ಗಂಡನಿಗೆ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ಕೊಡ್ತಿದ್ದ ಖತರ್ನಾಕ್ ಸುಂದರಿ – ವರ್ಷ ಕಳೆಯುವ ಮೊದಲೇ ಬೆಡ್‌ರೂಮ್‌ನಲ್ಲಿ ಕೊಲೆ

public wpadmin

ಉಡುಪಿ: ಕರಿಮಣಿ ಮಾಲೀಕ ನೀನಲ್ಲ ಎನ್ನುತ್ತಾ ವಿಷ ಹಾಕಿ.. ಉಸಿರುಗಟ್ಟಿಸಿ ಕೊಂದ ರಿಲ್ಸ್ ರಾಣಿ ಪ್ರತಿಮಾ ಕಂಬಿ ಎಣಿಸುತ್ತಿದ್ದಾಳೆ. ಕೊಲೆ ಕೃತ್ಯದಲ್ಲಿ ಪ್ರಮುಖ ಪಾತ್ರವಹಿಸಿದ ಆಕೆಯ ಸ್ನೇಹಿತ ದಿಲೀಪ್ ಹೆಗ್ಡೆಯ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಉಡುಪಿ ಜಿಲ್ಲೆ ಕಾರ್ಕಳದ ಪ್ರತಿಮಾ ಎಂಬ ರಿಲ್ಸ್ ರಾಣಿ ತನ್ನ ಪ್ರಿಯಕರ ದಿಲೀಪ್ ಹೆಗ್ಡೆ ಜೊತೆ ಸೇರಿ, ಮುಗ್ಧ ಪತಿ ಬಾಲಕೃಷ್ಣ ಪೂಜಾರಿಯನ್ನು ಕೊಂದಿರುವ ಅಮಾನವೀಯ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಪ್ರಿಯಕರ ತಂದುಕೊಟ್ಟ ಸ್ಲೋ ಪಾಯ್ಸನನ್ನು ಸ್ವಲ್ಪ ಸ್ವಲ್ಪವೇ ಕೊಟ್ಟು, ಆರೋಗ್ಯ ಹದಗೆಡುವಂತೆ ಮಾಡಿದ ಪ್ರತಿಮಾ, ಕೊನೆಗೆ ಗೆಳೆಯನ ಜೊತೆ ಸೇರಿ ಉಸಿರುಗಟ್ಟಿಸಿ ಪತಿಯನ್ನು ಕೊಂದ ಪ್ರಕರಣವಿದು. ಇದೀಗ ಆರೋಪಿಗಳಿಬ್ಬರು ಪೊಲೀಸರ ಅತಿಥಿಗಳಾಗಿದ್ದಾರೆ. ತನ್ನ ಸಹೋದರನ ಮುಂದೆ ಎಲ್ಲಾ ಸತ್ಯವನ್ನು ಬಿಚ್ಚಿಟ್ಟ ಪ್ರತಿಮಾ, ಅಜೆಕಾರು ಪೊಲೀಸರ ಮುಂದೆ ತಾನೇ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನೇರವಾಗಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಕಂಬಿ ಹಿಂದೆ ಸೇರುವ ಮೊದಲೇ ಪತ್ನಿ ಪ್ರತಿಮಾ ಎಲ್ಲಾ ದುಷ್ಟ ಕೃತ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ.

ತನ್ನ ಪ್ರಿಯತಮೆಗೆ ವಿಷ ತಂದುಕೊಟ್ಟು ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ, ಪ್ರಿಯಕರ ದಿಲೀಪ್ ಹೆಗ್ಡೆ, ಬಾಯಿಬಿಡಲು ನಕ್ರಾ ಮಾಡುತ್ತಿದ್ದಾನೆ. ಈತನಿಂದ ಸಾಕಷ್ಟು ಸತ್ಯಗಳನ್ನು ಹೊರ ತರುವುದು ಬಾಕಿ ಇದೆ. ಹಾಗಾಗಿ ಇವನನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಮಾಡಿದೆ. 

ಪ್ರಕರಣದ ಕುರಿತು ಉಡುಪಿ ಎಸ್ಪಿ ಡಾ. ಅರುಣ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. ಪತಿ ಬಾಲಕೃಷ್ಣನಿಂದ ಇದ್ದರೆ ನಮ್ಮ ಸ್ನೇಹಕ್ಕೆ ಅಡ್ಡಿಯಾಗುತ್ತದೆ ಎಂದು ಪತ್ನಿ ಕೊಲೆ ಮಾಡಿದ್ದಾಳೆ. ಇಬ್ಬರ ಅಕ್ರಮ ಸಂಬಂಧಕ್ಕೆ ಪತಿ ಬದುಕಿರೋದೇ ಸಮಸ್ಯೆ ಎಂದು ಕೊಲೆಮಾಡಿರುವುದು ಸಾಬೀತಾಗಿದೆ. ಅಲ್ಲದೇ ಪ್ರತಿನಿತ್ಯ ಊಟದಲ್ಲಿ ಪತಿಗೆ ವಿಷ ಬೆರೆಸಿಕೊಡುತ್ತಿದ್ದ ಪತ್ನಿ ಪ್ರತಿಮಾ, ಪ್ಲ್ಯಾನ್ ಪ್ರಕಾರ ಪತಿಯನ್ನು ಸಾಯುಸಲು ಪ್ರಿಯಕರನನ್ನ ಮನೆಗೆ ಕರೆಸಿದ್ದಳು ಎಂದು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.

1 ವರ್ಷದ ಮನೆ ಕಟ್ಟಿಸಿ ಹೆಂಡತಿ ಮಕ್ಕಳನ್ನ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಬಾಲಕೃಷ್ಣ ಪೂಜಾರಿಯನ್ನು ಪತ್ನಿ ಕೊಂದಿದ್ದಾಳೆ. ಮನೆ ತುಂಬಾ ಅನ್ಯೋನ್ಯವಾಗಿ ಇರುವ ಫೋಟೋಗಳನ್ನು ಜೋಡಿಸಿರುವ ಕತರ್ನಾಕ್ ಸುಂದರಿ ಗಂಡನ ಜೊತೆ ಮಲಗಿ ಸುಖ ಸಂಸಾರ ಮಾಡಿದ ಬೆಡ್ ರೂಮ್ ನಲ್ಲೆ ಉಸಿರು ನಿಲ್ಲಿಸಿ ಬಿಟ್ಟಿದ್ದಾಳೆ. 

Share This Article
Leave a comment