
ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಆಗಮಿಸುವ ಭಕ್ತರನ್ನು ಬರಮಾಡಿಕೊಳ್ಳಲು ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿ ಸಿದ್ಧಗೊಂಡಿದೆ.
ಈ ಬಾರಿ ಕೊಯಮತ್ತೂರಿನ ಆದಿಯೋಗಿ ಸನ್ನಿಧಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಇತರ ಗಣ್ಯರು ಆಗಮಿಸಲಿದ್ದು, ಫೆ. 26ರಂದು ಸಂಜೆ 6ರಿಂದ ಫೆ. 27ರ ಬೆಳಗ್ಗೆ 6 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳು ಜರಗಲಿವೆ.
ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮಗಳ ನೇರ ಪ್ರಸಾರವಿರಲಿದೆ. ಇದರೊಂದಿಗೆ 150ಕ್ಕೂ ಹೆಚ್ಚು ಚಾನೆಲ್‌ಗಳ ಮೂಲಕ ನೇರಪ್ರಸಾರವಿರಲಿದ್ದು, ಇದರೊಂದಿಗೆ ಕಡಲೆಕಾಯಿ, ಜೋಳ ಮತ್ತು ಎಳನೀರು ಸೇರಿದಂತೆ ಸ್ಥಳೀಯವಾಗಿ ಬೆಳೆದ ಉತ್ಪನ್ನಗಳ ಮಾರಾಟ, ದೇಸಿ ತಳಿಯ ಜಾನುವಾರುಗಳ ಪ್ರದರ್ಶನ, ಜನಪ್ರಿಯ ವೀಡಿಯೋ ಇಮೇಜಿಂಗ್ ಪ್ರದರ್ಶನಗಳು ನಡೆಯಲಿವೆ ಎಂದು ಪ್ರಕಟನೆ ತಿಳಿಸಿದೆ. #publicnews24x7kannada