ಬಿಗ್ ಬಾಸ್ ಕನ್ನಡ ಗ್ರ್ಯಾಂಡ್ ಆಗಿ ಲಾಂಚ್ ಆಗಲು ಮೂರೇ ದಿನ ಉಳಿದಿವೆ. ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ಪ್ರೀಮಿಯರ್ ಸಂಚಿಕೆ ಸೆಪ್ಟೆಂಬರ್ 29 ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಸೆಪ್ಟೆಂಬರ್ 28 ರಂದು ‘ರಾಜಾ ರಾಣಿ’ ಗ್ರ್ಯಾಂಡ್ ಫಿನಾಲೆ ವೇಳೆ ಕೆಲ ಸ್ಪರ್ಧಿಗಳನ್ನ ರಿವೀಲ್ ಮಾಡಲಾಗುತ್ತದೆ.
ಇದೀಗ ಹೊಸ ಪ್ರೋಮೋ ಔಟ್ ಆಗಿದ್ದು, ಕೆಲ ಸ್ಪರ್ಧಿಗಳ ಫೋಟೋ ವೈರಲ್ ಆಗಿದೆ. ಕಿರಣ್ ರಾಜ್, ಹರಿಪ್ರಿಯಾ, ನಭಾ ನಟೇಶ್ ಹಾಗೇ ಇನ್ನುಳಿದ ಸ್ಪರ್ಧಿಗಳ ಫೋಟೋ ಲೀಕ್ ಆಗಿದೆ ಎನ್ನಲಾಗುತ್ತಿದೆ.
ಹೊಸ ಪ್ರೋಮೋದಲ್ಲಿ ಕೆಲ ನಟ-ನಟಿಯರ ಫೋಟೋಗಳನ್ನ ಬಳಕೆ ಮಾಡಲಾಗಿದೆ. ಪ್ರೋಮೋ ಕಂಡು ‘ಬಿಗ್ ಬಾಸ್’ ಮನೆಗೆ ಹೋಗ್ತಿರುವ ಸ್ಪರ್ಧಿಗಳು ಯಾರ್ಯಾರು ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.
ಕಿಚ್ಚ ಸುದೀಪ್ ಈ ಸಲ ಬೇರೆ ರೀತಿನೇ ಕಾಣಿಸುತ್ತಿದ್ದಾರೆ. ಇಡೀ ಶೋ ಕೂಡ ಬೇರೆ ರೀತಿನೇ ಡಿಸೈನ್ ಆಗಿದೆ. ಅದರ ಪ್ರಕಾರವೇ ಮನೆ ಕೂಡ ಎರಡಾಗಿದೆ. ಹಾಗೆ ಜನರಲ್ಲಿ ಒಂದು ಕುತೂಹಲ ಕೂಡ ಮೂಡಿಸಿದೆ.
ಕನ್ನಡತಿ’ ಸೀರಿಯಲ್ ಖ್ಯಾತಿಯ ಕಿರಣ್ ರಾಜ್, ‘ಒಲವಿನ ನಿಲ್ದಾಣ’ ಸೀರಿಯಲ್ ನಟ ಅಕ್ಷಯ್ ನಾಯಕ್, ಹರಿಪ್ರಿಯಾ, ಗೌತಮಿ ಜಾಧವ್ ,ಎಸ್ ನಾರಾಯಣ್ ಅವರ ಪುತ್ರ ಪಂಕಜ್, ಭಾವನಾ ಮೆನನ್, ಭೂಮಿಕಾ ಬಸವರಾಜ್ ಕೂಡ ಇದ್ದಾರೆ ಎಂದು ನೆಟ್ಟಿಗರು ಗೆಸ್ ಮಾಡಿದ್ದಾರೆ.
Bigg Boss ಮನೆಗೆ ಎಂಟ್ರಿ ಕೊಡೋದು ಇವರೇ ನೋಡಿ..!
Leave a comment
Leave a comment