ಮನುಷ್ಯ ಏನು ತಿಂದರೂ, ಕುಡಿದರೂ ಅದಕ್ಕೊಂದು ನಿಯಮವಿದೆ. ಕುಳಿತುಕೊಂಡು ಏನು ತಿನ್ನಬೇಕು (Eating) ಮತ್ತು ಕುಡಿಯಬೇಕು (Drinking) ಎಂದು ಅನೇಕರಿಗೆ ತಿಳಿದಿಲ್ಲ. ಏಕೆಂದರೆ ಯಾವುದೇ ತಪ್ಪು (Wrong) ರೀತಿಯಲ್ಲಿ ತಿನ್ನುವುದು ಅಥವಾ ಕುಡಿಯುವುದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇದಕ್ಕಾಗಿ ನಿಯಮಗಳ ಪ್ರಕಾರ ಆಹಾರ ಮತ್ತು ಪಾನೀಯಗಳನ್ನು ತೆಗೆದುಕೊಳ್ಳಬೇಕು. ಅದೇ ರೀತಿ ಕುಡಿಯುವ ನೀರಿಗೆ ಕೆಲವು ನಿಯಮಗಳಿವೆ ಆದರೆ ಅನೇಕರಿಗೆ ಈ ನಿಯಮಗಳ ಬಗ್ಗೆ ತಿಳಿದಿಲ್ಲ.
ನಮ್ಮ ದೇಹಕ್ಕೆ ನೀರು ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ನೀರು ನಮ್ಮ ದೇಹದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸುವಂತಹ ಇತರ ಪ್ರಯೋಜನಗಳನ್ನು ಸಹ ಮಾಡುತ್ತದೆ. ಆದರೆ ಈ ಎಲ್ಲಾ ಆರೋಗ್ಯ ಪ್ರಯೋಜನಗಳು ನೀವು ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇವಿಸಿದರೆ ಮಾತ್ರ ಸಾಧ್ಯ. ಹೌದು, ಹೆಚ್ಚಿನ ಜನರು ನಿಂತುಕೊಂಡು ನೀರು ಕುಡಿಯುತ್ತಾರೆ. ನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಬಹಳಷ್ಟು ಜನರು ನಿಂತುಕೊಂಡೇ ನೀರನ್ನು ಕುಡಿಯುತ್ತಾರೆ. ಹೀಗೆ ನಿಂತು ನೀರು ಕುಡಿಯೋ ಅಭ್ಯಾಸ ಒಳ್ಳೆಯದಲ್ಲ ಅಂತ ಹಿರಿಯರು ಹೇಳೋದನ್ನು ಕೇಳಿರಬಹುದು.
ನೀವು ಕುಳಿತು ನೀರು ಕುಡಿದರೆ ಅದು ನಿಮಗೆ ಪ್ರಯೋಜನಕಾರಿಯಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇನ್ನು ನಿಂತು ನೀರನ್ನು ಕುಡಿದರೆ ಹಲವು ಅನಾನುಕೂಲಗಳು ಇವೆ. ನಿಂತು ನೀರನ್ನು ಕುಡಿಯುವುದರಿಂದ, ಅದು ನೇರವಾಗಿ ಹೊಟ್ಟೆಯನ್ನು ಪ್ರವೇಶಿಸುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ನಿಮ್ಮ ಜೀರ್ಣಾಂಗ ವ್ಯವಸ್ಥೆಯು ತೊಂದರೆಗೊಳಗಾಗುತ್ತದೆ.
ನಿಂತು ನೀರು ಕುಡಿಯುವುದರಿಂದ ಸಂಧಿವಾತ ಉಂಟಾಗಬಹುದು ಎಚ್ಚರ. ನಿಂತುಕೊಂಡು ನೀರು ಕುಡಿಯುವುದರಿಂದ ಕೀಲುಗಳಲ್ಲಿ ನೀರು ಸಂಗ್ರಹವಾಗಿ ಸಂಧಿವಾತ ಉಂಟಾಗುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ನಿಂತುಕೊಂಡು ನೀರು ಕುಡಿಯುವುದರಿಂದ ದೇಹದಲ್ಲಿ ದ್ರವದ ಸಮತೋಲನ ತೊಂದರೆಗೊಳಗಾಗುವುದರ ಜೊತೆಗೆ ಟಾಕ್ಸಿನ್ ಶೇಖರಣೆಯನ್ನು ಹೆಚ್ಚಿಸುತ್ತದೆ. ಇದು ಸಂಧಿವಾತ ಸಮಸ್ಯೆಗಳನ್ನು ಪ್ರಚೋದಿಸುತ್ತದೆ ಎಂದು ಹೇಳಲಾಗಿದೆ.
ನೀರು ಮೂಲತಃ 100% ಮೌಖಿಕ ಜೈವಿಕ ಲಭ್ಯತೆಯನ್ನು ಹೊಂದಿದೆ. ಇದು ಕರುಳಿನ ಗೋಡೆಯ ಮೂಲಕ ಮುಖ್ಯವಾಗಿ ಸಣ್ಣ ಕರುಳಿನಲ್ಲಿ ವೇಗವಾಗಿ ಹೀರಲ್ಪಡುತ್ತದೆ. ಹೀರಿಕೊಳ್ಳುವಿಕೆಯು ವೇಗವಾಗಿರುತ್ತದೆ. ಮುಖ್ಯವಾಗಿ ಸಣ್ಣ ಕರುಳಿನ ಆರಂಭಿಕ ಭಾಗದಲ್ಲಿ ಸಂಭವಿಸುತ್ತದೆ. ನಂತರ ಹೀರಿಕೊಳ್ಳುವ ನೀರನ್ನು ದೇಹದ ದ್ರವದ ವಿಭಾಗಗಳಲ್ಲಿ 66% ಅಂತರ್ಜೀವಕೋಶದ ದ್ರವಕ್ಕೆ, 25.5% ಅಂತರದ ದ್ರವಕ್ಕೆ ಮತ್ತು 8.5% ಪರಿಚಲನೆಯ ರಕ್ತದ ಪರಿಮಾಣಕ್ಕೆ ಹಂಚಲಾಗುತ್ತದೆ.
ಪ್ರತಿಯೊಬ್ಬರೂ ಒಂದು ದಿನಕ್ಕೆ ಹೆಚ್ಚು ನೀರು ಕುಡಿಯಿರಿ. ನಿಮ್ಮ ಖನಿಜ ಸೇವನೆಯ ಬಗ್ಗೆ ಖಚಿತಪಡಿಸಿಕೊಳ್ಳಿ. ಹೆಚ್ಚು ನೀರು ಕುಡಿಯಲು ನೀವು ಕೆಲವಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಉದಾಹರಣೆಗೆ ನಿಮಗೆ ಬರೀ ನೀರು ಕುಡಿಯಲು ಇಷ್ಟವಿಲ್ಲ ಎಂದಾದರೆ ಎಳನೀರು, ಮನೆಯಲ್ಲಿ ತಯಾರಿಸಿದ ತಾಜಾ ಹಣ್ಣಿನ ರಸ, ಮಜ್ಜಿಗೆ, ನಿಂಬೆ ಜ್ಯೂಸ್ ಮತ್ತು ಸ್ಮೂಥಿಗಳನ್ನು ನೀವು ಕುಡಿಯಬಹುದು. ಒಟ್ಟಿನಲ್ಲಿ ಯಾವುದಾದರೂ ರೂಪದಲ್ಲಿ ಹೆಚ್ಚು ನೀರು ಕುಡಿಯುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.