ಬಿಗ್‌ಬಾಸ್ ಸೀಸನ್ 11 ದಿನಕಳೆದಂತೆ ಕಾವೇರುತ್ತಾ ಇದ್ದು, ಈ ಸಂಡೇ ಮೆಗಾ ಟ್ವಿಸ್ಟ್‌ಗೆ ಸಾಕ್ಷಿಯಾಗಲಿದೆ. ಹೌದು, ತ್ರಿವಿಕ್ರಮ್ ವಿರುದ್ಧ ಮಹಿಳಾ ಸದಸ್ಯರು ತಿರುಗಿಬಿದ್ದಿದ್ದು, ಪ್ರತಿಯೊಬ್ಬರ ಮಾತು ಬಾಣದಂತೆ ಚುಚ್ಚಿದೆ.
https://www.instagram.com/reel/DCvIrZWIoow/?igsh=MW50YzNreWJ3ZGYycA==
ಸೂಪರ್ ಸಂಡೇ ವಿಥ್ ಬಾದ್ ಷಾ ಶೋನಲ್ಲಿ ಸುದೀಪ್ ಬಿಗ್ ಬಾಸ್ ಮನೆಯ ಸದಸ್ಯರಿಗೆ ಒಂದು ಸ್ಪೆಷಲ್ ಟಾಸ್ಕ್ ನೀಡಿದ್ದಾರೆ. ಗಾದೆ ಮಾತುಗಳು ಬಿಗ್ ಬಾಸ್ ಮನೆಯಲ್ಲಿ ಯಾರಿಗೂ ಸೂಟ್ ಆಗುತ್ತೆ ಅವರ ಕುತ್ತಿಗೆಗೆ ಹಾಕಬೇಕು ಅನ್ನೋ ಆಟದಲ್ಲಿ ಬಿಗ್ ಬಾಸ್ ಮನೆಯಲ್ಲಿರುವವರ ಮನದ ಕಿಚ್ಚು ಹೊರಗೆ ಬಂದಿದೆ.
ಗಾದೆ ಮಾತುಗಳ ಈ ಗುದ್ದಾಟದಲ್ಲಿ ಎಲ್ಲರಿಗಿಂತ ಮುಖ್ಯವಾಗಿ ತ್ರಿವಿಕ್ರಮ್ ಅವರನ್ನೇ ಟಾರ್ಗೆಟ್ ಮಾಡಲಾಗಿದೆ. ತ್ರಿವಿಕ್ರಮ್‌ಗೆ ಚೈತ್ರಾ ಕುಂದಾಪುರ ಅವರು ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ. ಇವರು ಹಾವನ್ನ ಹೂ ಅಂತ ಒಪ್ಪಿಸುತ್ತಾರೆ. ತುಂಬಾ ಅನಾಚಾರಗಳು ಮುಂದಿನ ದಿನಗಳಲ್ಲಿ ಹೊರಗೆ ಬರ್ತಾವೆ ಸರ್ ಎಂದು ಭವಿಷ್ಯ ನುಡಿದಿದ್ದಾರೆ.
ಚೈತ್ರಾ, ಮೋಕ್ಷಿತಾ, ಶೋಭಾ ಅವರ ಮಾತುಗಳು ತ್ರಿವಿಕ್ರಮ್ ಅವರನ್ನ ಕೆರಳುವಂತೆ ಮಾಡಿದೆ. ಗಾದೆ ಮಾತುಗಳಿಗೆ ತಿರುಗೇಟು ಕೊಟ್ಟ ತ್ರಿವಿಕ್ರಮ್ ಅವರು ಬಿಗ್ ಬಾಸ್ ಮನೆಯಲ್ಲಿ ಮಣ್ಣಿನ ಗೊಂಬೆ, ಕೀಲಿ ಗೊಂಬೆಗಳು ತುಂಬಾ ಇದೆ. ಇಷ್ಟು ದಿನ ಅವರು ಏನ್ ಮಾಡ್ತಾರೋ ಓಕೆ ಅಂದುಕೊಂಡು ಸುಮ್ನೆ ಇದ್ದೆ. ಇನ್ನು ಆಗಲ್ಲ ಸಾರ್ ಎಂದು ಕಿಚ್ಚ ಸುದೀಪ್ ಅವರಿಗೆ ನೇರವಾಗಿ ಹೇಳಿದ್ದಾರೆ.