ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಕಿಚ್ಚ ಒಂದು ವಾರದಲ್ಲಾದ ಟಾಸ್ಕ್, ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ. ಇನ್ನು ಇಂದು ಮನೆಯಿಂದ ಯಾರು ಹೋಗ್ತಾರೆ ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಹಾಗಿದ್ರೆ ಈ ವಾರ ಬಿಗ್ಬಾಸ್ನಿಂದ ಎಲಿಮಿನೇಟ್ ಆಗೋರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
- ಬಿಗ್ಬಾಸ್ ಸೀಸನ್ 11 ಈ ಬಾರಿ ಬಹಳಷ್ಟು ಟ್ರೆಂಡಿಂಗ್ನಲ್ಲಿದೆ. ಈ ಸೀಸನ್ ಸದಾ ಒಂದಲ್ಲೊಂದು ಸುದ್ದಿಯಲ್ಲಿ ಇದ್ದೇ ಇದೆ. ಇನ್ನು ಒಂದು ವಾರಗಳ ನಂತರ ಕಿಚ್ಚ ಸುದೀಪ್ ಮತ್ತೆ ಕಮ್ ಬ್ಯಾಕ್ ಆಗಿದ್ದರು.
- ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಕಿಚ್ಚ ಒಂದು ವಾರದಲ್ಲಾದ ಟಾಸ್ಕ್, ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ. ಇನ್ನು ಇಂದು ಮನೆಯಿಂದ ಯಾರು ಹೋಗ್ತಾರೆ ಎಂಬ ಪ್ರಶ್ನೆ ಇದೀಗ ಪ್ರೇಕ್ಷಕರನ್ನ ಕಾಡುತ್ತಿದೆ.
- ಇನ್ನು ಸೋಷಿಯಲ್ ಮೀಡಿಯಾದಲ್ಲಿ ಈ ವಾರ ಯಾರು ಹೋಗ್ತಾರೆ ಎಂಬ ಫೋಟೋಗಳು ಕೂಡಾ ವೈರಲ್ ಆಗುತ್ತಿದೆ. ಮೂಲಗಳ ಪ್ರಕಾರ, ಈ ವಾರ ಬಿಗ್ಬಾಸ್ ಮನೆಯಿಂದ ಮಾನಸ ಎಲಿಮಿನೇಟ್ ಆಗುತ್ತಾರೆ ಎಂದು ಹೇಳಲಾಗುತ್ತಿದೆ.
- ಕಾಮಿಡಿ ನಟಿಯಾಗಿ ಜನಪ್ರಿಯತೆ ಪಡೆದಿದ್ದ ಮಾನಸ, ತುಕಾಲಿ ಸಂತೋಷ್ ಅವರ ಪತ್ನಿ. ಸಂತೋಷ್ ಕಾಮಿಡಿ ಕಿಲಾಡಿ ಮೂಲಕ ಭಾರೀ ಜನಪ್ರಿಯತೆ ಪಡೆದಿದ್ದರು. ಆ ನಂತರ ಮಾನಸ ಕೂಡ ಕಾಮಿಡಿ ಕಿಲಾಡಿ ಕಾರ್ಯಕ್ರಮಕ್ಕೆ ಬಂದಿದ್ದರು. ಆ ಬಳಿಕ ಸಂತೋಷ್ ಬಿಗ್ಬಾಸ್ ಶೋಗೆ ಎಂಟ್ರಿಕೊಟ್ಟಿದ್ದರು. ಆ ವೇಳೆ ಫ್ಯಾಮಿಲಿ ರೌಂಡ್ನಲ್ಲಿ ಮಾನಸ ಕೂಡ ಬಿಗ್ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದರು.
- ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರೇ, ತುಕಾಲಿ ಸಂತೋಷ್ಗಿಂತ ನೀವೇ ಬಿಗ್ಬಾಸ್ ಮನೆಗೆ ಬರಬಹುದಿತ್ತು ಎಂದು ಹೇಳಿದ್ದರು. ಅದರಂತೆ ಸೀಸನ್ 11ರಲ್ಲಿ ಮಾನಸ ಅವರನ್ನು ಸ್ಪರ್ಧಿಯಾಗಿ ಬಿಗ್ಬಾಸ್ ಕರೆಸಿದ್ದರು.
- ಇನ್ನು ಬಿಗ್ಬಾಸ್ ಮನೆಯ 5ನೇ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಮಾನಸ ಹೊರ ಹೋಗಿದ್ದಾರೆ ಎಂದು ವೈರಲ್ ಆಗುತ್ತಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಒಂದು ಟಾಸ್ಕ್ ಕೊಟ್ಟಿದ್ದಾರೆ. ಇದು ಲವ್ಲಿ ಟಾಸ್ಕ್ ಆಗಿದೆ. ಒಂದು ಕಡೆ ಉಗ್ರಂ ಮಂಜು ಇದ್ದಾರೆ. ಮತ್ತೊಂದು ಕಡೆಗೆ ಧನರಾಜ್ ಆಚಾರ್ ಇದ್ದಾರೆ. ಇವರ ನಡುವೆ ತ್ರಿವಿಕ್ರಮ್ ಇದ್ದಾರೆ. ಇಲ್ಲಿ ಉಗ್ರಂ ಮಂಜು, ಭವ್ಯ ರೋಲ್ ಮಾಡಿದ್ದಾರೆ. ಧನರಾಜ್ ಭನ್ಯಾ ಅನ್ನೋ ಮತ್ತೊಂದು ಹುಡುಗಿಯ ರೋಲ್ ಮಾಡಿದ್ದಾರೆ.
- ಇವರ ತ್ರಿಕೋನ ಪ್ರೇಮ ಕಥೆಯ ಒಟ್ಟು ಚಿತ್ರಣ ಇಲ್ಲಿದೆ. ಇದನ್ನ ತುಂಬಾನೆ ಚೆನ್ನಾಗಿಯೇ ಕಿಚ್ಚ ಸುದೀಪ್ ಎಂಜಾಯ್ ಮಾಡಿದ್ದಾರೆ. ಮನೆ ಮಂದಿ ಕೂಡ ಬಿದ್ದು ಬಿದ್ದು ನಕ್ಕಿದ್ದಾರೆ. ಆದರೆ, ಭವ್ಯ ನಾಚಿಕೊಳ್ತಿದ್ದಾರೆ. ತ್ರಿವಿಕ್ರಮ್ ಮಂದಹಾಸ ಬೀರ್ತಿದ್ದಾರೆ.