ಕನ್ನಡದ ‘ಬಿಗ್ ಬಾಸ್ ಸೀಸನ್ 11’ರ ಕಾರ್ಯಕ್ರಮದಂತೆ ತೆಲುಗಿನ ಬಿಗ್ ಬಾಸ್ ಸೀಸನ್ 8ಕ್ಕೂ ಅದ್ಧೂರಿ ಚಾಲನೆ ಸಿಕ್ಕಿದೆ. ನಾಗಾರ್ಜುನ ನಿರೂಪಣೆಯ ತೆಲುಗಿನ ಬಿಗ್ ಬಾಸ್ ಕುರಿತು ಬ್ರೇಕಿಂಗ್ ನ್ಯೂಸ್‌ವೊಂದು ಹೊರಬಿದ್ದಿದೆ. ಬಿಗ್ ಬಾಸ್‌ನಲ್ಲಿರುವಾಗಲೇ ಖ್ಯಾತ ಯೂಟ್ಯೂಬರ್ ಗಂಗವ್ವಗೆ ಹೃದಯಾಘಾತವಾಗಿದೆ ಎಂದು ವರದಿಯಾಗಿದೆ.
60 ವರ್ಷ ದಾಟಿದರೂ ಯಾವ ಸ್ಪರ್ಧಿಗಳಿಗೂ ಕಮ್ಮಿಯಿಲ್ಲ ಎಂಬಂತೆ ಟಫ್ ಫೈಟ್ ಕೊಡುತ್ತಿದ್ದ ವೈಲ್ಡ್ ಕಾರ್ಡ್ ಎಂಟ್ರಿ ಗಂಗಮ್ಮಗೆ ಸೋಮವಾರ ರಾತ್ರಿ (ಅ.21) ಹೃದಯಾಘಾತವಾಗಿದೆ ಎಂಬ ಸುದ್ದಿ ಹಬ್ಬಿದೆ. ಶೋನಲ್ಲಿರುವಾಗಲೇ ಈ ಘಟನೆ ನಡೆದಿದ್ದು, ಕೂಡಲೇ ಅವರಿಗೆ ವೈದ್ಯಕೀಯ ನೆರವು ಒದಗಿಸಲಾಗಿದೆ. ಸದ್ಯ ಅವರು ಪ್ರಾಣಪಾಯದಿಂದ ಪಾರಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ವರದಿ ಆಗಿದೆ
ಅಂದಹಾಗೆ, ‘ಮೈ ವಿಲೇಜ್ ಶೋ’ ಮೂಲಕ ಯೂಟ್ಯೂಬ್‌ನಲ್ಲಿ ಹಾಸ್ಯ ಭರಿತ ವಿಡಿಯೋಗಳಿಂದ ಖ್ಯಾತಿ ಗಳಿಸಿದ್ದ ಗಂಗವ್ವ ಈ ಹಿಂದೆ ‘ಬಿಗ್ ಬಾಸ್ ಸೀಸನ್ 4’ರಲ್ಲಿ ಕೂಡ ಸ್ಪರ್ಧಿಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದ ಅರ್ಧಕ್ಕೆ ಶೋ ತೊರೆದಿದ್ದರು. ಇದೀಗ ಮತ್ತೆ ತೆಲುಗಿನ ಸೀಸನ್ 8ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ರಂಜಿಸುತ್ತಿದ್ದಾರೆ.