ಆಪರೇಷನ್‌ಗೆ ದರ್ಶನ್ ಹಿಂದೇಟು- ಮುಂದಿನ 10 ದಿನಗಳ ಕಾಲ ಚಿಕಿತ್ಸೆ ಹೇಗಿರಲಿದೆ:

public wpadmin

ಬೆಂಗಳೂರು: ಆರೋಪಿ ದರ್ಶನ್ (Darshan) ಬಿಜಿಎಸ್ ಆಸ್ಪತ್ರೆಯಲ್ಲಿ (BGS Hospital) ಚಿಕಿತ್ಸೆ ಪಡೆಯುತ್ತಿದ್ದು, ಬೆನ್ನು ಮತ್ತು ಕಾಲುನೋವಿಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ತಿಳಿಸಿದ್ದರು. ಆದರೆ ದರ್ಶನ್ ಆಪರೇಷನ್‌ಗೆ ಹಿಂದೇಟು ಹಾಕುತ್ತಿದ್ದು, ಮುಂದಿನ 10 ದಿನಗಳ ಕಾಲ ಕನ್ಸರ್ವೇಟಿವ್ ಚಿಕಿತ್ಸೆ ಕೊಡಲು ನಿರ್ಧರಿಸಲಾಗಿದೆ.

ನಟ ದರ್ಶನ್‌ಗೆ ಈಗಾಗಲೇ ಕನ್ಸರ್ವೇಟಿವ್ ಚಿಕಿತ್ಸೆ ನೀಡುತ್ತಾ ಇದ್ದು, ಔಷಧಿ ಮತ್ತು ಮಾತ್ರೆಗಳನ್ನ ನೀಡಿ ಗುಣಮುಖ ಮಾಡಲು ಮುಂದಾಗಿದ್ದಾರೆ. ಸದ್ಯಕ್ಕೆ ದರ್ಶನ್‌ಗೆ ಬೆನ್ನು ನೋವು ಮತ್ತು ಕಾಲು ನೋವು ಇನ್ನೂ ಕಡಿಮೆ ಆಗುತ್ತಿಲ್ಲ. ಹೀಗಾಗಿ ಮುಂದಿನ 10 ದಿನಗಳ ಕಾಲ ಕೂಡ ಕನ್ಸರ್ವೇಟಿವ್ ಚಿಕಿತ್ಸೆ ಕೊಡಲು ಮುಂದಾಗಿದ್ದಾರೆ.

ಕನ್ಸರ್ವೇಟಿವ್ ಚಿಕಿತ್ಸೆಯಲ್ಲಿ ಹುಷಾರಾಗದಿದ್ದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತೆ. ಒಂದು ವೇಳೆ ಶಸ್ತ್ರಚಿಕಿತ್ಸೆ ಒಪ್ಪದಿದ್ದರೆ ಹೆಚ್ಚಿನ ಚಿಕಿತ್ಸೆ ಅಥವಾ ನುರಿತ ವೈದ್ಯರಿಂದ ಚಿಕಿತ್ಸೆ ಪಡೆಯಲು ಆಸ್ಪತ್ರೆ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಮುಂದಿನ 10 ದಿನಗಳ ಕಾಲ ಚಿಕಿತ್ಸೆ ಹೇಗಿರಲಿದೆ:

  • 10 ದಿನಗಳ ಕಾಲ ಮುಂದುವರೆಯಲಿರೋ ಕನ್ಸರ್ವೇಟಿವ್ ಚಿಕಿತ್ಸೆ.
  • ಔಷದಿ, ಮಾತ್ರೆಗಳನ್ನ ನೀಡಿ ಗುಣಮುಖ ಮಾಡಲು ಪ್ರಯತ್ನಿಸುತ್ತಿರೋ ವೈದ್ಯರು.
  • ಸ್ಟ್ರೇಚ್ಚಿಂಗ್ ಎಕ್ಸಾಸೈಸ್ ಮಾಡಿಸಿ ಮೂಳೆ ನೋವನ್ನ ಗುಣಪಡಿಸಲಿರೋ ವೈದ್ಯರು.
  • ಬೆನ್ನು ನೋವು ಇರುವ ಭಾಗಕ್ಕೆ ಅಲ್ಟ್ರಾ ಸೌಂಡ್, ಶಾಖಾ ನೀಡಲಾಗುತ್ತದೆ.
  • ಒಂದಷ್ಟು ಸ್ಟ್ರೇಚರ್ ವ್ಯಾಯಾಮ ಮಾಡಿಸಲಿದ್ದಾರೆ.
  • ಸ್ಟ್ರೇಚ್ಚಿಂಗ್ ವ್ಯಾಯಾಮ ಮಾಡಿಸಿ ವಿಶ್ರಾಂತಿ ನೀಡಲಿದ್ದಾರೆ.
  • ಎರಡು ವಾರಗಳ ಕಾಲ ಪಿಜಿಯೋಥೆರಪಿ ಮಾಡಿ ಗುಣಮುಖ ಆಗದಿದ್ದರೆ ಕೊನೆಯ ಅಸ್ತ್ರ ಶಸ್ತ್ರಚಿಕಿತ್ಸೆ.
  • ಕನ್ಸರ್ವೇಟಿವ್ ಚಿಕಿತ್ಸೆಯಲ್ಲಿ ಗುಣಮುಖ ಆಗದಿದ್ದರೆ ನುರಿತ ವೈದ್ಯರ ಚಿಕಿತ್ಸೆ ಬೇರೆ ಆಸ್ಪತ್ರೆಗೆ ಹೋಗೋ ಸಾಧ್ಯತೆ ಇದೆ.
Share This Article
Leave a comment