ಸ್ಯಾಂಡಲ್‌ವುಡ್‌ನ ಸೀರಿಯಲ್ ನಟಿ ನೇಹಾ ಗೌಡ ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋ ಶೂಟ್‌ನಲ್ಲಿ ನೇಹಾ ಗೌಡ ಸ್ವರ್ಗದಿಂದ ಧರೆಗಿಳಿದ ಅಪ್ಸರೆ ರೀತಿ ಕಾಣಿಸುತ್ತಿದ್ದಾರೆ. ಗರ್ಭಿಣಿ ಅಪ್ಸರೆ ಧರೆಗೆ ಇಳಿದ್ರೆ ಹೇಗಿರುತ್ತದೆಯೋ ಆ ರೀತಿಯ ಒಂದು ಕಲ್ಪನೆಯಲ್ಲಿಯ ಇಡೀ ಫೋಟೋ ಶೂಟ್ ಮಾಡಲಾಗಿದೆ.
ನೇಹಾ ಗೌಡ ಇಲ್ಲಿ ಬಿಳಿ ಸೀರೆಯುಟ್ಟಿದ್ದಾರೆ. ಸಿಂಪಲ್ ಅನಿಸೋ ಆಭರಣಗಳನ್ನ ಧರಿಸಿದ್ದಾರೆ. ರಾಣಿ ರೀತಿನೂ ಇಲ್ಲಿ ಕಂಗೊಳಿಸಿದ್ದಾರೆ. ಕಮಲಗಳೇ ಇರೋ ಕೊಳದ ಪಕ್ಕ ಕುಳಿತು ನೇಹಾ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಆದರೆ, ಇಲ್ಲಿ ತೆಗೆದ ಫೋಟೋಗಳ ಫೈನಲ್ ಔಟ್‌ಪುಟ್ ಬೇರೆ ಇದೆ.
ನೇಹಾ ಗೌಡ ಈ ರೀತಿ ಒಂದು ಫೋಟೋ ಶೂಟ್ ಕಲ್ಪನೆ ಮಾಡಿಕೊಂಡಿದ್ದರೋ ಇಲ್ವೋ ಗೊತ್ತಿಲ್ಲ. ಆದರೆ, ಕನಸಿನಂತೇನೆ ಇರೋ ಈ ಒಂದು ಪರಿಕಲ್ಪನೆಯ ಫೋಟೋಗಳನ್ನಇದೀಗ ತೆಗೆಯಲಾಗಿದೆ. ಇದನ್ನ ನೋಡಿದ ನೇಹಾ ಗೌಡ ತುಂಬಾನೆ ಖುಷಿಯಾಗಿದ್ದಾರೆ. ಒಂದು ರೀತಿ ಅದ್ಭುತ ಮತ್ತು ಅಮೋಘ ಅನ್ನೋ ಫೀಲ್ ಕೂಡ ಕೊಟ್ಟಿದೆ ನೋಡಿ.
ನೇಹಾ ಗೌಡ ಈ ಒಂದು ವಿಶೇಷ ಫೋಟೋ ಶೂಟ್ ಸಮಯದಲ್ಲಿ ನೇಹಾ ತುಂಬಾನೆ ಎಂಜಾಯ್ ಮಾಡಿದ್ದಾರೆ. ಪ್ರತಿ ಕ್ಷಣವನ್ನು ಕೂಡ ಎಂಜಾಯ್ ಮಾಡಿದ್ದಾರೆ. ಆ ಒಂದು ಖುಷಿಯ ಕ್ಷಣ ರೀಲ್ಸ್ ರೂಪದ ವಿಡಿಯೋದಲ್ಲೂ ಕಾಣಿಸುತ್ತದೆ. ನೇಹಾ ಗೌಡ ತಮ್ಮ ಈ ಒಂದು ವಿಶೇಷ ಫೋಟೋ ಶೂಟ್ ಕುರಿತು ಮಾತನಾಡಿದ್ದಾರೆ.
ನೇಹಾ ಗೌಡ ಜೀವನದಲ್ಲಿ ಈ ಒಂದು ಫೋಟೋ ಶೂಟ್ ತುಂಬಾನೆ ಸ್ಪೆಷಲ್ ಆಗಿದೆ. ಕನಸಿನಂತೆ ಕಾಣೋ ಈ ಒಂದು ಕಲ್ಪನೆಯನ್ನ ಚಿತ್ರೀಕರಿಸಿರೋ ಟೀಮ್‌ನ ಪ್ರತಿ ಸದಸ್ಯರಿಗೂ ಧನ್ಯವಾದಗಳು ಅಂತಲೂ ನೇಹಾ ಗೌಡ ಹೇಳಿಕೊಂಡಿದ್ದಾರೆ. ಹಾಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿಯೇ ಈ ಕ್ಷಣದ ಫೋಟೋ ಹಾಗೂ ವಿಡಿಯೋಗಳನ್ನ ಹಂಚಿಕೊಂಡಿದ್ದಾರೆ.