ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಸ್ಫೋಟಕ ಆರೋಪವೊಂದು ಕೇಳಿಬಂದಿದೆ.
ಹೌದು, ಮುನಿರತ್ನ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು 40 ವರ್ಷದ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಶಾಸಕ ಮುನಿರತ್ನ ತನ್ನ ವಿರೋಧಿಗಳನ್ನು ಹಣಿಯಲು ಎಚ್‌ಐವಿ ಸೋಂಕಿತ ಮಹಿಳೆಯರನ್ನು ಹನಿ ಟ್ರ್ಯಾಪ್ ಮಾಡಲು ಬಳಸಿಕೊಂಡಿದ್ದಾರೆ ಎಂದು ಸಂತ್ರಸ್ಥೆ ದೂರಿದ್ದಾರೆ.
ತನ್ನ ಪ್ರತಿಸ್ಪರ್ಧಿಯೊಬ್ಬರನ್ನು ಬಲೆಗೆ ಬೀಳಿಸಲು ಶಾಸಕರು ಬಳಸಿಕೊಂಡಿದ್ದರು ಎನ್ನಲಾದ ಮಹಿಳೆಯನ್ನು ಪೊಲೀಸರು ಶೀಘ್ರದಲ್ಲೇ ಎಚ್‌ಐವಿ ಪರೀಕ್ಷೆಗೆ ಒಳಪಡಿಸಲಿದ್ದಾರೆ.
ಇನ್ನು ದೂರುದಾರರನ್ನು ಹೆದರಿಸಲು ಮುನಿರತ್ನ ಏಡ್ಸ್ ಸೋಂಕಿತರನ್ನು ತಂತ್ರವಾಗಿ ಬಳಸಿಕೊಂಡಿರುವುದನ್ನು ತಳ್ಳಿಹಾಕಲಾವುದಿಲ್ಲ. ಹನಿ ಟ್ರ್ಯಾಪ್ ಸಂತ್ರಸ್ತರು ಶಾಸಕರ ವಿರುದ್ಧ ದೂರು ದಾಖಲಿಸುವ ಸಾಧ್ಯತೆ ಇದೆ. ಅಲ್ದೇ, ಹನಿ ಟ್ರ್ಯಾಪ್‌ಗೆ ಬಲಿಯಾದವರಲ್ಲಿ ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್ ಕೂಡ ಇದ್ದಾರೆ ಎನ್ನಲಾಗಿದೆ.
ಮತ್ತೊಂದ್ಕಡೆ ಹೀಗೆ ಕರೆದುಕೊಂಡು ಬಂದ ‘ಏಡ್ಸ್’ ರೋಗಿಗಳನ್ನ ನೇರವಾಗಿ ರಹಸ್ಯವಾದ ಜಾಗದಲ್ಲಿ ಇರಿಸಿ, ಆ ನಂತರ ಅವರ ಮೂಲಕ ಲೈಂಗಿಕ ಕ್ರಿಯೆಗೆ & ಅವರ ರಕ್ತ ಸಂಗ್ರಹಿಸಿ ತಮ್ಮ ರಾಜಕೀಯ ವಿರೋಧಿಗಳಿಗೆ ಚುಚ್ಚಿಸಲು ಖರ್ತನಾಕ್ ಐಡಿಯಾ ಮಾಡುತ್ತಿದ್ದರು ಎಂಬ ಗಂಭೀರ ಆರೋಪ ಮಾಡಲಾಗಿದೆ. ಈ ಆರೋಪವು ಕರ್ನಾಟಕದ ರಾಜಕೀಯದಲ್ಲಿ ಇದೀಗ ಸಂಚಲನ ಸೃಷ್ಟಿಸಿದೆ.