ನ್ಯೂಯಾರ್ಕ್: ಕುತೂಹಲ ಮೂಡಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಇಂದು ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 11:30 ಕ್ಕೆ ಅಂತ್ಯವಾಗಲಿದೆ. ಇಲ್ಲಿವರೆಗೆ ಲಭ್ಯವಿರುವ ಮಾಹಿತಿ ಪ್ರಕಾರ, ರಿಪಬ್ಲಿಕನ್‌ನ ಡೊನಾಲ್ಡ್ ಟ್ರಂಪ್ 10 ರಾಜ್ಯಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಕೆಂಟುಕಿ, ಇಂಡಿಯಾನಾ, ವೆಸ್ಟ್ ವರ್ಜೀನಿಯಾ, ಅಲಬಾಮಾ, ಟೆನ್ನೆಸ್ಸೀ, ಮಿಸೌರಿ, ಒಕ್ಲಹೋಮ, ಫ್ಲೋರಿಡಾ, ಸೌತ್ ಕೆರೊಲಿನಾ, ಅರ್ಕಾನ್ಸಾಸ್ ರಾಜ್ಯಗಳಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್‌ನ ಕಮಲಾ ಹ್ಯಾರಿಸ್ ಅವರು 7 ಸ್ವಿಂಗ್ ರಾಜ್ಯಗಳಲ್ಲಿ ತಲಾ ಎರಡು ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅರಿಜೋನಾ, ಜಾರ್ಜಿಯಾ, ಮಿಚಿಗನ್, ನೆವಾಡಾ, ಉತ್ತರ ಕೆರೊಲಿನಾ, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ ರಾಜ್ಯಗಳಲ್ಲಿನ ಗೆಲುವೇ ನಿರ್ಣಾಯಕವಾಗಿದೆ.
ಡೊನಾಲ್ಡ್ ಟ್ರಂಪ್ 177 ಸ್ಥಾನಗಳಲ್ಲಿ ಮುಂದಿದ್ದರೆ, ಕಮಲಾ ಹ್ಯಾರಿಸ್ (Kamala Harris) 99 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಪಶ್ಚಿಮ ವರ್ಜೀನಿಯಾದಲ್ಲಿ ಟ್ರಂಪ್ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಮಿಸ್ಸಿಸ್ಸಿಪ್ಪಿ, ಅಲಬಾಮಾ, ಒಕ್ಲಹೋಮ, ಟೆನ್ನೆಸ್ಸೀ, ದಕ್ಷಿಣ ಕೆರೊಲಿನಾ ಮತ್ತು ಅರ್ಕಾನ್ಸಾಸ್‌ನಲ್ಲಿ ಟ್ರಂಪ್ ಜಯಗಳಿಸಿದ್ದಾರೆ.