ಟಾಲಿವುಡ್ ಪವರ್​ ಸ್ಟಾರ್ ಪವನ್​ ಕಲ್ಯಾಣ್​ ಎಷ್ಟು ಕೋಟಿಗಳ ಒಡೆಯ ಗೊತ್ತಾ?

public wpadmin

ಇಂದು ಪವರ್ ಸ್ಟಾರ್ ಪವನ್ ಕಲ್ಯಾಣ್ ಹುಟ್ಟುಹಬ್ಬ. ಇತ್ತೀಚೆಗಷ್ಟೇ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಗಣ್ಯರು, ಕಲಾವಿದರು ಹಾಗೂ ಅಭಿಮಾನಿಗಳು ಪವನ್ಗೆ ಶುಭಾಶಯ ಕೋರುತ್ತಿದ್ರು.
ಚಿತ್ರ ರಸಿಕರು ಮತ್ತು ರಾಜಕೀಯ ಗಣ್ಯರು ಪವನ್ ಕಲ್ಯಾಣ್ಗೆ ಶುಭಾಶಯಗಳನ್ನು ವ್ಯಕ್ತಪಡಿಸುವ ಪೋಸ್ಟ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ತಮ್ಮ ಕಿರಿಯ ಸಹೋದರ ಪವನ್ ಕಲ್ಯಾಣ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅಪರೂಪದ ಫೋಟೋವನ್ನು ಹಂಚಿಕೊಂಡಿದ್ದು, ಲವ್ಲಿ ವಿಶ್ ಮಾಡಿದ್ದಾರೆ.

ಮುನಿಸು ಮರೆತ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಪವನ್ ಗೆ ವಿಶ್ ಮಾಡಿದ್ದಾರೆ. ಟಾಲಿವುಡ್ನ ಶ್ರೀಮಂತ ನಟರಲ್ಲಿ ಪವನ್ ಕೂಡ ಒಬ್ಬರಾಗಿದ್ದಾರೆ. ರಾಜಕೀಯದ ಹೊರತಾಗಿ ಸಿನಿಮಾ ಕೆಲಸಗಳಲ್ಲೂ ಪವನ್ ತೊಡಗಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಈಗ ಪವನ್ ರಾಜಕೀಯದಲ್ಲೂ ಯಶಸ್ವಿಯಾಗಿದ್ದಾರೆ. ಪೀಠಪುರಂ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆಂಧ್ರ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಪವನ್ ಕಲ್ಯಾಣ್ ಒಟ್ಟು ಆಸ್ತಿ 164 ಕೋಟಿ ರೂ. ಇದೆ. ಟಾಲಿವುಡ್ ಶ್ರೀಮಂತ ನಟರಲ್ಲಿ ಪವನ್ ಕಲ್ಯಾಣ್ ಕೂಡ ಒಬ್ಬರಾಗಿದ್ದಾರೆ. ತೆಲುಗು ರಾಜ್ಯಗಳ ಹಲವು ಭಾಗಗಳಲ್ಲಿ ಪವನ್ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಪವನ್ ಕಲ್ಯಾಣ್ ವಿಜಯವಾಡ ಮನೆ ಬೆಲೆ ರೂ. 16 ಕೋಟಿ ಬೆಲೆ ಬಾಳುತ್ತಿದೆ. ಅಲ್ಲದೆ, ಹೈದರಾಬಾದ್ ನ ಜುಬಿಲಿ ಹಿಲ್ಸ್ ಮನೆಯ ಮೌಲ್ಯ 12 ಕೋಟಿ ರೂ. ಬಂಜಾರಾ ಹಿಲ್ಸ್ ನಲ್ಲಿ ಫ್ಲ್ಯಾಟ್ ನ ಬೆಲೆ 1.75 ಕೋಟಿ ರೂ ಇದೆ ಎಂದು ವರದಿ ಆಗಿದೆ. ಅಲ್ಲದೇ ಪವನ್ ಕಲ್ಯಾಣ್ ಅವರ ಬ್ಯಾಂಕ್ ಬ್ಯಾಲೆನ್ಸ್ 20 ಕೋಟಿ ರೂಪಾಯಿಗೂ ಹೆಚ್ಚಿದೆ ಎನ್ನಲಾಗ್ತಿದೆ. ನಟನಿಗೆ ಹಲವು ಮೂಲಗಳಿಂದಲೂ ಅದಾಯ ಹರಿದು ಬರುತ್ತದೆ. ಪವನ್ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಕೋಟಿ ಕೋಟಿ ಒಡೆಯ ಪವನ್ ಕಲ್ಯಾಣ್ ಐಷಾರಾಮಿ ಜೀವನ ಶೈಲಿ ಹೊಂದಿದ್ದಾರೆ.

ಇವುಗಳಲ್ಲದೆ ಪವನ್ ಕಲ್ಯಾಣ್ ಬಳಿ ದುಬಾರಿ ಕಾರುಗಳ ಕಲೆಕ್ಷನ್ ಕೂಡ ಇದೆ. ಪವನ್ ಕಲ್ಯಾಣ್ ಬಳಿ ಜಾಗ್ವಾರ್, ಆಡಿ ಮತ್ತು ಮರ್ಸಿಡಿಸ್ ಬೆಂಜ್ ನಂತಹ ಕಾರುಗಳಿವೆ. ಅಲ್ಲದೇ 14 ಕೋಟಿ ರೂಪಾಯಿಗೂ ಹೆಚ್ಚು ಬೆಲೆ ಬಾಳುವ ಕಾರುಗಳಿವೆ. 2019 ರಲ್ಲಿ ಪವನ್ ಕಲ್ಯಾಣ್ ಅವರ ಆಸ್ತಿ ಕೇವಲ ರೂ. 52 ಕೋಟಿ ರೂ. ಇದು ಕೇವಲ ಐದು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ನಟ ಪವನ್ ಕಲ್ಯಾಣ್ ಪ್ರತಿ ತಿಂಗಳು ಸುಮಾರು 1.5 ಕೋಟಿ ರೂಪಾಯಿ ಗಳಿಸುತ್ತಿದ್ದಾರಂತೆ. ಅಂದರೆ ವರ್ಷಕ್ಕೆ 18 ಕೋಟಿ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಪವನ್ ಪ್ರತಿ ಚಿತ್ರಕ್ಕೆ 10-12 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ಪವನ್ ಕಲ್ಯಾಣ್ ಕೈಯಲ್ಲಿ ಹೊಸ ಸಿನಿಮಾಗಳಿವೆ.

ರಾಜಕೀಯದಲ್ಲಿ ಬ್ಯುಸಿ ಆಗಿರುವ ಪವನ್ ಕಲ್ಯಾಣ್ ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ಪವನ್ ಕಲ್ಯಾಣ್ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕೂಡ ಕಾಯ್ತಿದ್ದಾರೆ.

Share This Article
Leave a comment