ಕನ್ನಡದ ಅತಿ ದೊಡ್ಡ ಶೋ ಅಂದ್ರೆ ಅದು ಬಿಗ್ಬಾಸ್. ಇದೇ ಬಿಗ್ಬಾಸ್ ಸೀಸನ್ 11 ದಿನಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಅದರಲ್ಲೂ 50 ದಿನ ಪೂರೈಸಿದ ಬಿಗ್ಬಾಸ್ ಮನೆಗೆ ಹನುಮಂತನ ನಂತರ ಮತ್ತೆ ಇಬ್ಬರು ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಹೌದು, ಕನ್ನಡದ ಬಿಗ್ಬಾಸ್ 51ನೇ ದಿನಕ್ಕೆ ಕಾಲಿಟ್ಟಿದೆ.
ಇದೇ ಹೊತ್ತಲ್ಲಿ 8ನೇ ವಾರಕ್ಕೆ ಬಿಗ್ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ಬಾರಿ ಕೊಂಚ ವಿಭಿನ್ನ ರೂಪದಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. 50ನೇ ದಿನಕ್ಕೆ ಬಿಗ್ಬಾಸ್ ಮನೆಗೆ ಬಂದ ರಜತ್ ಬುಜ್ಜಿ ಹಾಗೂ ಶೋಭಾ ಶೆಟ್ಟಿ ಮುಂದೆ ಮನೆ ಮಂದಿ ನಾಮಿನೇಷನ್ ಪ್ರಕ್ರಿಯೆ ನಡೆಸಿದ್ದಾರೆ. ಹೀಗಾಗಿ ಸ್ಪರ್ಧಿಗಳು ಯಾವುದೇ ಮುಚ್ಚು ಮರೆ ಇಲ್ಲದೇ ಸರಿಯಾದ ರೀಸನ್ ಕೊಡುವ ಪ್ರಯತ್ನ ಮಾಡಿದ್ದಾರೆ.
ಇನ್ನೂ, ಮಡಿಕೆಯನ್ನು ಕೋಲಿನಿಂದ ಹೊಡೆದು ನಾಮಿನೇಟ್ ಮಾಡಬೇಕಿತು. ಅದರಂತೆ ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಂದು ನಾಮಿನೇಷನ್ಗೆ ಹೆಸರನ್ನು ತೆಗೆದುಕೊಂಡು ಮಡಿಕೆಯನ್ನು ಹೊಡೆದು ಹಾಕಿದ್ದಾರೆ. ಈಗ ರಿಲೀಸ್ ಆದ ಹೊಸ ಪ್ರೋಮೋದಲ್ಲಿ ಹನುಮಂತ ಐಶ್ವರ್ಯ ಹಾಗೂ ಧರ್ಮ ಕೀರ್ತಿರಾಜ್ ಅವರಿಗೆ ನಾಮಿನೇಟ್ ಮಾಡಿದ್ದಾರೆ. ಅದಕ್ಕೆ ಐಶ್ವರ್ಯ ವಾದ ವಿವಾದ ನಡೆಸಿದ್ದಾರೆ.
https://www.instagram.com/reel/DCjEm7hsexI/?utm_source=ig_web_copy_link
ಆಗ ಹನುಮಂತ ಮೊದಲ ದಿನ ಆಟದಲ್ಲಿದ್ದ ಆಸಕ್ತಿ ಲಾಸ್ಟ್ ಆಡದವರೆಗೂ ಇರಲಿಲ್ಲ. ಚೆನ್ನಾಗಿ ಆಡಿದ್ದೀರಾ ಅನ್ಕೋ, ಸೂಪರ್ ಆಟ ಆಡಿದ್ದೀರಿ ಅನ್ಕೋ, ಗಿಚ್ಚಿ ಗಿಲಿಗಿಲಿ ಆಡಿದ್ದೀರಾ ಅನ್ಕೋ ಆದರೆ ಮಾರ್ಕ್ಸ್ ಯಾಕೆ ಬರಲಿಲ್ಲ ಅಂತ ಕೇಳಿದ್ದಾರೆ. ಇನ್ನೊಂದು ಹಂತದಲ್ಲಿ ಮನೆಯ ಕ್ಯಾಪ್ಟನ್ ಭವ್ಯಾ ಗೌಡ ಹನುಮಂತನನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಹನುಮಂತ ಸರಿಯಾದ ರೀಸನ್ ಕೊಡೋದಿಲ್ಲ. ಹೀಗಾಗಿ ಮುಂದೆ ಹೋಗುತ್ತಾ ಹೋಗುತ್ತಾ ಅವರಿಗೆ ಈ ಮನೆಯಲ್ಲಿ ಇರೋದಕ್ಕೆ ಕಷ್ಟ ಆಗಬಹುದು ಅಂತ ಹೇಳಿ ಮಡಿಕೆ ಹೊಡೆದಿದ್ದಾರೆ.