ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಪಾರು

public wpadmin

ಚಾಮರಾಜನಗರ: ಬೈಕ್ ಸವಾರನೊಬ್ಬ ಕಾಡಾನೆಗಳ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಬಂಡೀಪುರದಲ್ಲಿ ನಡೆದಿದೆ.

ಬಂಡೀಪುರ – ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಊಟಿ ಕಡೆಯಿಂದ ಬರುತ್ತಿದ್ದ ಬೈಕ್ ಸವಾರನಿಗೆ ಕಾಡಾನೆ ಎದುರಾಗಿದ್ದು, ಏಕಾಏಕಿ ದಾಳಿ ನಡೆಸಲು ಮುಂದಾಗಿದೆ. ಇದರಿಂದ ಗಾಬರಿಗೊಂಡ ಬೈಕ್ ಸವಾರ ಬೈಕ್ ಬಿಟ್ಟು ಕಾಡಿನತ್ತ ಓಡುವಾಗ ಮತ್ತೆ ಕಾಡಾನೆಗಳ ಹಿಂಡಿನೊಳಗೆ ಸಿಲುಕಿದ್ದಾನೆ. 

ಅದೃಷ್ಟವಶಾತ್ ಕಾಡಾನೆಗಳು ದಾಳಿ ಮಾಡದೆ ಕಾಡಿನೊಳಗೆ ತೆರಳಿವೆ. ಈ ಎಲ್ಲಾ ದೃಶ್ಯಗಳನ್ನು ಸಮೀಪದಲ್ಲೇ ಇದ್ದ ವಾಹನ ಸವಾರರು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share This Article
Leave a comment