ಬಿಗ್ ಬಾಸ್ ಸೀಸನ್ 11ರ ಅಸಲಿ ಆಟ ಈ ವಾರ ಜೋರಾಗಿದೆ. ಜಿದ್ದಿಗೆ ಬಿದ್ದ ಸ್ಪರ್ಧಿಗಳಿಂದ ಜಗಳ, ಕೂಗಾಟದಲ್ಲಿ ಮನೆ ಮತ್ತೊಮ್ಮೆ ರಣರಂಗವಾಗುತ್ತಿದೆ. ವೈಲ್ಡ್ ಕಾರ್ಡ್‌ನಲ್ಲಿ ಎಂಟ್ರಿ ಕೊಟ್ಟ ರಜತ್ ತನ್ನ ರೋಷಾವೇಶ ಪ್ರದರ್ಶಿಸುತ್ತಿದ್ದಾರೆ. ಗೋಲ್ಡ್ ಸುರೇಶ್ ಬಳಿಕ ಮಂಜು ಅವರು ಈಗ ರಜತ್ ಮೇಲೆ ತಿರುಗಿ ಬಿದ್ದಿದ್ದಾರೆ.
ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಆದ ಮೇಲೆ ಬಿಗ್ ಬಾಸ್ ಮನೆಯ ಕಾದಾಟ ರಂಗೇರಿದೆ. ಈ ವಾರ ಬಿಗ್ ಬಾಸ್ ಮನೆಯ ಸದಸ್ಯರಿಗೆ ಫಿಸಿಕಲ್ ಟಾಸ್ಕ್ ಕೊಟ್ಟಿದ್ದು ಗೆಲ್ಲೋ ಕಿಚ್ಚು ಹೆಚ್ಚಾಗಿದೆ. ಕೊಳವೆ ಮೂಲಕ ಬರುವ ಚೆಂಡನ್ನು ತೆಗೆದುಕೊಂಡು ಹೋಗುವ ಟಾಸ್ಕ್‌ನಲ್ಲಿ ಗೋಲ್ಡ್ ಸುರೇಶ್ ಹಾಗೂ ರಜತ್ ಅವರ ಮಧ್ಯೆ ಗಲಾಟೆ ನಡೆದಿತ್ತು. ರಜತ್ ಮೇಲೆ ಕೂಗಾಡಿದ ಸುರೇಶ್ ಅವರು ಬಿಗ್ ಬಾಸ್ ಮನೆ ಬಿಟ್ಟು ಹೋಗಲು ನಿರ್ಧಾರ ಮಾಡಿದ್ದರು.
ಸುರೇಶ್ ಅವರ ಬಳಿಕ ರಜತ್ ರೋಷಾವೇಶ ಮಂಜು ಅವರ ಮೇಲೆ ತಿರುಗಿದೆ. ಟಾಸ್ಕ್‌ನ ಮಧ್ಯೆ ರಜತ್ ಅವರು ನಾನು, ತ್ರಿವಿಕ್ರಮ್ ಒಂದೇ ಟೀಮ್‌ನಲ್ಲಿ ಬಿದ್ವಿ ಅಂದ್ರೆ ಎದುರಾಳಿ ತಂಡ ಸ್ವಲ್ಪ ವೀಕ್ ಆಗುತ್ತೆ ಎಂದಿದ್ದಾರೆ. ರಜತ್ ಅವರ ಈ ಮಾತು ಮಂಜು ಅವರನ್ನು ಕೆರಳುವಂತೆ ಮಾಡಿದೆ. ಯಾವ ನನ್ಮಗ ಇಲ್ಲ ಅಂತಾನೆ. ಫಿಸಿಕಲ್ ಕೊಟ್ರೆ ನಾವು ಸ್ಟ್ರಾಂಗೇ. ಜೋರಾಗಿ ಮಾತನಾಡಿದಾಗ ಉರಿ ಕಿತ್ತುಕೊಂಡು ಬಿಟ್ಟಿತು ಎಂದು ಹೇಳಿದ್ದಾರೆ.
https://twitter.com/i/status/1859167301410656598
ರಜತ್ ಅವರ ವೀಕ್ ಮಾತಿಗೆ ಮಂಜು ಇಬ್ಬರು ಒಂದೇ ಟೀಮ್‌ನಲ್ಲಿ ಇದ್ರೆ ನಾವೆಲ್ಲಾ ವೀಕ್ ಅಂತಾನ. ನಾವು ವೀಕಾ. ಇಬ್ಬರು ಒಂದೇ ಟೀಮ್‌ಗೆ ಹೋಗಿ ಗುರು. ಜೋರಾಗಿ ಮಾತಾಡಬೇಡ, ನನಗೂ ಬರುತ್ತೆ ಎಂದು ನೇರವಾಗಿ ಯುದ್ಧಕ್ಕೆ ನಿಂತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್, ಮಂಜು ಮಧ್ಯೆ ನಡೆಯುತ್ತಿದ್ದ ಫೈಟ್‌ನಲ್ಲಿ ರಜತ್ ಅವರು ಎಂಟ್ರಿಯಾಗಿದ್ದಾರೆ. ಕೊನೆಗೆ ಈ ವಾರದ ನಾಮಿನೇಷನ್‌ನಲ್ಲಿ ಯಾರು ಸ್ಟ್ರಾಂಗ್, ಯಾರು ವೀಕ್ ಅನ್ನೋದು ಗೊತ್ತಾಗಲಿದೆ.