Breakup: ಬ್ರೇಕಪ್ ಆದ್ರೂ ಹುಡುಗಿಯನ್ನು ಮಿಸ್ ಮಾಡ್ಕೊಳ್ತಾ ಇದ್ದೀರಾ? ಚಿಂತೆಬಿಡಿ, ತಜ್ಞರ ಈ ಸಲಹೆ ಪಾಲಿಸಿ

public wpadmin

ಯಾವುದೋ ಒಂದು ಕಾರಣಕ್ಕೆ ಹಠಾತ್ ಆಗಿ ಆ ಸಂಬಂಧ ಮುರಿದು ಬಿದ್ದರೆ ಮನಸ್ಸಿಗೆ ಕಷ್ಟ ಅಂತ ಅನ್ನಿಸುವುದು ಸಹಜ. ಇನ್ನೂ ಎಷ್ಟೋ ಸಲ ಮದುವೆಯಾಗಿ ಎಲ್ಲವೂ ಚೆನ್ನಾಗಿಯೇ ನಡೆಯುತ್ತರುತ್ತದೆ. ಯಾವುದೋ ಒಂದು ಭಿನ್ನಾಭಿಪ್ರಾಯ ಮತ್ತು ಮನಸ್ತಾಪದಿಂದಾಗಿ ಸಂಬಂಧ ಮುರಿದು ಬೀಳುತ್ತದೆ.

ಪ್ರಸ್ತುತ ದಿನಗಳಲ್ಲಿ ಪ್ರೀತಿ ಪ್ರೇಮ ಹಾಗೂ ಬ್ರೇಕ್ ಅಪ್ ಸಾಮಾನ್ಯ ಪದವಾಗಿದೆ. ಯುವಜನತೆ ಅಂತೂ ಪ್ರೀತಿ ಪ್ರೇಮದಲ್ಲಿ ಮುಳುಗಿ ಹೋಗಿದ್ದಾರೆ. ಮಾತ್ರವಲ್ಲ ಇಂದು ನಗುನಗುತ್ತಾ ಇರುವ ಜೋಡಿ ನಾಳೆ ಬ್ರೇಕ್ ಮಾಡಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಇದು ಕೇವಲ ಲವ್ ಮಾಡುವಾಗ ಮಾತ್ರವಲ್ಲ ಮದುವೆ ಆದ ಬಳಿಕವೂ ಡಿವೋರ್ಸ್ ಕೂಡ ಸಾಮಾನ್ಯವಾಗಿದೆ.

ಸಂಬಂಧ ಅಂದ ಮೇಲೆ ಅಲ್ಲಿ ಪ್ರೀತಿ, ನಿರೀಕ್ಷೆಗಳು ಮತ್ತು ಅವಶ್ಯಕತೆಗಳು ಇದ್ದದ್ದೆ, ಈ ಮೂರು ಅಂಶಗಳಲ್ಲಿ ಯಾವುದಾದರೊಂದು ಅಂಶ ಸಹಕ್ಕೆ ಪೆಟ್ಟು ಬಿದ್ದರೆ ಸಂಬಂಧ ಹಳಿ ತಪ್ಪುವುದು ಗ್ಯಾರಂಟಿ. ಸಂಬಂಧ ಮುರಿದು ಬಿದ್ದರೆ ಹೃದಯಕ್ಕೆ ತುಂಬಾನೇ ನೋವಾಗುತ್ತದೆ. ಅದರಲ್ಲೂ ನೀವು ತುಂಬಾನೇ ಪ್ರೀತಿಸುತ್ತಿರುವ ಹುಡುಗ ಅಥವಾ ಹುಡುಗಿ ಕೈಕೊಟ್ಟರೆ. ಆ ನೋವು ನಿಮ್ಮನ್ನು ತುಂಬಾನೇ ಕಾಡುತ್ತದೆ.

ಹಲವು ವರ್ಷಗಳ ಕಾಲ ಒಬ್ಬ ವ್ಯಕ್ತಿಯ ಜೊತೆಗೆ ನೀವು ಒಳ್ಳೆಯ ಸಂಬಂಧ ಇರಿಸಿಕೊಂಡು, ಯಾವುದೋ ಒಂದು ಕಾರಣಕ್ಕೆ ಹಠಾತ್ ಆಗಿ ಆ ಸಂಬಂಧ ಮುರಿದು ಬಿದ್ದರೆ ಮನಸ್ಸಿಗೆ ಕಷ್ಟ ಅಂತ ಅನ್ನಿಸುವುದು ಸಹಜ. ಇನ್ನೂ ಎಷ್ಟೋ ಸಲ ಮದುವೆಯಾಗಿ ಎಲ್ಲವೂ ಚೆನ್ನಾಗಿಯೇ ನಡೆಯುತ್ತರುತ್ತದೆ. ಯಾವುದೋ ಒಂದು ಭಿನ್ನಾಭಿಪ್ರಾಯ ಮತ್ತು ಮನಸ್ತಾಪದಿಂದಾಗಿ ಸಂಬಂಧ ಮುರಿದು ಬೀಳುತ್ತದೆ. ಇಂತಹ ಒಂದು ಸಂಧಿಗ್ಧ ಪರಿಸ್ಥಿತಿ ವ್ಯಕ್ತಿಯ ಮನಸ್ಥಿತಿಯನ್ನು ಇನ್ನಷ್ಟು ಕುಗ್ಗಿಸುತ್ತದೆ.

ಪ್ರೀತಿ ಮಾಡುವಾಗಲೇ ಆಗಲಿ ಅಥವಾ ಮದುವೆಯ ಸಂದರ್ಭದಲ್ಲಿಯೇ ಆಗಲಿ ಒಳ್ಳೆಯ ಸಮಯಗಳು ಬರುತ್ತಲೇ ಇರುತ್ತವೆ. ಕೆಲವೊಮ್ಮೆ ಮುರಿದು ಬೀಳುವ ಸಾಧ್ಯತೆಯೂ ಇರುತ್ತದೆ. ಅಂತಹ ಸಮಯದಲ್ಲಿ ಕೆಲವರಿಗೆ ಒಂಟಿತನ ಕಾಡಲು ಪ್ರಾರಂಭಿಸುತ್ತದೆ. ಇಂಥಾ ಸಂದರ್ಭದಲ್ಲಿ ಸಂಗಾತಿ ನೆನಪು ಕಾಡದಂತೆ ಅವುಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು ಅವಶ್ಯಕ. ಹಾಗಿದ್ರೆ ಬ್ರೇಕ್ ಅಪ್ ಆದ ಬಳಿಕ ಸಂಗಾತಿಯನ್ನು ಮರೆಯಲು ಏನು ಮಾಡಬೇಕೆಂದು ಮನಶ್ಶಾಸ್ತ್ರಜ್ಞರು ನೀಡಿದ ವಿಶೇಷ ಸಲಹೆಗಳೇನು ಎಂಬುದನ್ನು ಇಲ್ಲಿವೆ ನೋಡಿ.

ಬ್ರೇಕ್ ಅಪ್ ಆದ ಬಳಿಕ ಅವರನ್ನು ಮರೆಯಲು ಮೊದಲು ನೀವು ನಿಮ್ಮ ಸಂಗಾತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಫಾಲೋ ಮಾಡುವುದನ್ನು ನಿಲ್ಲಿಸಿಬಿಡಿ. ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ಪದೇ ಪದೇ ಫಾಲೋ ಮಾಡಬೇಡಿ. ಒಮ್ಮೆಲೆ ಅನ್‌ಫಾಲೋ ಮಾಡಿ ಬಿಡಬೇಕು.

ಮನಶ್ಶಾಸ್ತ್ರಜ್ಞ ಭಾಸ್ಕರ್ ಮಿತ್ರ ಅವರು ನೀಡಿರುವ ಕೆಲವು ಸಲಹೆಗಳಲ್ಲಿ ಪ್ರಮುಖವಾಗಿ, “ನಿಮಗೆ ಬ್ರೇಕ್ ಅಥವಾ ಡಿವೋರ್ಸ್ ಆದ ಬಳಿಕವೂ ನಿಮ್ಮನ್ನು ನೀವು ಪ್ರೀತಿಸುವುದನ್ನು ಮರೆಯಬೇಡಿ. ಏಕೆಂದರೆ, ಅಂತಹ ಸಮಯದಲ್ಲಿ ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗುತ್ತದೆ

ಸಂಬಂಧದಲ್ಲಿ ಇಬ್ಬರೂ ತಪ್ಪು ಮಾಡುವುದು ಸಹಜ. ನಿಮ್ಮ ಮಾಜಿ ಪಾರ್ಟರ್ ತಪ್ಪುಗಳನ್ನು ನಿಮ್ಮಿಂದ ಕ್ಷಮಿಸಲು ಸಾಧ್ಯವಾದರೆ, ನೀವು ಸಂತೋಷದಿಂದ ಮತ್ತು ಚೆನ್ನಾಗಿ ಬದುಕಲು ಸಾಧ್ಯವಾಗುತ್ತದೆ.

ಒಂದುವೇಳೆ ನಿಮ್ಮ ಸಂಗಾತಿಯೊಂದಿಗೆ ಜೀವನ ನಡೆಸಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾದಾಗ ಬ್ರೇಕ್ ಮಾಡಿಕೊಳ್ಳಬೇಕು. ಮಾತ್ರವಲ್ಲ ನಿಮಗೆ ನೀವೆ ಧೈರ್ಯ ತೆಗೆದುಕೊಳ್ಳಬೇಕು. ಜಗತ್ತಿನಲ್ಲಿ ವಿಚ್ಛೇದನ ಪಡೆಯುವ ಲಕ್ಷಾಂತರ ಜನರಿದ್ದಾರೆ. ಆದ್ದರಿಂದ ಇದನ್ನು ಸಾಮಾನ್ಯವಾಗಿ ಸ್ವೀಕರಿಸುವುದನ್ನು ಕಲಿಯಬೇಕು ಎಂದು ಅವರು ಸಕಹೆ ನೀಡಿದ್ದಾರೆ.

Share This Article
Leave a comment