ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಪರಭಾಷೆಯ ಸಿನಿಮಾಗಳಲ್ಲಿ ಮಿಂಚಲು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅರ್ಜುನ್ ಸರ್ಜಾ ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ನಿರಂಜನ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಿನಿಮಾಗೆ ಟೈಟಲ್ ಕೂಡ ಫಿಕ್ಸ್ ಆಗಿದೆ.
ಪುತ್ರಿ ಐಶ್ವರ್ಯಾ ಸರ್ಜಾ ಮತ್ತು ನಿರಂಜನ್ ಜೋಡಿಯಾಗಿ ನಟಿಸಲಿರುವ ಸಿನಿಮಾಗೆ ‘ಸೀತಾ ಪಯಣ’ ಎಂಬ ಕ್ಯಾಚಿ ಟೈಟಲ್ ಅನ್ನೇ ಅರ್ಜುನ್ ಸರ್ಜಾ ಫೈನಲ್ ಮಾಡಿದ್ದಾರೆ. ಸದ್ಯ ಬಹುಭಾಷೆಗಳಲ್ಲಿ ಮೂಡಿ ಬರಲಿರುವ ಈ ಚಿತ್ರದ ಟೈಟಲ್ ನೋಡಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇದೊಂದು ಲವ್ ಸ್ಟೋರಿ ಕುರಿತಾದ ಸಿನಿಮಾ ಅನ್ನೋದು ಖಾತ್ರಿಯಾಗಿದೆ.
ಇನ್ನೂ ‘ಪ್ರೇಮ ಬರಹ’ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಡೈರೆಕ್ಷನ್ ಮಾಡಿರುವ ಅರ್ಜುನ್ ಸರ್ಜಾ ಈ ಬಾರಿ ವಿಭಿನ್ನವಾಗಿರುವ ಕಥೆಯೊಂದನ್ನು ರೆಡಿ ಮಾಡಿದ್ದಾರೆ. ನಿರಂಜನ್ ಸುಧೀಂದ್ರ, ಪುತ್ರಿ ಐಶ್ವರ್ಯಾ ಸರ್ಜಾ ಈ ಇಬ್ಬರನ್ನು ಜೋಡಿಯಾಗಿ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ. ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಳ್ತಿರೋದ್ರಿಂದ ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿದೆ. ಅಂದಹಾಗೆ, ನಿರಂಜನ್ ಈಗಾಗಲೇ ಸೆಕೆಂಡ್ ಹಾಫ್, ನಮ್ಮ ಹುಡುಗರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಸೂಪರ್ ಸ್ಟಾರ್, ಹಂಟರ್, ಸೀತಾ ಪಯಣ ಸೇರಿದಂತೆ ಹಲವು ಚಿತ್ರಗಳು ಅವರ ಕೈಯಲ್ಲಿವೆ.