ಕಂಬಿ ಹಿಂದೆ ಇದ್ದುಕೊಂಡೇ ಎದುರಾಳಿಗಳ ಆಟವಾಡಿಸಿದ ಸ್ಪರ್ಧಿ..!

public wpadmin

ಬಿಗ್​ಬಾಸ್​ ಮನೆಯಲ್ಲಿ ಇವತ್ತು ಕಿಚ್ಚನ ಪಂಚಾಯ್ತಿ ನಡೆಯಲಿದೆ. ತಪ್ಪು ಮಾಡಿದ ಯಾವೆಲ್ಲ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಲು ಬಿಗ್​​ಬಾಸ್ ವೀಕ್ಷಕರು ಫುಲ್ ಎಕ್ಸೈಟ್ ಆಗಿದ್ದಾರೆ. ಇದರ ನಡುವೆ ನಿನ್ನೆ ರಜತ್ ಜೈಲು ಸೇರಿದ ಮೇಲೆ ಮನೆಯಲ್ಲಿ ಏನಾಯ್ತು ಅನ್ನೋದ್ರ ಬಗ್ಗೆ ಪ್ರೊಮೋ ಒಂದನ್ನು ಕಲರ್ಸ್​ ಕನ್ನಡ ರಿಲೀಸ್ ಮಾಡಿದೆ.

ವಿಡಿಯೋದಲ್ಲಿ ರಜತ್ ಅವರು, ಬಿಗ್​ಬಾಸ್ ಮನೆಯ ಇತರೆ ಸ್ಪರ್ಧಿಗಳನ್ನು ಚೆನ್ನಾಗಿ ಆಟವಾಡಿಸಿದಂತೆ ಕಾಣ್ತಿದೆ. ನಿನ್ನೆಯ ದಿನ ರಜತ್ ಬಿಗ್​ಬಾಸ್ ಮನೆಯಲ್ಲಿರುವ ಜೈಲು ಸೇರಿದ್ದಾರೆ. ಕಳಪೆ ಮತ್ತು ಉತ್ತಮ ವಿಚಾರದಲ್ಲಿ ಬಹುತೇಕ ಸ್ಪರ್ಧಿಗಳು ರಜತ್ ಅವರ ಹೆಸರನ್ನು ತೆಗೆದುಕೊಂಡರು. ಪರಿಣಾಮ ರಜತ್ ಬೇಸರದಲ್ಲಿ ಜೈಲಿಗೆ ಹೋಗಿದ್ದಾರೆ.

https://twitter.com/i/status/1860140590127808647

ಜೈಲು ಸೇರಿದ ರಜತ್​ಗೆ ಶಿಕ್ಷೆಯ ಮುಂದುವರಿದ ಭಾಗವಾಗಿ ಅಡುಗೆಗೆ ಬೇಕಾಗಿದ್ದ ತರಕಾರಿಗಳನ್ನು ಕಟ್ ಮಾಡಿಕೊಡಬೇಕಿತ್ತು. ಅಂತೆಯೇ ನಿರ್ಗಮಿತ ಕ್ಯಾಪ್ಟನ್ ಭವ್ಯಗೌಡ ಅವರು ಅಡುಗೆಗೆ ಬೇಕಾದ ತರಕಾರಿಗಳನ್ನು ಕಟ್ ಮಾಡುವಂತೆ ರಜತ್​​ಗೆ ನೀಡುತ್ತಾರೆ. ಅದಕ್ಕೆ ತಿರುಗೇಟು ನೀಡಿರುವ ರಜತ್​​, ನಾನು ಕಟ್ ಮಾಡುತ್ತೇನೆ, ಆದರೆ ಎರಡು ಗಂಟೆ ಕಾಯಬೇಕು. ಅದು ಕೂಡ ನನಗೆ ಹೆಂಗೆ ಬೇಕೋ ಹಾಗೆ​ ಕಟ್ ಮಾಡ್ತೇನೆ. ನನಗೆ ಕಳಪೆ ಕೊಡ್ತಾರೆ, ಕಾಯಿರಿ. ನನಗೆ ಅನಿಸಿದಾಗ ಕಟ್ ಮಾಡಿಕೊಡ್ತೀನಿ.. ಏನ್ ಮಾಡ್ತೀರಿ ಇವಾಗ? ಏನೂ ಮಾಡೋಕೆ ಆಗಲ್ಲ. ನಂಗೂ ಹೊಟ್ಟೆ ಉರಿತಾ ಇಲ್ವಾ? ಎಂದು ತಮಾಷೆ ಮಾಡಿದ್ದಾರೆ.

Share This Article
Leave a comment