BBK11: ಕಿಚ್ಚನ ಕೆಂಗಣ್ಣಿಗೆ ಗುರಿಯಾದ್ರಾ ಉಗ್ರಂ ಮಂಜು; ಗೆಳತಿಗೆ ಮೆಚ್ಚಿಸೋ ಕೆಲಸ ಮಾಡುತ್ತಿರೋದೇಕೆ?

public wpadmin

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11, 55ನೇ ದಿನಕ್ಕೆ ಕಾಲಿಟ್ಟಿದೆ. ಇಂದು ನಡೆದ ಸೂಪರ್ ಸಂಡೇ ವಿತ್ ಬಾದ್​ಷಾ ಸುದೀಪ ಕಾರ್ಯಕ್ರಮದಲ್ಲಿ ಉಗ್ರಂ ಮಂಜು ಸುದೀಪ್​ ಕೆಂಗಣ್ಣಿಗೆ ಗುರಿಯಾಗಿದ್ರಾ ಅಂತ ಅನುಮಾನ ಶುರುವಾಗಿದೆ.

https://www.instagram.com/reel/DCv8g4SKbZI/?utm_source=ig_web_copy_link

ಹೌದು, ಬಿಗ್​ಬಾಸ್​ ಮನೆಯಲ್ಲಿ ಗೌತಮಿ ಜಾಧವ್​ ಹಾಗೂ ಉಗ್ರಂ ಮಂಜು ಗೆಳತನ ಹೇಗಿದೆ ಅಂತ ಎಲ್ಲರಿಗೂ ಗೊತ್ತಿದೆ. ಅಲ್ಲದೇ ಯಾವುದೇ ಸಂದರ್ಭದಲ್ಲೂ ಉಗ್ರಂ ಮಂಜು ಗೆಳತಿ ಗೌತಮಿ ಜಾಧವ್​ ಅವರ ಕೈ ಬಿಡಿಲ್ಲ. ಅದು ಕೂಡ ಸಾಕಷ್ಟು ಸಂಚಿಕೆಯಲ್ಲೂ ಫ್ರೂವ್​ ಆಗಿದೆ.

ಆದರೆ ಇಂದು ನಡೆದ ಸೂಪರ್ ಸಂಡೇ ವಿತ್ ಬಾದ್​ಷಾ ಸುದೀಪ ಕಾರ್ಯಕ್ರಮದಲ್ಲಿ ಕಿಚ್ಚ ಕೇಳಿದ ಪ್ರಶ್ನೆಗೆ ಈ ಗೆಳತನ ದೂರ ಆಗುತ್ತಾ ಎಂದು ಅನಿಸುತ್ತಿದೆ. ಏಕೆಂದರೆ ಕಿಚ್ಚ ಸುದೀಪ್ ಅವರು ಗೌತಮಿ ಅವರು ಆಡಿಸಿದ ಹಾಗೇ ಆಡೋ ಕೈ ಗೊಂಬೆ ಮಂಜು ಅಂತ ಕೇಳಿದ್ದಾರೆ.

ಆಗ ಕೆಲವರು ಹೌಡಿ ಅಂತ ಹೇಳಿದ್ರೆ ಇನ್ನೂ ಕೆಲವರು ಇಲ್ಲ ಅಂತ ಹೇಳಿದ್ದಾರೆ. ಇದಾದ ಬಳಿಕ ಈ ಮನೆಯಲ್ಲಿ ಯಾರನ್ನು ನೀವು ಮೆಚ್ಚಿಸಬೇಕು ಅಂತ ಕೇಳಿದ್ದಾರೆ. ಅದಕ್ಕೆ ಮಂಜು ಗೌತಮಿಯನ್ನು ಮೆಚ್ಚಿಸಬೇಕು ಅಂತ ಹೇಳಿದ್ದಾರೆ. ಆಗ ಕಿಚ್ಚ ಸುದೀಪ್​ ಅವರು ಸಿಟ್ಟಿನಿಂದ ನೀವು ಮೆಚ್ಚಿಸಿ ಅಂತ ಹೇಳಿದ್ದಾರೆ.

Share This Article
Leave a comment