Bigg Boss Kannada: ಬಿಗ್‌ ಬಾಸ್‌ ಮನೆಗೆ ವೈಲ್ಡ್‌‌ ಕಾರ್ಡ್‌‌ ಎಂಟ್ರಿ ಆಯೋಗ್ತು! ದೊಡ್ಮನೆಗೆ ಕಾಲಿಡುತ್ತಲೇ ಸಿಕ್ತು ಕ್ಯಾಪ್ಟನ್‌‌‌ ಪಟ್ಟ

public wpadmin

Bigg Boss kannada: ಸಾಮಾನ್ಯವಾಗಿ ಬಿಗ್ ಬಾಸ್ ಶುರುವಾಗಿ ತಿಂಗಳ ಬಳಿಕ ವೈಲ್ಡ್ ಕಾರ್ಡ್ ಎಂಟ್ರಿ ಆಗುತ್ತದೆ. ಆದರೆ ಮನೆಯಲ್ಲಿ ಈಗಾಗಲೇ ಎರಡು ಸ್ಪರ್ಧಿಗಳು ಹೊರ ಹೋದ ಕಾರಣ ಬೇಗನೆ ವೈಲ್ಡ್‌‌ ಕಾರ್ಡ್‌‌ ಎಂಟ್ರಿ ಆಗಿದೆ.

  • ಬಿಗ್‌ ಬಾಸ್‌ ಸೀಸನ್‌11ರ ಮೊದಲ ವಾರದ ಕಿಚ್ಚನ ಪಂಚಾಯಿತ ಆಗಿದೆ. ಲಾಯರ್‌ ಜಗದೀಶ್‌ ಹಾಗೂ ರಂಜಿತ್‌ ಅವರು ಮನೆಯಿಂದ ಔಟ್‌ ಆಗರೋದು ಕನ್‌ಫರ್ಮ್‌ ಆಗಿದೆ. ಇದರ ಬೆನ್ನಲ್ಲೇ ಮೊದಲ ವೈಲ್ಡ್‌‌ ಕಾರ್ಡ್‌‌ ಎಂಟ್ರಿ ಆಗಿದೆ.
  • ಬಿಗ್‌ ಬಾಸ್‌ನ ಹೊಸ ಅಧ್ಯಾಯದಲ್ಲಿ ಮೊದಲ ವೈಲ್ಡ್‌ ಕಾರ್ಡ್‌ ಎಂಟ್ರಿ ಆಗಿದೆ. ಹನುಮಂತ ಅವರು ಎಂಟ್ರಿ ಕೊಟ್ಟಿದ್ದಾರೆ. ಹನುಮಂತ ಅವರು ಬರು ಬರುತ್ತಲೇ ಮನೆಯ ಕ್ಯಾಪ್ಟನ್‌ ಆಗಿದ್ದಾರೆ.
  • ಹನುಂತ ಅವರು ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಮನೆಯ ಸದಸ್ಯರು ಫುಲ್‌ ಖುಷಿ ಆಗಿದ್ದಾರೆ. ಹನುಮಂತ ಅವರೂ ಕೂಡ ಬರು ಬರುತ್ತಲೇ ಸಖತ್‌ ಕಾಮಿಡಿ ಮಾಡಿದ್ದಾರೆ.
  • ಜೀ ಕನ್ನಡ ವಾಹಿನಿಯ ಸರಿಗಮಪ ಸೀಸನ್-15ರ ರನ್ನರ್ ಅಪ್, ಹಾವೇರಿ ಜಿಲ್ಲೆ ಮೂಲದ ಹನುಮಂತ ಅವರು ಇದೀಗ ಬಿಗ್‌ ಬಾಸ್‌ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇದಾದ ಬಳಿಕ ಸಿಂಗರ್ ಟು ಭರ್ಜರಿ ಬ್ಯಾಚುಲರ್ಸ್ ಅಡ್ದಾಗೆ ಹನುಮ ಲಗ್ಗೆ ಇಟ್ಟಿದ್ದರು
  • ಇನ್ನು ನಿನ್ನೆಯ ಸಂಚಿಕೆಯಲ್ಲಿ ಕಿಚ್ಚ ಸುದೀಪ್‌ ಅವರು ಸ್ಪರ್ಧಿಗಳಿಗೆ ರಗಡ್‌ ಆಗಿಯೇ ಕ್ಲಾಸ್‌‌ ತೆಗೆದುಕೊಂಡಿದ್ದಾರೆ. ಹಂಸಗೆ ಕೆಟ್ಟ ಪದ ಬಳಸಿ ಮಾತಾಡಿದ್ದಕ್ಕೆ ಜಗದೀಶ್ ಅವರ ಮೇಲೆ ನಾರಿ ಮಣಿಯರೆಲ್ಲಾ ರೊಚ್ಚಿಗೆದ್ದು ಜಗದೀಶ್ ಅವರನ್ನು ಬಾಯಿಗೆ ಬಂದಂತೆ ಬೈದ್ರು, ಬಳಿಕ ರಂಜಿತ್, ಜಗದೀಶ್ ಅವರನ್ನು ತಳ್ಳಿ ತಪ್ಪು ಮಾಡಿದ್ರು. ಇವೆಲ್ಲಾ ವಿಚಾರಗಳ ಬಗ್ಗೆ ಪ್ರೇಕ್ಷಕರ ವಲಯದಲ್ಲೂ ಚರ್ಚೆ ನಡೆದಿತ್ತು. ಯಾವುದು ತಪ್ಪು? ಯಾವುದು ಸರಿ ಎನ್ನುವುದನ್ನು ಸುದೀಪ್‌ ರಗಡ್‌‌ ಆಗಿಯೇ ತಿಳಿಸಿದರು
  • ಇನ್ನು ಇಂದಿನ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಅವರು ಬರೋದು ಡೌಟ್‌ ಎನ್ನಲಾಗುತ್ತಿದೆ.
  • ಸಾಮಾನ್ಯವಾಗಿ ಬಿಗ್ ಬಾಸ್ ಶುರುವಾಗಿ ತಿಂಗಳ ಬಳಿಕ ವೈಲ್ಡ್ ಕಾರ್ಡ್ ಎಂಟ್ರಿ ಆಗುತ್ತದೆ. ಆದರೆ ಮನೆಯಲ್ಲಿ ಈಗಾಗಲೇ ಎರಡು ಸ್ಪರ್ಧಿಗಳು ಹೊರ ಹೋದ ಕಾರಣ ಬೇಗನೆ ವೈಲ್ಡ್‌‌ ಕಾರ್ಡ್‌‌ ಎಂಟ್ರಿ ಆಗಿದೆ.
  • ಇನ್ನೂ ಕೆಲವರು ಮನೆಯಲ್ಲಿ ಪದೇ ಪದೇ ಜಗಳ ಆಗುತ್ತಿದ್ದು, ಸ್ಪರ್ಧಿಗಳ ನಟವಳಿಕೆ ಮಿತಿ ಮೀರಿತ್ತು. ಹೀಗಾಗಿ ಹನುಮಂತ್‌ ಅವರನ್ನು ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.
Share This Article
Leave a comment