ಬೆಂಗಳೂರಿನಲ್ಲಿ ರೇಣುಕಾಸ್ವಾಮಿ ಪ್ರಕರಣದ ಚಾರ್ಜ್ ಶೀಟ್ ಗದ್ದಲ ಜೋರಾದರೆ ಅತ್ತ ದೂರದ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ಗೆ ಟೆನ್ಶನ್ ಜಾಸ್ತಿ ಆಗಿದೆ ಎನ್ನಲಾಗಿದೆ. ಸ್ಯಾಂಡಲ್ವುಡ್ ನಟ ದರ್ಶನ್ ಅವರು ಚಾರ್ಜ್ ಶೀಟ್ ಸಲ್ಲಿಕೆ ಬಗ್ಗೆ ಸ್ವಲ್ಪ ಆತಂಕಗೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಪತ್ನಿ ವಿಜಯಲಕ್ಷ್ಮಿ ಜೊತೆಗೆ ಪೋನ್ ಕಾಲ್ ಮೂಲಕ ಹತ್ತು ನಿಮಿಷಗಳ ಕಾಲ ದರ್ಶನ್ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಜೈಲಿನ ಟೆಲಿಪೋನ್ ಬೂತ್ ನಿಂದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ಪತ್ನಿಯೊಂದಿಗೆ ಚಾರ್ಜ್ ಶೀಟ್ ಕುರಿತು ಮಾತನಾಡಿದ ದರ್ಶನ್ ಚಾರ್ಜ್ ಶೀಟ್ ಬಗ್ಗೆ ಪತ್ನಿ ಬಳಿ ಮಾಹಿತಿ ಕೇಳಿದ್ದಾರೆ ಎಂದು ಹೇಳಲಾಗಿದೆ.
ಫೋನ್ ವ್ಯವಸ್ಥೆ ಬಳಸಲು ಅವಕಾಶ ಕೇಳಿದ್ದ ದರ್ಶನ್
ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ತಯಾರಾಗುತ್ತಿದ್ದಾಗಲೇ ದರ್ಶನ್ ಅವರು ಜೈಲಿನ ಅಧಿಕಾರಿಗಳಲ್ಲಿ ತನಗೆ ಫೋನ್ ಬೂತ್ ಬಳಸಲು ಅವಕಾಶ ನೀಡಬೇಕಾಗಿ ಕೇಳಿಕೊಂಡಿದ್ದರು ಎನ್ನಲಾಗಿದೆ.