
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ, ಸೃಜನ್ ಲೋಕೇಶ್ ನಿರೂಪಣೆಯ ಮಜಾ ಟಾಕೀಸ್ ನಲ್ಲಿ ಸೋನಲ್ ಭಾಗಿಯಾಗಿದ್ರು. ಈ ವೇಳೆ ಸೃಜನ್ ಕೇಳಿ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ನಿಮ್ಮ ತರುಣ್ ಲವ್ ಸ್ಟೋರಿ ಶುರುವಾಗಿದ್ದು ಹೇಗೆ? ನಿಮ್ಮ ಸ್ನೇಹಿತೆ ಕೂಡ ತರುಣ್ ನನ್ನೇ ಲವ್ ಮಾಡ್ತಿದ್ರಂತೆ ನಿಜನಾ ಎಂಬ ಪ್ರಶ್ನೆಗೆ ಸೋನಾಲ್ ಉತ್ತರ ಕೊಟ್ಟಿದ್ದಾರೆ.
ನಿಮ್ಮ ಫ್ಯಾಮಿಲಿಗೆ ತರುಣ್ನನ್ನು ಪರಿಚಯ ಮಾಡಿಸಿದ್ದು ಒಂದು ಐತಿಹಾಸಿಕ ಘಟನೆಯಂತೆ ನಿಜನಾ ಎಂಬ ಸೃಜನ್ ಪ್ರಶ್ನೆಗೆ ಸೋನಲ್ ನಗುತ್ತಾ ಉತ್ತರ ನೀಡಿದ್ರು. ನನ್ನ ಫ್ಯಾಮಿಲಿ ನಿಜಕ್ಕೂ ಅವರು ಭಯಪಟ್ಟಿದ್ರು. ತಮ್ಮ ಮದುವೆ ಸಮಯದಲ್ಲಿ ನಡೆದ ಘಟನೆ ವಿವರಿಸಿದ್ರು.
ಹಿಂದೂ ಸಂಪ್ರದಾಯದಲ್ಲಿ ಅರಿಶಿನ ಶಾಸ್ತ್ರದಂತೆ ನಮ್ಮ ಕ್ರಿಶ್ಚಿಯನ್ ಪದ್ಧತಿಯಲ್ಲೂ ರೋಸ್ ಅಂತ ಇರುತ್ತೆ. ಕೊಬ್ಬರಿ ಎಣ್ಣೆ ಹಾಕ್ತಾರೆ. ಗ್ರ್ಯಾಂಡ್ ವೆಲ್ ಕಮ್ ಕೊಟ್ಟಿದ್ರು. ಅವರಿಗೂ ಇಷ್ಟ ಆಯ್ತು ಸೋನಲ್ ನಿಮ್ಮ ಫ್ಯಾಮಿಲಿಯವರು ತುಂಬಾ ಸ್ವೀಟ್ ಅಂದಿದ್ರು.

ತರುಣ್ ಹೀಗೆ ಅಂದ ಗಂಟೆಯಲ್ಲೇ ಮನೆಯಲ್ಲಿ ಬಾರ್ ಓಪನ್ ಆಯ್ತು. ಎಲ್ಲರೂ ಕುಡಿದು ಟೈಟ್ ಆದ್ರು. ನಮ್ ಅಂಕಲ್ ಅಲ್ಲಿ ಹುಲಿ ಡ್ಯಾನ್ಸ್ ಮಾಡ್ತಿದ್ದಾರೆ. ನಮ್ಮ ಅಮ್ಮ ರೈನ್ ಡ್ಯಾನ್ಸ್ ಶುರು ಮಾಡಿದ್ರು. ನಮ್ಮ ಮನೆಯಲ್ಲಿ ಜೂಸ್ ಕೊಟ್ರೆ ಕುಡಿಯಲು ತರುಣ್ ಅವರಿಗೆ ಭಯ ಅಂತ ಸೋನಲ್ ಹೇಳಿದ್ರು. (ಫೋಟೋ ಕೃಪೆ: ಸೋನಾಲ್ ಇನ್ಸ್ಟಾಗ್ರಾಮ್)
ನಿಮ್ಮ ಫ್ಯಾಮಿಲಿಯ ಫಸ್ಟ್ ಫೇಸ್ ಚೆನ್ನಾಗಿತ್ತು. ಈಗ ಇವರನ್ನು ನೋಡಿದ್ರೆ ನನಗೆ ಭಯವಾಗ್ತಿದೆ ಎಂದು ತರುಣ್ ಹೇಳಿದ್ರು. ಇದ್ರಿಂದ ನನಗೆ ಕಷ್ಟ ಕಷ್ಟ ಅನಿಸಿತು. ಇವತ್ತು ಒಂದು ದಿನಾದ್ರೂ ಕುಡಿಯಾದೆ ಮರ್ಯಾದೆ ತೆಗೆಯದೇ ಇರಿ ಅಂತ ನಾನು ನನ್ನ ಫ್ಯಾಮಿಲಿ ಮಂದಿಯನ್ನು ಕೇಳಿಕೊಳ್ತಿದ್ದೆ ಅಂತ ಸೋನಲ್ ಹೇಳಿದ್ರು.
ನಿಮ್ಮ ನಡುವೆ ತ್ರಿಕೋನ ಪ್ರೇಮಕಥೆ ಇತ್ತಂತೆ ನಿಜನಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೋನಾಲ್, ನನ್ನ ಸ್ನೇಹಿತೆಗೆ ತರುಣ್ ಮೇಲೆ ಕ್ರಶ್ ಇತ್ತು. ರಾಬರ್ಟ್ ಸಿನಿಮಾ ಟೈಮ್ ನಲ್ಲಿ ಅವಳು ನನ್ನನ್ನು ಕೇಳ್ತಿದ್ದಳು. ನನಗೆ ಸೆಟ್ ಮಾಡಿಕೊಡು, ಅವರಿಗೆ ಹುಡುಗಿ ಹುಡುಕುತ್ತಿದ್ದಾರೆ. ಪ್ಲೀಸ್ ಪ್ಲೀಸ್ ಅಂತ ನನ್ನ ಬಳಿ ಕೇಳಿದ್ದಳು.
ಆದ್ರೆ ನಾನು ಹೇಗೆ ಈ ಬಗ್ಗೆ ತರುಣ್ ಬಳಿ ಮಾತಾಡಲಿ ಅಂತ ಸುಮ್ನೆ ಆಗಿದ್ದೆ. ಯೋಗರಾಜ್ ಸರ್ ಎಲ್ಲಾ ಸೇರಿಕೊಂಡು ಸೆಟ್ ನಲ್ಲಿ ಕೇಳ್ತಿದ್ರು. ನಿಮ್ಮ ಹಾಗೂ ತರುಣ್ ನಡುವೆ ಏನಾದ್ರೂ ನಡೀತಿದ್ಯಾ ಅಂತ. ನಾನು ಇದನ್ನು ತರುಣ್ ಅವರಿಗೆ ಹೇಳಿದೆ. ನೋಡಿ ಇವರೆಲ್ಲಾ ಈ ರೀತಿ ಮಾತಾಡ್ತಿದ್ದಾರೆ. ನನಗೆ ಆ ರೀತಿ ಏನಿಲ್ಲ ಎಂದು ಹೇಳಿದ್ದೆ.
ಎಲ್ಲರೂ ಮಾತಾಡುವ ನಮ್ಮ ಮಧ್ಯೆ ಏನೂ ನಡೀತಿರಲಿಲ್ಲ. ಆಮೇಲೆ ನಾವು ಮೆಸೇಜ್ ಮಾಡಲು ಶುರು ಮಾಡಿದ್ವಿ. ನನ್ನ ಫ್ರೆಂಡ್ ಪಾಪ ಇವತ್ತು ಬೇಜಾರ್ ಮಾಡಿಕೊಳ್ತಾಳೆ. ನಾನು ತರುಣ್ ನ ಜಾನು ಅಂತ ಕರೀಬೇಕಿತ್ತು. ಆದ್ರೆ ಜೀಜೂ ಅಂತ ಕೆರಯುವಂತೆ ಆಯ್ತು ಅಂತ ನಟಿ ಸೋನಲ್ ತ್ರಿಕೋನ ಪ್ರೇಮಕಥೆಯನ್ನು ಬಿಚ್ಚಿಟ್ರು.