ಭುತ, ವಿಶೇಷವಾಗಿ ಧ್ರುವ ಸರ್ಜಾ ಅವರ ಬೆರಗುಗೊಳಿಸುವ ದೃಶ್ಯಗಳು. ಆಕ್ಷನ್ ಡ್ರಾಮಾ ಅಭಿಮಾನಿಗಳು ಈ ನೋಡಲೇಬೇಕು. ನಿಜವಾದ ಪ್ಯಾನ್-ಇಂಡಿಯನ್ ಸಿನಿಮೀಯ ಅನುಭವ ಎಂದು ಬರೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟನೆ, ಬರವಣಿಗೆ ಎಲ್ಲವೂ ಸೂಪರ್ ಆಗಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಒಟ್ಟಾರೆಯಾಗಿ ಈ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪೊಗರು ಸಿನಿಮಾ ಬಳಿಕ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಎನ್ನುತ್ತಿದ್ದಾರೆ ಫ್ಯಾನ್ಸ್. ವರದಿಯ ಪ್ರಕಾರ ಮಾರ್ಟಿನ್ ಸಿನಿಮಾ 13 ಭಾಷೆಯಲ್ಲಿ ಬಿಡುಗಡೆಯಾಗಲಿದೆ. 3000 ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಿದೆ. ಧ್ರುವ ಸರ್ಜಾ, ವೈಭವಿ ಶಾಂಡಿಲ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.