ದಾಂಪತ್ಯ ಜೀವನದಲ್ಲಿ ಪ್ರೀತಿ, ಗೌರವ ಮತ್ತು ಪರಸ್ಪರ ಹೊಂದಾಣಿಕೆ ಇರುವುದು ಬಹಳ ಮುಖ್ಯ. ಆದರೆ ಕೆಲವೊಮ್ಮೆ ಕೆಲವು ನಡವಳಿಕೆಗಳು ಸಂಬಂಧವನ್ನೇ ಹಾಳು ಮಾಡಿ ಬಿಡುತ್ತದೆ. ಇದರಿಂದ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ಸದ್ಯ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುವ 5 ನಡವಳಿಗಳು ಯಾವುವು ಎಂಬುವುದರ ಬಗ್ಗೆ ನಾವಿಂದು ತಿಳಿಯೋಣ ಬನ್ನಿ.
ನಿರ್ಲಕ್ಷ್ಯ ಮತ್ತು ಸಂವಹನದ ಕೊರತೆ: ಯಾವುದೇ ಸಂಬಂಧವೇ ಆಗಿರಲಿ ಇಬ್ಬರು ಪರಸ್ಪರ ನಿರ್ಲಕ್ಷ್ಯವಹಿಸಲು ಆರಂಭಿಸಿದಾಗ, ಮನ ಬಿಚ್ಚಿ ಜಮಾತನಾಡದಿದ್ದಾಗ, ಇದು ಸಂಬಂಧ ಹಾಳಾಗುವ ಸೂಚನೆ ಎಂದೇ ಹೇಳಬಹುದು.
ದಂಪತಿಗಳ ನಡುವೆ ಮಾತು ಬಹಳ ಮುಖ್ಯ. ಕೇವಲ ಅವಶ್ಯಕತೆ ಇದ್ದಾಗ, ಪ್ರಮುಖ ವಿಚಾರಗಳ ಬಗ್ಗೆ ಮಾತ್ರ ಚರ್ಚಿಸಲು ಮಾತನಾಡುವುದಾದರೆ, ಇದು ಮುಂದೊಂದು ದಿನ ಗಂಭೀರ ಸಮಸ್ಯೆಯನ್ನು ಉಂಟು ಮಾಡುತ್ತದೆ.
ಸಂಗಾತಿ ತನ್ನ ಅಗತ್ಯಗಳು ಮತ್ತು ಆಸೆಗಳನ್ನು ಈಡೇರಿಸಿಕೊಳ್ಳಲು ಮಾತ್ರ ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಿದ್ದರೆ, ನಿಮ್ಮ ಭಾವನೆಗಳು ಮತ್ತು ಅಗತ್ಯತೆಗಳಿಗೆ ಬೆಲೆ ನೀಡದಿದ್ದರೆ, ಇದು ನಿಮ್ಮ ಸಂಬಂಧವನ್ನು ಹಾಳು ಮಾಡುತ್ತದೆ.
ಮದುವೆ ಎಂಬುವುದು ಪರಸ್ಪರ ಹೊಂದಾಣಿಕೆ ಮತ್ತು ಅರ್ಥ ಮಾಡಿಕೊಳ್ಳುವುದರ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಒಬ್ಬ ವ್ಯಕ್ತಿ ತಮ್ಮ ಹಿತಾಸಕ್ತಿಗೆ ಮಾತ್ರ ನಿಮ್ಮನ್ನು ಬಳಸಿಕೊಳ್ಳುತ್ತಿದ್ದರೆ, ಈ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ.
ಭಾವನಾತ್ಮಕ ಅಥವಾ ದೈಹಿಕ ಅಂತರ: ಸಂಬಂಧದಲ್ಲಿ ಭಾವನಾತ್ಮಕ ಮತ್ತು ದೈಹಿಕ ಸಂಪರ್ಕ ಬಹಳ ಮುಖ್ಯ. ಸಂಗಾತಿ ನಿಮ್ಮಿಂದ ಭಾವನಾತ್ಮಕವಾಗಿ ಅಥವಾ ದೈಹಿಕವಾಗಿ ಅಂತರವನ್ನು ಕಾಯ್ದುಕೊಳ್ಳಲು ಪ್ರಾರಂಭಿಸುತ್ತಿದ್ದರೆ, ಇದು ಸಂಬಂಧದಲ್ಲಿ ಉದ್ವೇಗ ಮತ್ತು ಅಸಮಾಧಾನವನ್ನು ಉಂಟು ಮಾಡಬಹುದು. ಈ ರೀತಿಯ ಅಂತರವು ಸಾಮಾನ್ಯವಾಗಿ ಸಂಬಂಧವನ್ನು ದುರ್ಬಲಗೊಳಿಸುತ್ತದೆ ಮತ್ತು ಇತರ ವ್ಯಕ್ತಿಯಲ್ಲಿ ಅಸುರಕ್ಷಿತ ಭಾವನೆಯನ್ನು ಉಂಟು ಮಾಡುತ್ತದೆ.
ಯಾವುದೇ ಕಾರಣವಿಲ್ಲದೆ ಅಸೂಯೆ ಮತ್ತು ಅನುಮಾನ: ಸಂಬಂಧದಲ್ಲಿ ಅನಗತ್ಯವಾದ ಅಸೂಯೆ ಮತ್ತು ಅನುಮಾನಗಳು ಪದೇ ಪದೇ ಉದ್ಭವಿಸುತ್ತಿದ್ದರೆ, ಇದು ಸಂಬಂಧವನ್ನು ಹಾಳು ಮಾಡುತ್ತದೆ. ಅನಗತ್ಯ ಅನುಮಾನ ಮತ್ತು ಅಸೂಯೆ ಪರಸ್ಪರರ ಮೇಲಿನ ನಂಬಿಕೆಯನ್ನು ನಾಶಪಡಿಸುತ್ತದೆ ಮತ್ತು ಸಂಬಂಧವನ್ನು ಹದಗೆಡಿಸುತ್ತದೆ.
ನಿಂದನೀಯ ಭಾಷೆ ಅಥವಾ ನಡವಳಿಕೆ: ದಾಂಪತ್ಯದಲ್ಲಿ ಸಂಗಾತಿ ಅವಾಚ್ಯ ಅಥವಾ ನಿಂದನೀಯ ಭಾಷೆಯನ್ನು ಬಳಸಿದರೆ ಅಥವಾ ಇನ್ನೊಬ್ಬರಿಗೆ ಭಾವನಾತ್ಮಕವಾಗಿ ನೋವುಂಟುಮಾಡಿದರೆ, ಇದು ಗಂಭೀರ ವಿಚಾರ. ಪ್ರೀತಿ ಮತ್ತು ಗೌರವವು ಯಶಸ್ವಿ ವೈವಾಹಿಕ ಜೀವನದ ಅಡಿಪಾಯವಾಗಿದೆ. ಆದರೆ ನಿಂದನೀಯ ಭಾಷೆಗಳು ಸಂಬಂಧವನ್ನು ದುರ್ಬಲಗೊಳಿಸುತ್ತದೆ.