Ravichandran ತಂದೆಗೆ 14 ಮಕ್ಕಳಿದ್ದರು, ಬದುಕಿದ್ದು 5; ಕ್ರೇಜಿಸ್ಟಾರ್ ಹುಟ್ಟಿದ್ದೂ ಪವಾಡವೇ!

public wpadmin

ರವಿಚಂದ್ರನ್ ಅವರು ಕನ್ನಡದ ಖ್ಯಾತ ನಟ ಹಾಗೂ ನಿರ್ಮಾಪಕರು. ಅವರು ಹಲವು ಪ್ರಯೋಗಾತ್ಮಕ ಚಿತ್ರಗಳನ್ನು ನೀಡಿದ್ದಾರೆ. ಅವರ ಖ್ಯಾತಿ ಸದ್ಯಕ್ಕೆ ಕಡಿಮೆ ಆಗುವಂಥದ್ದಲ್ಲ. ರವಿಚಂದ್ರನ್ ತಂದೆಯ ಬಗ್ಗೆ ಬಹುತೇಕರಿಗೆ ಗೊತ್ತಿದೆ. ಅವರೇ ಎನ್​. ವೀರಸ್ವಾಮಿ. ಇವರು ಕನ್ನಡದ ಖ್ಯಾತ ನಿರ್ಮಾಪಕರು ಆಗಿದ್ದರು.

ರವಿಚಂದ್ರನ್ ಅವರು ತಮ್ಮ ತಂದೆ ಹಾಗೂ ತಾಯಿ ಬಗ್ಗೆ ಕೆಲವು ಅಪರೂಪದ ಮಾಹಿತಿಯನ್ನು ಈ ಮೊದಲು ಹಂಚಿಕೊಂಡಿದ್ದರು.

ವೀರಸ್ವಾಮಿ ಕನ್ನಡದ ಖ್ಯಾತ ನಿರ್ಮಾಪಕರು. 1971ರ ‘ಕುಲ ಗೌರವ’ ಅವರ ನಿರ್ಮಾಣದ ಮೊದಲ ಸಿನಿಮಾ. 1972ರಲ್ಲಿ ರಿಲೀಸ್ ಆದ ‘ನಾಗರಹಾವು’ ಚಿತ್ರವನ್ನು ಅವರೇ ನಿರ್ಮಾಣ ಮಾಡಿದ್ದರು. ಈ ಚಿತ್ರದ ಗೆಲುವಿನ ನಂತರ ಅವರ ಖ್ಯಾತಿ ಹೆಚ್ಚಾಯಿತು. ‘ನಾ ನಿನ್ನ ಮರೆಯಲಾರೆ’, ‘ಪ್ರೇಮಲೋಕ’ ರೀತಿಯ ಚಿತ್ರಗಳನ್ನು ವೀರಸ್ವಾಮಿ ನಿರ್ಮಾಣ ಮಾಡಿದ್ದರು. ಒಟ್ಟೂ 17 ಕನ್ನಡ ಹಾಗೂ ಒಂದು ಹಿಂದಿ ಚಿತ್ರವನ್ನು ಅವರು ನಿರ್ಮಾಣ ಮಾಡಿದ್ದರು.

ವೀರಸ್ವಾಮಿ ಅವರಿಗೆ ಒಟ್ಟೂ 14 ಮಕ್ಕಳಿದ್ದರು! ಈ ಪೈಕಿ ಬದುಕಿದ್ದು ಕೇವಲ ಐದು ಮಂದಿ ಮಾತ್ರ! ಈ ವಿಚಾರವನ್ನು ರವಿಚಂದ್ರನ್ ಅವರು ಹೇಳಿಕೊಂಡಿದ್ದರು. ‘ನನ್ನ ತಂದೆಗೆ ಒಟ್ಟೂ 14 ಮಕ್ಕಳು. ಆ ಪೈಕಿ ಉಳಿದುಕೊಂಡಿದ್ದು 5. ನನ್ನ ಅಕ್ಕ ಹುಟ್ಟಿದ ಮೇಲೆ ನನ್ನ ತಾಯಿ ಪ್ರೆಗ್ನೆಂಟ್ ಆದರು. ಬೇಗ ಕಂಸೀವ್ ಆದರು ಎನ್ನುವ ಕಾರಣಕ್ಕೆ ಅವರು ಪಪ್ಪಾಯ ತಿಂದಿದ್ದರಂತೆ. ಮಗುನ ಹೊಟ್ಟೆಯಲ್ಲೇ ಕರಗಿಸುವ ಆಲೋಚನೆ ಅವರದ್ದಾಗಿತ್ತು’ ಎಂದಿದ್ದರು ರವಿಚಂದ್ರನ್.

‘ಪಪ್ಪಾಯ ತನ್ನ ಗುಣವನ್ನು ಮರೆತೇಬಿಟ್ಟಿತ್ತು. ಪಪ್ಪಾಯ ಅದರ ಗುಣ ತೋರಿಸಿದ್ದರೆ ನಾನು ಹುಟ್ಟುತ್ತಾ ಇರಲಿಲ್ಲ. ಅದು ತನ್ನ ಗುಣ ಮರೆತಿದ್ದಕ್ಕೆ ನಾನು ಹುಟ್ಟಿದೆ’ ಎಂದು ರವಿಚಂದ್ರನ್ ವಿವರಿಸಿದ್ದರು. ಪ್ರೆಗ್ನೆಂಟ್ ಆದ ಬಳಿಕ ಪಪ್ಪಾಯ ತಿನ್ನಬಾರದು ಎಂದು ವೈದ್ಯರು ಗರ್ಭಿಣಿಯರಿಗೆ ಸಲಹೆ ನೀಡುತ್ತಾರೆ.

ರವಿಚಂದ್ರನ್ ಅವರು ‘ಪ್ರೇಮಲೋಕ 2’ ಸಿನಿಮಾ ಮಾಡೋದಾಗಿ ಈ ಮೊದಲು ಹೇಳಿದ್ದರು. ಆದರೆ, ಇನ್ನೂ ಆ ಬಗ್ಗೆ ಘೋಷಣೆ ಆಗಿಲ್ಲ. ಈ ಬಗ್ಗೆ ಅಭಿಮಾನಿಗಳು ನಿರಂತರವಾಗಿ ಕಾಯುತ್ತಾ ಇದ್ದಾರೆ. ಆದರೆ ಮಾಹಿತಿ ಮಾತ್ರ ಸಿಕ್ಕಿಲ್ಲ.

Share This Article
Leave a comment