Amrutha Iyengar: 26 ವರ್ಷಗಳಿಂದ ನನ್ನ ತಾಯಿ ನನ್ನ ತಂದೆ ಮುಖ ನೋಡಿಲ್ಲ!

public wpadmin

‘ಲವ್ ಮಾಕ್ಟೇಲ್’, ‘ಪಾಪ್‌ಕಾರ್ನ್‌ ಮಂಕ ಟೈಗರ್’, ‘ಬಡವ ರಾಸ್ಕಲ್’ ರೀತಿಯ ಸೂಪರ್ ಹಿಟ್
ಸಿನಿಮಾಗಳಲ್ಲಿ ನಟಿಸಿ ಗೆದ್ದವರು ಅಮೃತಾ ಅಯ್ಯಂಗಾರ್. ಕಳೆದ ವರ್ಷ ‘ಅಬ್ಬಬ್ಬಾ’ಹಾಗೂ ‘ಜೀಬ್ರಾ’
ಚಿತ್ರಗಳಲ್ಲಿ ನಟಿಸಿ ಗೆದ್ದಿದ್ದರು. ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಪಾಕ್‌ಕಾಸ್ಟರ್‌ನಲ್ಲಿ
ಅಮೃತಾ ಭಾಗಿ ಆಗಿದ್ದಾರೆ.

ಸೇರಿದಂತೆ ಸಾಕಷ್ಟು ವಿಚಾರಗಳನ್ನು ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮುಖ್ಯವಾಗಿ
ತಮ್ಮ ಬಾಲ್ಯ, ತಂದೆ- ತಾಯಿ ದೂರಾಗಿದ್ದು ಸಿಂಗಲ್ ಪೇರೆಂಟಿಂಗ್‌ನಲ್ಲಿ
ಬೆಳೆದಿದ್ದು ಹೀಗೆ ಸಾಕಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ತಂದೆ- ತಾಯಿ ದೂರಾಗಿದ್ದು ಯಾಕೆ? ತಾಯಿ
ಒಬ್ಬೊಂಟಿಯಾಗಿ ತನ್ನನ್ನು ಸಾಕಿ ಸಲಹಿದ ಬಗ್ಗೆಯೂ ಅಮೃತಾಮಾತನಾಡಿದ್ದಾರೆ..

“ನಮ್ಮ ತಾಯಿಯನ್ನು ಅವರ ಸ್ನೇಹಿತೆಯರೆಲ್ಲಾ ಡಾನ್ ಎಂದು ಕರೆಯುತ್ತಾರೆ. ಅವರು ಅಷ್ಟು ಸ್ಟ್ರಾಂಗ್
ಇಂಡಿಪೆಂಡೆಂಟ್ ವುಮೆನ್. ಅವರಿಗಿಂತ ನನಗೆ ಬೇರೆ ಸ್ಫೂರ್ತಿ ಬೇಡ. ನಾನು ಸಿಂಗಲ್ ಪೇರೆಂಟ್ ಕಿಡ್. 19
ವರ್ಷದಿಂದ ಅಮ್ಮ ದುಡಿಯಲು ಆರಂಭಿಸಿದರು. ನಮ್ಮ ತಂದೆ ಇನ್ನು ಬದುಕಿದ್ದಾರೆ. ಆದರೆ ನಮ್ಮೊಟ್ಟಿಗೆ
ಇಲ್ಲ. ಮದುವೆಯಾದ ಕೆಲ ವರ್ಷಗಳಿಗೆ ಇಬ್ಬರೂ ದೂರಾದರು. 26 ವರ್ಷಗಳಿಂದ ನಮ್ಮ ತಾಯಿ ನಮ್ಮ
ತಂದೆ ಮುಖ ನೋಡಿಲ್ಲ” ಎಂದು ಅಮೃತಾ ಹೇಳಿದ್ದಾರೆ.

“ನಮ್ಮ ತಾಯಿ ಒಂದು ನಿರ್ಧಾರ ತೆಗೆದುಕೊಂಡರೆ ಮುಗೀತು. ಅದನ್ನು ಬದಲಾಯಿಸಲ್ಲ. ನನ್ನ ತಂದೆ-
ತಾಯಿ ದೂರಾದಾಗ ನನಗೆ 5 ವರ್ಷ ವಯಸ್ಸು. ನಾನು ಇತ್ತೀಚಿನ ವರ್ಷಗಳಲ್ಲಿ ನಮ್ಮ ತಂದೆ ಭೇಟಿ
ಮಾಡ್ತೀನಿ, ಫೋನ್‌ನಲ್ಲಿ ಮಾತನಾಡ್ತೀನಿ. ನನಗೂ ನಿಮ್ಮ ತಂದೆಗೂ ಸಮಸ್ಯೆ, ನಿನಗೂ ಅವರಿಗೂ ಏನು
ಇಲ್ಲ, ಹೋಗು ಮಾತಾಡು ಅಂತಾರೆ. ಇವತ್ತಿಗೂ ಒಂದೊಂದು ರೂಪಾಯಿ ಉಳಿಸುತ್ತಾರೆ. ಇಬ್ಬರೂ
ತಂಗೀರು, ಮೂವರು ತಮ್ಮಂದಿರ ಮದುವೆ ಮಾಡಿದ್ದಾರೆ. ತನ್ನ ಜೀವನವನ್ನು ನನಗೆ ಅರ್ಪಿಸಿಬಿಟ್ಟಿದ್ದಾರೆ”
ಎಂದು ತಾಯಿ ಬಗ್ಗೆ ಮನದಾಳದ ಮಾತುಗಳನ್ನು ಅಮೃತಾ ತೆರೆದಿಟ್ಟಿದ್ದಾರೆ.

Share This Article
Leave a comment