MUDA Case ವಿಚಾರಣೆ ಅಂತ್ಯ; ಕೂಲ್ ಆಗಿ ಶಿಳ್ಳೆ ಹೊಡೆಯುತ್ತಾ ಹೊರಬಂದ CM ಸಿದ್ದರಾಮಯ್ಯ!

public wpadmin

ಮೈಸೂರು: ಮುಡಾ ಕೇಸ್​ನಲ್ಲಿ (MUDA Case) ತನಿಖೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯಗೆ (CM Siddaramaiah) ಬುಲಾವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಸದ್ಯ ಮೈಸೂರಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಿ ಸತತ 2 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ. ಲೋಕಾಯುಕ್ತ (Karnataka Lokayukta) ಎಸ್​.ಪಿ. ಉದೇಶ್​​ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದು, ಸಿಎಂ ಆಗಮನ ಹಿನ್ನೆಲೆಯಲ್ಲಿ ಮೈಸೂರಿನ ಲೋಕಾಯುಕ್ತ ಕಚೇರಿ ಬಳಿ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿತ್ತು.

ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ಲೋಕಾ ಕಚೇರಿ ಸುತ್ತಲೂ ಖಾಕಿ ಕಣ್ಗಾವಲು ಜೋರಾಗಿದ್ದು, ವಿಚಾರಣೆ ಎದುರುಸಿ ಹೊರ ಬಂದ ಸಿಎಂ, ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ.

ಸಿಎಂಗೆ ಲೋಕಾಯುಕ್ತ ಎಸ್​ಪಿ ಹಲವು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡಿದ್ದಾರೆ. ಭೂ ಸ್ವಾಧೀನ, ಪರಿಹಾರ, ಡಿನೋಟಿಪಿಕೇಷನ್ ಹೇಗಾಯ್ತು? ಭೂ ಪರಿವರ್ತನೆ ವೇಳೆ ಸಿಎಂ ಆಗಿ ನಿಮ್ಮ ಪಾತ್ರ ಏನೇನಿತ್ತು? 50:50 ನಿಯಮದಡಿ ಸೈಟು ಹಂಚಿಕೆಗೆ ನೀವೇ ಶಿಫಾರಸ್ಸು ಮಾಡಿದ್ರಾ? ಸಿಎಂ ಆಗಿ ನೀವು ಯಾಱರಿಗೆ ಶಿಫಾರಸು ಪತ್ರಗಳನ್ನ ಕೊಟ್ಟಿದ್ರಿ? ಬೇರೆಡೆ ಬದಲಿ ನಿವೇಶನ ನೀಡಲು ಕಾರಣವೇನು? ಎಂಬಿತ್ಯಾದಿ ಪ್ರಶ್ನೆಗಳುನ್ನ ಲೋಕಾ ಪೊಲೀಸರು ಪ್ರಶ್ನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Share This Article
Leave a comment