Bigg Boss Kannada: ‘ಒಬ್ಬ ಅಪ್ಪನಿಗೆ ಹುಟ್ಟಿದ್ಯಾ ಅನ್ನೋದು ಒಬ್ಬ ತಾಯಿಗೆ ಮಾಡೋ ಅಪಮಾನ!’ ಚೈತ್ರಾ ಕುಂದಾಪುರಗೆ ಕಿಚ್ಚನ ಖಡಕ್ ಕ್ಲಾಸ್

public wpadmin

ಬಿಗ್ ಬಾಸ್​ ಸೀಸನ್ 11ರ 3ನೇ ವಾರದಲ್ಲಿ ಸ್ಪರ್ಧಿಗಳ ನಡುವೆ ಮಾತಿನ ವಾರ್​ ಜೊತೆಗೆ ಕೈ ಕೈ ಮಿಲಾಯಿಸಿ ಇಬ್ಬರೂ ಸ್ಪರ್ಧಿಗಳು ಹೊರಗೆ ಹೋಗಿದ್ದಾರೆ. ಇದೀಗ ಕಿಚ್ಚ ಪಂಚಾಯಿತಿಯಲ್ಲಿ ಸುದೀಪ್​ ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚೈತ್ರಾ ಕುಂದಾಪುರ ಆಡಿದ ಮಾತಿಗೆ ಸುದೀಪ್ ಮುಂದೆ ತಲೆ ತಗ್ಗಿಸಿದ್ದಾರೆ.

  • ಬಿಗ್ ಬಾಸ್​ ಸೀಸನ್​ 11ರ 3ನೇ ವಾರ ದೊಡ್ಮನೆ ರಣರಂಗವಾಗಿ ಮಾರ್ಪಟ್ಟಿತ್ತು. ಸ್ಪರ್ಧಿಗಳ ನಡುವೆ ಮಾರಾಮಾರಿಯೇ ನಡೆದಿತ್ತು. ಮಾತಿಗೆ ಮಾತು ಬೆಳೆದು ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಹಾಗೂ ರಂಜಿತ್ ಕೈ ಕೈ ಮಿಲಾಯಿಸಿದ್ರು. ರಂಜಿತ್​, ಜಗದೀಶ್ ಅವರನ್ನು ತಳ್ಳಿದ್ರು. ಬಳಿಕ ಇಬ್ಬರನ್ನು ದೊಡ್ಮನೆಯಿಂದ ಹೊರಹಾಕಲಾಯ್ತು.
  • ಹಂಸಗೆ ಕೆಟ್ಟ ಪದ ಬಳಸಿ ಮಾತಾಡಿದ್ದಕ್ಕೆ ಜಗದೀಶ್ ಅವರನ್ನ ಮೇಲೆ ನಾರಿ ಮಣಿಯರೆಲ್ಲಾ ರೊಚ್ಚಿಗೆದ್ದು ಜಗದೀಶ್ ಅವರನ್ನು ಬಾಯಿಗೆ ಬಂದಂತೆ ಬೈದ್ರು, ಬಳಿಕ ರಂಜಿತ್, ಜಗದೀಶ್ ಅವರನ್ನು ತಳ್ಳಿ ತಪ್ಪು ಮಾಡಿದ್ರು. ಇವೆಲ್ಲಾ ವಿಚಾರಗಳ ಬಗ್ಗೆ ಪ್ರೇಕ್ಷಕರ ವಲಯದಲ್ಲೂ ಚರ್ಚೆ ನಡೆದಿತ್ತು. ಯಾವುದು ತಪ್ಪು? ಯಾವುದು ಸರಿ ಎನ್ನುವುದನ್ನು ತಿಳಿಸಲು ಇದೀಗ ಸುದೀಪ್ ಬಂದಿದ್ದಾರೆ.
  • ಈ ವಾರದ ಕಿಚ್ಚನ ಪಂಚಾಯಿತಿ ನೋಡಲು ಪ್ರೇಕ್ಷಕರು ಕಾಯ್ತಿದ್ರು. ಕಿಚ್ಚ ಸುದೀಪ್​ ತನ್ನ ಪಂಚಾಯಿತಿಯಲ್ಲಿ ಸ್ಪರ್ಧಿಗಳನ್ನೆಲ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ. ಜಗದೀಶ್ ಅವರು ಹೋಗಿದ್ದಕ್ಕೆ ಯಾರಿಗೆಲ್ಲಾ ಖುಷಿ ಇದೆ ಎಂದು ಕೇಳಿದಾಗ ಹಂಸ, ಸುರೇಶ್​ ಹಾಗೂ ತ್ರಿವಿಕ್ರಮ್ ಸೇರಿದಂತೆ ಅನೇಕರು ನಮಗೆ ಖುಷಿಯಾಯ್ತು ಎಂದ್ರು. ಹೆಣ್ಣು ಮಕ್ಕಳಿಗೆ ಬಳಸೋ ಪದ ಇರಿಸು ಮುರಿಸು ಉಂಟು ಮಾಡಿತ್ತು ಎಂದ್ರು.
  • ಜಗದೀಶ್ ಜೊತೆ ಜಗಳವಾಗುವ ಚೈತ್ರಾ ಕುಂದಾಪುರ ಕೂಡ ಕೆಟ್ಟ ಪದಗಳನ್ನು ಬಳಸಿದ್ರು. ಜಗದೀಶ್ ಅವರು ಸರಿಯಿಲ್ಲ ಅಂದ್ರಿ, ಹಾಗಾದ್ರೆ ಮನೆಯಲ್ಲಿರುವ ನೀವೆಲ್ಲರೂ ಸರಿಯಾಗಿದ್ದೀರಾ ಎಂದು ಸುದೀಪ್ ಪ್ರಶ್ನೆ ಮಾಡಿದ್ರು. ಚೈತ್ರಾ, ಮಾನಸ ಬಳಸಿದ ಕೆಟ್ಟ ಪದಗಳು ಸರೀನಾ ಎಂದು ಸುದೀಪ್ ತರಾಟೆಗೆ ತೆಗೆದುಕೊಂಡಿದ್ದಾರೆ.
  • ಜಗದೀಶ್ ಅವರು ಮನೆಯಿಂದ ಹೋಗಿದ್ದು ನನಗೆ ಖುಷಿ ಇದೆ ಎಂದು ಚೈತ್ರಾ, ಆತ ಹೆಣ್ಣು ಮಕ್ಕಳ ಬಗ್ಗೆ ಮಾತಾಡಿದ ಪದ ಸರಿಯಿಲ್ಲ ಎಂದ್ರು. ಅವರು ನನ್ನನ್ನು ಟಾರ್ಗೆಟ್ ಮಾಡಿದ್ರು. ಪರ್ಸನಲ್ ಟಾರ್ಗೆಟ್ ಮಾಡಿದ್ರು ಎಂದು ಚೈತ್ರಾ ಹೇಳಿದ್ರು. ಬಳಿಕ ಮಾತಾಡಿದ ಕಿಚ್ಚ ಸುದೀಪ್​
  • ಚೈತ್ರಾ ಕುಂದಾಪುರ ಅವರು ಜಗದೀಶ್ ಜೊತೆ ಜಗಳವಾಡುವ ಭರದಲ್ಲಿ ಬಳಸಿದ ಪದಗಳ ಬಗ್ಗೆ ಕೂಡ ಕಿಚ್ಚ ಮಾತಾಡಿದ್ರು. ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಅನ್ನೋ ಪದ ಬಳಸ್ತೀರಾ ಅದು ಸರೀನಾ, ಇದು ಯಾವ್ ನನ್ ಮಗನೂ ಅಪ್ಪನಿಗೆ ಬಾಯ್ತಿಲ್ಲ ಮೇಡಂ ತಾಯಿಗೆ ಬೈಯ್ತಿರೋದು? ಎಂದು ಸುದೀಪ್ ಚೈತ್ರಾ ಮೇಲೆ ಕೋಪಗೊಂಡ್ರು. ಸುದೀಪ್ ಮಾತು ಕೇಳಿ ಚೈತ್ರಾ ಕುಂದಾಪುರ ತಲೆ ಬಗ್ಗಿಸಿದ್ದಾರೆ.
  • ಅನುಷಾ ಅವರನ್ನು ತರಾಟೆಗೆ ತೆಗೆದುಕೊಂಡ ಕಿಚ್ಚ ಸುದೀಪ್​, ಜಗದೀಶ್ ಅನೇಕ ಬಾರಿ ನಿಮ್ಮ ಬೆಂಬಲಕ್ಕೆ ನಿಂತಿದ್ರು, ಆದ್ರೆ ನೀವು ಮಾಡಿದ್ದು ಏನು ಎಂದು ಪ್ರಶ್ನೆ ಮಾಡಿದ್ರು. ಹೌದು ನಾನು ಸಿಟ್ಟಾದಾಗ ಜಗದೀಶ್ ಅವರೇ ಕೋಪ ಮಾಡಿಕೊಳ್ಳಬೇಡ ಕೂಲ್ ಅಂದ್ರು. ಆದ್ರೆ ಜಗಳದ ಮಧ್ಯೆ ನಾನು ಹೋಗಲಿಲ್ಲ. ಅವರನ್ನು ಕೂಲ್ ಮಾಡಲು ಯತ್ನಿಸಿಲ್ಲ ಸಾರಿ ಅಂತ ಅನುಷಾ ಹೇಳಿದ್ರು.
  • ಸಾರಿ ನಮಗೆ ಬೇಡ, ನಾವು ಕೇಳೋದಿಲ್ಲ ಎಂದು ಕಿಚ್ಚ ಸುದೀಪ್​ ಹೇಳಿದ್ರು. ಜಗದೀಶ್ ಜಗಳ ಮಾಡ್ತಿದ್ದ ವೇಳೆ ನಿಮ್ಮ ಮುಖದಲ್ಲಿ ನಗು ಇತ್ತು. ನೀವು ಜಗಳ ನೋಡಿ ಎಂಜಾಯ್ ಮಾಡ್ತಿದ್ರಾ ಎಂದು ಸುದೀಪ್ ಗರಂ ಆದ್ರು. ಅನುಷಾ ಜೊತೆ ಮಾತಾಡುವಾಗ ಕೋಪಕೊಂಡ ಕಿಚ್ಚ ಸುದೀಪ್, ‘ನನ್ನ ಮಗಂದ್ ನನಗೂ ಯಾವ ಅವಶ್ಯಕತೆ ಇಲ್ಲ.. ಈ ಫೀಲ್ಡ್ ಗೆ ಹೊಸಬರು ಅಂತ ನಮ್ಮ ಮನೆಗೆ ಬರ್ತಾರೆ. ನಮಗೆ ಅವರಿಂದ ಏನು ಆಗಲ್ಲ, ಆದ್ರೂ ನಾವು ಅವರ ಕೈ ಹಿಡಿದು ಎತ್ತುವ ಪ್ರಯತ್ನ ಮಾಡ್ತೀವಿ. ಅವರ ಪರ ನಾವು ನಿಲ್ತೀವಿ. ನೀವು ನಮ್ಮ ಪರವಾಗಿರಿ ಅಂತ ಯಾವತ್ತು ಹೇಳಿಲ್ಲ ಎಂದ್ರು.
  • ಅಷ್ಟೆ ಅಲ್ಲದೇ ನಾವು ಮಾಡೋ ತಪ್ಪುಗಳನ್ನ ಬೆಂಬಲಿ ಎನ್ನುವುದಿಲ್ಲ. ಇನ್ನೊಬ್ಬರನ್ನ ಟೀಕೆ ಮಾಡುವಾಗ ನಿಂತು ತಮಾಷೆ ನೋಡಿದ್ರೆ ಅವರು ನನ್ನ ಪಾಲಿಗೆ ಸತ್ರು. ಅವರ ಮೇಲೆ ಒಂದು ಕ್ಷಣ ಖರ್ಚು ಮಾಡೋದು ಕೂಡ ನನಗೆ ವೇಸ್ಟ್ ಅನಿಸುತ್ತೆ ಎಂದು ಕಿಚ್ಚ ಸುದೀಪ್ ಕಿಡಿಕಾರಿದ್ರು.
Share This Article
Leave a comment