ಬಿಗ್ ಬಾಸ್ ಮನೆಯ ಮೋಕ್ಷಿತಾ ಮತ್ತು ಐಶ್ವರ್ಯ ಅಯೋಗ್ಯರಾಗಿದ್ದಾರೆ. ಮನೆಯಲ್ಲಿ ಇರಲು ಇವರು ಇಬ್ಬರೂ ಯೋಗ್ಯರೆ ಅಲ್ಲ ಅಂತ ತ್ರಿವಿಕ್ರಮ್ ಇವರ ಹೆಸರು ಸೂಚಿಸಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಿಮ್‌ಗೆ ಬಿಗ್ ಬಾಸ್ ಒಂದು ಜವಾಬ್ದಾರಿ ಕೊಟ್ಟಿದ್ರು. ಆ ಪ್ರಕಾರ ತ್ರಿವಿಕ್ರಮ್ ಇಬ್ಬರು ಸದಸ್ಯರನ್ನ ಆಯ್ಕೆ ಮಾಡಬೇಕಿತ್ತು. ಕಾರಣ, ಅವರು ಯೋಗ್ಯರಲ್ಲ ಅಂತಲೇ ತ್ರಿವಿಕ್ರಮ್ ಮನೆಯ ಇಬ್ಬರು ಮಹಿಳಾ ಸದಸ್ಯರನ್ನ ಸೆಲೆಕ್ಟ್ ಮಾಡಿದ್ದಾರೆ.
ಮನೆಯ ದಿನಸಿಗಾಗಿಯೇ ಈ ಒಂದು ಟಾಸ್ಕ್ ಅನ್ನ ಬಿಗ್ ಬಾಸ್ ಮೊದಲು ಚೈತ್ರಾಗೆ ಕೊಟ್ಟಿದ್ದರು. ಚೈತ್ರಾ ಇಲ್ಲಿ ಮನೆಯ ಇಬ್ಬರು ಸದಸ್ಯರ ಮೇಕ್ ಅಪ್ ಕಿಟ್ ಅನ್ನ ಸ್ಟೋರ್ ರೂಮ್ ಅಲ್ಲಿ ಇಡಿಸಿದರು. ಹಾಗೆ ಭವ್ಯ ಗೌಡ ಹಾಗೂ ಮೋಕ್ಷಿತಾ ಪೈ ತಮ್ಮ ಮೇಕ್ ಅಪ್ ಕಿಟ್ ಅನ್ನ ಸ್ಟೋರ್ ರೂಮ್ ಒಳಗೆ ಇಟ್ಟರು.
ಇದಾದ್ಮೇಲೆ ಬಿಗ್ ಬಾಸ್ ಕೇಳಿದಂತೆ ಚೈತ್ರಾ ಕುಂದಾಪುರ್ ಮನೆಯ ತ್ರಿವಿಕ್ರಮ್ ಹೆಸರನ್ನ ಸೂಚಿಸಿದರು. ಹಾಗೆ ತ್ರಿವಿಕ್ರಮ್ ಬಂದು ಬಿಗ್ ಬಾಸ್ ಕೇಳಿದಂತೆ ಉತ್ತರ ಕೊಟ್ಟರು. ಮನೆಯಲ್ಲಿ ಇರಲು ಯೋಗ್ಯರಲ್ಲದ ಇಬ್ಬರು ಸದಸ್ಯರ ಹೆಸರನ್ನ ತಿಳಿಸುವಂತೆ ಕೇಳಿದರು.
ಆಗಲೇ ತ್ರಿವಿಕ್ರಮ್ ಮನೆಯ ಇಬ್ಬರು ಮಹಿಳಾ ಸದಸ್ಯರ ಹೆಸರನ್ನ ಸೂಚಿಸಿದರು. ಆ ಪ್ರಕಾರ ಐಶ್ವರ್ಯ ಹಾಗೂ ಮೋಕ್ಷಿತಾ ಪೈ ಹೆಸರನ್ನ ತ್ರಿವಿಕ್ರಮ್ ಹೇಳಿದ್ರು. ಆ ಕೂಡಲೇ ಇಬ್ಬರು ಇದನ್ನ ಒಪ್ಪಿದರು. ಜಗಳಕ್ಕೆ ಏನು ಹೋಗಲಿಲ್ಲ. ತಾವು ಅಯೋಗ್ಯರು ಅನ್ನೋದನ್ನ ಒಪ್ಪಿದಂತೆ ಸುಮ್ನೆ ಆಗಿ ಬಿಟ್ಟರು.
ಇದಾದ್ಮೇಲೆ ಭವ್ಯ ಗೌಡ ಇಲ್ಲಿ ಜಗದೀಶ್ ಜೊತೆಗೆ ಜಗಳ ಮಾಡಿದ್ರು. ಜಗದೀಶ್ ಮಾತನಾಡ್ತಾ ಹೋದ್ರು. ಭವ್ಯ ಟಕ್ಕರ್ ಕೊಡ್ತಾನೇ ಹೋದ್ರು. ಉಳಿದವ್ರು ಕುಳಿತು ನೋಡ್ತಾನೇ ಇದ್ದರು. ಇದರ ಮಧ್ಯೆ ಉಗ್ರಂ ಮಂಜು ತರವೇ ಭವ್ಯ ಗೌಡ “ಯಾರು ಏನು ಮಾಡುವರು” ಅಂತಲೇ ಹಾಡ್ತಾ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದರು.