Bigg Boss: ವೈಲ್ಡ್‌ ಕಾರ್ಡ್‌ ಎಂಟ್ರಿ, 2 ಬಾರಿ ಕ್ಯಾಪ್ಟನ್‌! ಹನುಮಂತಗೆ ಸಿಕ್ತು ಈ ಸೀಸನ್‌ನ ಮೊದಲ ಕಿಚ್ಚನ ಚಪ್ಪಾಳೆ!

public wpadmin

ಇದೀಗ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್‌ ಸೀಸನ್‌ 11 ರ ಕಿಚ್ಚನ ಚಪ್ಪಾಳೆ ನೀಡಿದ್ದಾರೆ. ಅದೂ ಕೂಡ ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿ ದೊಡ್ಮನೆಗೆ ಎಂಟ್ರಿಯಾಗಿದ್ದ ಸಿಂಗರ್ ಹನುಮಂತ ಅವರಿಗೆ ನೀಡಿದ್ದಾರೆ.

  • ಬಿಗ್‌ ಬಾಸ್‌ ಸೀಸನ್‌ 11ರ ಕಿಚ್ಚನ ಪಂಚಾಯಿತಿಗೆ ಮತ್ತೆ ಸುದೀಪ್‌ ಅವರು ಕಮ್‌ ಬ್ಯಾಕ್‌ ಆಗಿದ್ದಾರೆ. ತಾಯಿಯನ್ನು ನೆನೆದು ಕಿಚ್ಚ ವೇದಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ. ಆ ಬಳಿಕ ಎಂದಿನಂತೆ ಸುದೀಪ್ ತನ್ನ ಪಂಚಾಯ್ತಿ ಆರಂಭಿಸಿದ್ದಾರೆ.
  • ಇನ್ನು ಇದೀಗ ಕಿಚ್ಚ ಸುದೀಪ್‌ ಈ ವಾರದ ಪಂಚಾಯ್ತಿ ಆರಂಭಿಸಿದ್ದಾರೆ. ಈ ಎಪಿಸೋಡ್‌ನಲ್ಲಾದ ಹಲವು ವಿಚಾರದ ಬಗ್ಗೆ ಕಿಚ್ಚ ಮಾತನಾಡಿದ್ದಾರೆ. ಜೊತೆಗೆ ಟಾಸ್ಕ್, ಕ್ಯಾಪ್ಟನ್ಸಿ ಟಾಸ್ಕ್‌ ಈ ಎಲ್ಲದರ ಬಗ್ಗೆ ಹೇಳಿದ್ದಾರೆ. ಈ ವೇಳೆ ಸುದೀಪ್ ಅವರು ಚೈತ್ರಾ ಕುಂದಾಪುರ ಅವರಿಗೆ ಗುಟ್ಟೊಂದನ್ನು ಕೂಡಾ ಹೇಳಿದ್ದಾರೆ.
  • ಇನ್ನು ಕಿಚ್ಚ ಸುದೀಪ್‌ ಕಳೆದೆರಡು ಸೀಸನ್‌ಗಳಿಂದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಕಿಚ್ಚನ ಚಪ್ಪಾಳೆ ಎಂಬ ಕಾನ್ಸೆಪ್ಟ್‌ ಶುರುಮಾಡಿದ್ದರು. ಇದು ಒಂದು ವಾರದಲ್ಲಿ ಅದ್ಫುತ ಪ್ರದರ್ಶನ ನೀಡಿದ ಇಬ್ಬ ಸ್ಪರ್ಧಿಗೆ ನೀಡೋ ಗೌರವಾಗಿರುತ್ತದೆ.
  • ಆದರೆ ಬಿಗ್‌ಬಾಸ್‌ ಸೀಸನ್ 11 ಆರಂಭವಾಗಿ ಒಂದು ತಿಂಗಳಾದರೂ ಇದುವರೆಗೆ ಕಿಚ್ಚನ ಚಪ್ಪಾಳೆ ಮಾತ್ರ ಯಾರಿಗೂ ಕೊಟ್ಟಿರಲಿಲ್ಲ. ಅದೇ ರೀತಿ ಒಂದು ಎಪಿಸೋಡ್‌ನಲ್ಲಿ ಕಿಚ್ಚನ ಚಪ್ಪಾಳೆ ಯಾರಿಗೆ ಕೊಡ್ಬೇಕು ಅಂತಾನೇ ಅನಿಸುತ್ತಿಲ್ಲ ಅಂತಾನೂ ಹೇಲಿದ್ದಾರೆ.
  • ಆದರೆ ಇದೀಗ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್‌ ಸೀಸನ್‌ 11 ರ ಕಿಚ್ಚನ ಚಪ್ಪಾಳೆ ನೀಡಿದ್ದಾರೆ. ಅದೂ ಕೂಡ ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿ ದೊಡ್ಮನೆಗೆ ಎಂಟ್ರಿಯಾಗಿದ್ದ ಸಿಂಗರ್ ಹನುಮಂತ ಅವರಿಗೆ ನೀಡಿದ್ದಾರೆ.
  • ಈ ಸಂದರ್ಭದಲ್ಲಿ ಸುದೀಪ್ ಅವರು ಕಿಚ್ಚನ ಚಪ್ಪಾಳೆ ಯಾಕೆ ನೀಡುತ್ತಾರೆ ಎಂದು ಹನುಮಂತ ಅವರಿಗೆ ತಿಳಿಸಿದ್ದಾರೆ. ಸುದೀಪ್ ಅವರು, ಇಷ್ಟಪಟ್ಟವರಿಗೆ ಕೈಯಲ್ಲಿ ತಟ್ಟೋದು, ಮಿಕ್ಕಿದವರಿಗೆ ಬಾಯಲ್ಲಿ ತಟ್ಟೋದು. ಇದು ನಿಮಗೆ ಕೈಯಲ್ಲಿ ತಟ್ಟಿದ್ದು, ಬೇಷ್ ಅಂದಿದ್ದು ಎಂದು ಹೇಳಿದ್ದಾರೆ. ಆ ನಂತರ ಫೋಟೋ ಒಂದನ್ನು ಕಳುಹಿಸಿದ್ದಾರೆ.
  • ಇದು ಈ ಸೀಸನ್‌ನ ಮೊಟ್ಟ ಮೊದಲ ಕಿಚ್ಚನ ಚಪ್ಪಾಳೆಯಾಗಿದೆ. ಇನ್ನು ಹನುಮಂತ ಅವರು ಕೂಡ ಎರಡು ಬಾರಿ ಕ್ಯಾಪ್ಟನ್ ಆಗಿದ್ದಾರೆ. ಅಷ್ಟೇ ಅಲ್ಲದೇ ಈ ವಾರದ ಟಾಸ್ಕ್‌‌ಗಳಲ್ಲಿ ಹನುಮಂತ ಅವರು ಅದ್ಭುತ ಪ್ರದರ್ಶನವನ್ನೂ ನೀಡಿದ್ದರು.
Share This Article
Leave a comment