ಕನ್ನಡದ ನಾಯಕಿ ನಟಿ ಚೈತ್ರಾ ಆಚಾರ್ ಬೇಸರ ಮಾಡಿಕೊಂಡಿದ್ದಾರೆ ಅನಿಸುತ್ತಿದೆ. ತಮ್ಮ ಒಂದು ಬೋಲ್ಡ್ ಫೋಟೋ ಜೊತೆಗೆ ಆ ಒಂದು ಬೇಸರ ಹೊರಗೆ ಹಾಕಿದ್ದಾರೆ. ಈ ಮೂಲಕ ತಮ್ಮ ಬೆನ್ನ ಹಿಂದೆ ಮಾತನಾಡೋರಿಗೆ ಸರಿಯಾಗಿಯೇ ಟಾಂಗ್ ಕೊಟ್ಟಂತೇನೂ ಇದೆ. ಈ ರೀತಿ ನಾನು ಬೆನ್ನು ತೋರಿಸಿದ್ರೆ ಮುಗಿತು ನೋಡಿ. ಇದರ ಬಗ್ಗೆ ಬೆನ್ನ ಹಿಂದೆ ಸಾಕಷ್ಟು ಮಾತನಾಡುತ್ತಾರೆ. ಹಾಗೆ ಈ ಒಂದು ಫೋಟೋ ಅಂತಹ ಜನರಿಗೆ ಮಾತನಾಡೋಕೆ ಒಂದು ವಿಷಯವೇ ಆಗುತ್ತದೆ ಅಂತಲೂ ಚೈತ್ರಾ ಆಚಾರ್ ಹೇಳಿದ್ದಾರೆ.
ಆದರೆ, ಚೈತ್ರಾ ಆಚಾರ್ ಯಾಕೆ ಹೀಗೆ ಹೇಳಿದ್ರು ಅನ್ನುವ ಪ್ರಶ್ನೆಗೆ ಉತ್ತರವೇ ಸಿಕ್ಕಿಲ್ಲ ಬಿಡಿ. ಇದರಿಂದ ಈ ಒಂದು ಫೋಟೋ ಕುತೂಹಲ ಹೆಚ್ಚಿಸಿದೆ. ಜೊತೆಗೆ ಸಾಕಷ್ಟು ಬೋಲ್ಡ್ ಅನ್ನುವ ಫೀಲ್ ಅನ್ನು ಕೂಡ ಈ ಒಂದು ಫೋಟೋ ಕೊಡುತ್ತಿದೆ ನೋಡಿ. ಚೈತ್ರಾ ಆಚಾರ್ ಈ ಒಂದು ಬೋಲ್ಡ್ ಫೋಟೋದಲ್ಲಿ ಬ್ಲೌಸ್ ಧರಿಸಿಲ್ಲ ಅನಿಸುತ್ತದೆ. ಮಲೆಯಾಳಿ ಹುಡುಗಿಯರು ಧರಿಸೋ ಸೀರೆಯನ್ನ ಇಲ್ಲಿ ಉಟ್ಟುಕೊಂಡಿದ್ದಾರೆ. ಹಾಗೆ ಬ್ಲೌಸ್ ಇಲ್ಲದೆ ಬೆನ್ನು ತೋರಿಸಿ ಸಖತ್ ಪೋಸ್ ಕೂಡ ಕೊಟ್ಟಿದ್ದಾರೆ. ಸದ್ಯಕ್ಕೆ ಒಂದೇ ಒಂದು ಫೋಟೋ ಹಂಚಿಕೊಂಡಿದ್ದಾರೆ.
ಆದರೆ, ಚೈತ್ರಾ ಆಚಾರ್ ಒಂದೇ ಒಂದು ಫೋಟೋವನ್ನತೆಗೆಸಿಕೊಳ್ಳುವುದಿಲ್ಲ ಬಿಡಿ. ಸಾಕಷ್ಟು ಸಲ ಸಾಕಷ್ಟು ಫೋಟೋ ಶೂಟ್ ಮಾಡಿಸಿದ್ದಾರೆ. ಒಂದಲ್ಲ ಎರಡಲ್ಲ ಸುಮಾರು ಫೋಟೋಗಳನ್ನ ಹಂಚಿಕೊಂಡಿರೊದೇ ಜಾಸ್ತಿ ಇದೆ. ಹಾಗಾಗಿ ಈ ಬೋಲ್ಡ್ ಲುಕ್‌ನ ಫೋಟೋ ಇನ್ನೂ ಇರಬೇಕು ಅನ್ನೋದೇ ಆಗಿದೆ.
ಚೈತ್ರಾ ಆಚಾರ್ ಸದ್ಯದ ಈ ಒಂದೇ ಒಂದು ಫೋಟೋ ನೋಡಿ ಸಂಯಕ್ತಾ ಹೆಗಡೆ ಶಾಕ್ ಆಗಿದ್ದಾರೆ. ಸಂಯುಕ್ತಾ ಹೆಗಡೆ ಕೂಡ ಬೋಲ್ಡ್‌ನೆಸ್‌ಗೆ ಹೆಸರಾದವ್ರೇ ನೋಡಿ. ಆದರೆ, ಚೈತ್ರಾ ಆಚಾರ್ ಹಂಚಿಕೊಂಡಿರೋ ಈ ಫೋಟೋ ನೋಡಿ ತಮ್ಮ ಅಭಿಪ್ರಾಯವನ್ನು ಕೂಡ ಬರೆದಿದ್ದಾರೆ. ಚೈತ್ರಾ ಆಚಾರ್ ಫೋಟೋ ನೋಡಿರೋ ನಟಿ ಸಂಯುಕ್ತಾ ಹೆಗಡೆ ತಮ್ಮದೇ ಶೈಲ್ಲಿಯಲ್ಲಿ ಕಾಂಪ್ಲಿಮೆಂಟ್ಸ್ ಕೊಟ್ಟಿದ್ದಾರೆ. ಅದು ಹೀಗಿದೆ ನೋಡಿ. Uffffffff I’m surely not straight! ಈ ರೀತಿ ಸಂಯುಕ್ತಾ ಹೆಗಡೆ ಬರೆದು ಕೊಂಡಿದ್ದಾರೆ. ಚೈತ್ರಾ ಆಚಾರ್ ಕನ್ನಡ ಸಿನಿಮಾಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ತಮಿಳಿನ ಎರಡು ಪ್ರೊಜೆಕ್ಟ್ ಕೂಡ ಒಪ್ಪಿಕೊಂಡಿದ್ದಾರೆ. ಸದ್ಯ ತಮಿಳು ಚಿತ್ರದ ಕೆಲಸದಲ್ಲಿಯೇ ಬ್ಯುಸಿ ಇದ್ದಾರೆ. ಕನ್ನಡದ ಉತ್ತರಕಾಂಡ ಸಿನಿಮಾದಲ್ಲೂ ನಟಿಸಿದ್ದಾರೆ. ಒಟ್ಟಾರೆ, ಚೈತ್ರಾ ಆಚಾರ್ ಸದ್ಯ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ ಅಂತಲೇ ಹೇಳಬಹುದು.