ಕಿರುತೆರೆಯ ಜನಪ್ರಿಯ ‘ಅಗ್ನಿಸಾಕ್ಷಿ’ (Agnisakshi) ಸೀರಿಯಲ್ನಲ್ಲಿ ತನು ಪಾತ್ರದ ಮೂಲಕ ಗಮನ ಸೆಳೆದಿದ್ದ ಶೋಭಾ ಶೆಟ್ಟಿ ಆ ನಂತರ ತೆಲುಗು ಕಿರುತೆರೆಯತ್ತ ಮುಖ ಮಾಡಿದರು. ‘ಬಿಗ್ ಬಾಸ್ ತೆಲುಗು 7’ರಲ್ಲಿ ರಂಜಿಸಿದ್ದ ನಟಿ ಇದೀಗ ಮತ್ತೆ ಕನ್ನಡದ ಬಿಗ್ ಬಾಸ್ 11ರಲ್ಲಿ ಫೈರ್ ಲೇಡಿಯಾಗಿ ಅಬ್ಬರಿಸುತ್ತಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿರುವ ಶೋಭಾ ಅವರ ಅಸಲಿ ಮುಖ ಅನಾವರಣ ಆಗಿದೆ.
ಶೋಭಾ ಶೆಟ್ಟಿ (Shobha Shetty) ‘ಬಿಗ್ ಬಾಸ್’ನಲ್ಲಿ ಅವರು ಯಾವಾಗಲೂ ಅಗ್ರೆಸ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಈಗ ಭಾವನಾತ್ಮಕ ಮುಖವನ್ನು ತೋರಿಸಿದ್ದಾರೆ. ಕುಟುಂಬಸ್ಥರನ್ನು ನೆನೆದು ನಟಿ ಕಣ್ಣೀರಿಟ್ಟಿದ್ದಾರೆ. ಕೆಲಸಗಳ ಕಾರಣಕ್ಕೆ ಕಳೆದ 10 ವರ್ಷಗಳಲ್ಲಿ ನಾನು ಕುಟುಂಬಕ್ಕೆ ಹೆಚ್ಚು ಟೈಮ್ ನೀಡೋಕೆ ಆಗಿಲ್ಲ. ನಾನು ಕುಟುಂಬದ ಜೊತೆ ಸಾಕಷ್ಟು ಕನೆಕ್ಟ್ ಆಗಿದ್ದೇನೆ. ನನ್ನ ಮೊದಲ ಆದ್ಯತೆ ಕುಟುಂಬ ಎಂದು ಶೋಭಾ ಭಾವುಕರಾದರು.
ಸೆಟ್ನಲ್ಲಿ ಫ್ಯಾಮಿಲಿಗೆ ಸಂಬಂಧಿಸಿದ ದೃಶ್ಯ ನಡೆದರೆ ಅದು ನನಗೆ ಕನೆಕ್ಟ್ ಆಗುತ್ತದೆ. ಬೇರೆ ಭಾಷೆಯಲ್ಲಿ ನಾವು ಹೋಗಿ ಕೆಲಸ ಮಾಡಬೇಕು ಎಂದರೆ ಅದು ಅಷ್ಟು ಸುಲಭ ಅಲ್ಲ. ನಾನು ಪ್ರತಿ ಕ್ಷಣ ಕುಟುಂಬದವರನ್ನು ಮಿಸ್ ಮಾಡಿಕೊಳ್ಳುತ್ತಲೇ ಇರುತ್ತೇನೆ ಎಂದಿದ್ದಾರೆ ಶೋಭಾ. ಶೋಭಾ ಶೆಟ್ಟಿ ಇದನ್ನು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಅವರು ಅಳುತ್ತಿರುವುದನ್ನು ನೋಡಿ ಅನೇಕರು ಅಚ್ಚರಿ ಹೊರಹಾಕಿದ್ದಾರೆ. ಶೋಭಾಗೆ ಹೀಗೊಂದು ಮುಖ ಇದೆಯೇ ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ.
ಅಂದಹಾಗೆ, ಶೋಭಾ ಅವರು ‘ಕಾರ್ತಿಕ ದೀಪಂ’ ಸೀರಿಯಲ್ನಲ್ಲಿ ನಟಿಸಿದರು. ತಮ್ಮ ಮನೋಜ್ಞ ನಟನೆಯ ಮೂಲಕ ತೆಲುಗು ಪ್ರೇಕ್ಷಕರಿಗೆ ನಟಿ ಹತ್ತಿರವಾಗಿದ್ದಾರೆ.